Ad Widget

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಪದಾಧಿಕಾರಿಗಳ ಆಯ್ಕೆ

ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ‌‌ ಸಂಘದ 2025-2028ನೇ ಸಾಲಿನ ಆಡಳಿತ ಸಮಿತಿ ಸದಸ್ಯರ ಪ್ರಥಮ ಸಭೆ ಸಂಘದ ಅಧ್ಯಕ್ಷರಾದ ಪಿ.ಬಿ ಸುಧಾಕರ್ ರೈಯವರ ಅಧ್ಯಕ್ಷತೆಯಲ್ಲಿ ಅರಂಬೂರಿನ ಹೋಟೆಲ್ ರಸಪಾಕ ಗ್ರ್ಯಾಂಡ್ ನಲ್ಲಿ ಜರುಗಿತು.
2025-2028ನೇ ಸಾಲಿನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಪಿ.ಬಿ.ಸುಧಾಕರ್ ರೈ ನೆಟ್ ಕಾಂ, ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಜನತಾ ಗ್ರೂಪ್ಸ್, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಭಗವತಿ, ಖಜಾಂಜಿಯಾಗಿ ಹೇಮಂತ್ ಕುಮಾರ್ ಕರ್ನಾಟಕ ಪ್ಲೈವುಡ್ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಸಿಎ.ಗಣೇಶ್ ಭಟ್, ಪ್ರಭಾಕರನ್ ನಾಯರ್, ಮಂಜುನಾಥ್ ರೈ,ಆದಂ ಕಮ್ಮಾಡಿ, ಡಿ.ಎಸ್.ಗಿರೀಶ್, ಜತೆ ಕಾರ್ಯದರ್ಶಿಯಾಗಿ ಜಗನ್ನಾಥ ರೈ ಪಿ, ಅಬ್ದುಲ್ ರೆಹಮಾನ್.
ನಿರ್ದೇಶಕರುಗಳಾಗಿ ಎಂ.ಸುಂದರೇಶ್ ಭಟ್, ಎಂ.ಸುಂದರ್ ರಾವ್, ಶ್ಯಾಮ್ ಪ್ರಸಾದ್ ಎ.ಡಿ, ಅಬ್ದುಲ್ಲಾಹ್ ಕಟ್ಟೆಕ್ಕಾರ್ಸ್, ಸಾಂಗ್ ಸಿಂಗ್, ಅಬ್ದುಲ್ ಮಜೀದ್, ಇಬ್ರಾಹಿಂ ಕದಿಕಡ್ಕ, ಕಸ್ತೂರಿ ಶಂಕರ್, ಪ್ರಭಾಕರ ಬಿ.ಪಿ, ವಿನಯ ಕುಮಾರ್ ಕಂದಡ್ಕ ಆಯ್ಕೆಯಾದರು.
ಅಧ್ಯಕ್ಷತೆ ವಹಿಸಿದ್ದ ಪಿ.ಬಿ ಸುಧಾಕರ್ ರೈಯವರು ಮಾತನಾಡಿ “ಸುದೀರ್ಘ ಹದಿನಾಲ್ಕು ವರ್ಷದ ಅವಧಿಗೆ ವರ್ತಕರ ಸಂಘದ ಉಪಾಧ್ಯಕ್ಷನಾಗಿ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಎಲ್ಲರಿಗೂ ಧನ್ಯವಾದಗಳು,ನನ್ನ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಂಘಕ್ಕೆ ನಿವೇಶನ ಮಾಡಿ ರೂ 60 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ, ಭೋಜನ ಹಾಲ್ ನಿರ್ಮಾಣ ಸಾಧ್ಯವಾಗಿದೆ. ಸಂಘಕ್ಕೆ 400 ಅಜೀವ ಸದಸ್ಯರನ್ನು ಸೇರ್ಪಡೆಗೊಳಿಸಿರುತ್ತೇನೆ. ಬಹುತೇಕ ಎಲ್ಲಾ ಸಾರ್ವಜನಿಕ ಇಲಾಖೆಯ ಸಭೆಗಳಲ್ಲೂ ಭಾಗವಹಿಸಿ ವರ್ತಕರ ಪರ ಧ್ವನಿ ಎತ್ತಿರುತ್ತೇನೆ. ಮುಂದೆಯು ಎಲ್ಲರೂ ಸದಸ್ಯರಾಗಿ ಸಂಘವನ್ನು ಬಲಪಡಿಸಬೇಕಾಗಿದೆ” ಎಂದು ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading