Ad Widget

ಗುತ್ತಿಗಾರು : ಇಂಪಾರ್ಟೆಂಟ್ ಎಫ್.ಸಿ ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ

ಇಂಪಾರ್ಟೆಂಟ್ ಎಫ್‌ಸಿ(ರಿ.) ಗುತ್ತಿಗಾರು ವತಿಯಿಂದ “ಪಂಚಸಪ್ತತಿ ಸ್ವಚ್ಛತಾ ಕಾರ್ಯಕ್ರಮ” ಕ್ಕೆ ಅ.10 ರಂದು ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮವನ್ನು ಐ.ಎಫ್‌.ಸಿ ಪ್ರಧಾನ ಕಾರ್ಯದರ್ಶಿ ಆಶ್ಲೇಷ್ ಕೆಡಿ ಅವರು ಉದ್ಘಾಟಿಸಿದರು.
ಐ.ಎಫ್‌‌.ಸಿ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರು ಕೌಶಿಕ್ ಶ್ಯಾಮ್ ಮತ್ತು ಶ್ರಿಶರಣ್ ಮೊಗ್ರ, ಮೋನಿಶ್ ಬಾಕಿಲ, ಕಾರ್ಯದರ್ಶಿಗಳು ಕಿರಣ್ ವಳಲಂಬೆ, ನಿರ್ದೇಶಕರು ಅಮಿತ್ ನಾಯಕ್ ಹಾಗೂ ಸದಸ್ಯರು ವೃಶಾಂಕ, ನಂದನ್ ಪವಿತ್ರಮಜಲು ಮತ್ತು ಚಂದ್ರಶೇಖರ ಕಡೋಡಿ ಉಪಸ್ಥಿತರಿದ್ದರು.
ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆ ಕುರಿತ ಜಾಗೃತಿ ಮೂಡಿಸಲು ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. ಪಂಚಸಪ್ತತಿ ಸ್ವಚ್ಛತಾ ಅಭಿಯಾನದ ಅಂಗವಾಗಿ ಮುಂದಿನ 75 ದಿನಗಳ ಕಾಲ ವಿವಿಧ ಸ್ವಚ್ಛತಾ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading