Ad Widget

ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಸಚಿವರಿಗೆ ಮನವಿ

ಸುಳ್ಯ ವಿಧಾನಸಭಾ ಕ್ಷೇತ್ರ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಅರಂತೋಡು-ತೊಡಿಕಾನ – ಪಟ್ಟಿ-ಭಾಗಮಂಡಲ ರಸ್ತೆ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡುವಂತೆ ಅರಣ್ಯ ಮತ್ತು ಪರಿಸರ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರಿಗೆ ಶಾಸಕಿ ಭಾಗೀರಥಿ ಮುರುಳ್ಯ ಮನವಿ ನೀಡಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅರಂತೋಡು ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ,  ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಜತೆಗಿದ್ದರು.
ಈ ರಸ್ತೆಯ ಅಭಿವೃದ್ಧಿ ಬಗ್ಗೆ ಸರಕಾರದಿಂದ 2013-14ನೇ ಸಾಲಿನಲ್ಲಿ ರೂ 5.0 ಕೋಟಿ ಮಂಜೂರುಗೊಂಡಿರುತ್ತದೆ. ಆದರೆ ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಹೊಂದಾಣಿಕೆಯ ಕೊರತೆಯಿಂದಾಗಿ ಸದ್ರಿ ಅನುದಾನವನ್ನು ಅನುಷ್ಠಾನಗೊಳಿಸಲು ಸಾಧ್ಯವಾಗದೇ ಈ ಬೃಹತ್ ಯೋಜನೆಯು ನೆನೆಗುದಿಗೆ ಬಿದ್ದಿರುತ್ತದೆ. ಈ ರಸ್ತೆಯು ಅಭಿವೃದ್ಧಿಯಾದಲ್ಲಿ ಪವಿತ್ರಕ್ಷೇತ್ರವಾದ ತೊಡಿಕಾನ, ಭಾಗಮಂಡಲ, ತಲಕಾವೇರಿ ಕ್ಷೇತ್ರಗಳ ಸಂಪರ್ಕಿಸುವ ಅತೀ ಸಮೀಪದ ರಸ್ತೆಯಾಗಿರುತ್ತದೆ. ಈ ರಸ್ತೆಯು ಅಭಿವೃದ್ಧಿಯಾದಲ್ಲಿ ಅರಂತೋಡಿನಿಂದ ಭಾಗಮಂಡಲಕ್ಕೆ 68 ಕಿ.ಮೀ ಬದಲು ಕೇವಲ 25 ಕಿ.ಮೀ. ಆಗಲಿದೆ. ಇದರಿಂದ ವಾಹನ ದಟ್ಟಣೆ, ಇಂಧನ ಉಳಿತಾಯ ಹಾಗೂ ಸಮಯದ ಉಳಿತಾಯವಾಗುವ ಏಕೈಕ ರಸ್ತೆಯಾಗಿದೆ. ಅಲ್ಲದೇ ಭೂಕುಸಿತ ಮುಂತಾದ ಪ್ರಾಕೃತಿಕ ಸಂದರ್ಭದಲ್ಲಿ ಮತ್ತು ತುರ್ತು ವೈದ್ಯಕೀಯ ಸಂದರ್ಭದಲ್ಲಿ ಹಾಗೂ ಮಾಣಿ ಮೈಸೂರು ಚತುಷ್ಪತಗೊಳ್ಳುವ ಸಂದರ್ಭದಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಪರ್ಯಾಯ ರಸ್ತೆಯಾಗಿದೆ. ರಸ್ತೆಯ ಅಭಿವೃದ್ಧಿಯಲ್ಲಿ ಆಗಿರುವ ತೊಡಕುಗಳನ್ನು ನಿವಾರಿಸಿ ತೊಡಿಕಾನ ಪಟ್ಟಿ ರಸ್ತೆಯನ್ನು(9 ಕಿ.ಮೀ) ಅಭಿವೃದ್ಧಿಪಡಿಸಲು  ಅನುಮತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading