Ad Widget

ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ – ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್ ಭೇಟಿ

ಧರ್ಮಸ್ಥಳದ ಪಾಂಗಾಳ ನಿವಾಸಿ ದಿ.ಚಂದಪ್ಪ ಗೌಡ ಹಾಗೂ ಕುಸುಮಾವತಿ ದಂಪತಿಗಳ ಪುತ್ರಿ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನೈಜ ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ಅವಳ ಆತ್ಮಕ್ಕೆ ನ್ಯಾಯ ದೊರಕಿ ಶಾಂತಿ ಸಿಗಲೆಂದು ಹಾಗೂ ಈಗಾಗಲೇ ಸರಕಾರ ರಚಿಸಿದ ಎಸ್.ಐ.ಟಿ ತನಿಖೆ ಪಾರದರ್ಶಕವಾಗಿ ನಡೆಯುವಂತೆ ಮತ್ತು ಸೌಜನ್ಯ ಹೋರಾಟಗಾರ ನಾಯಕರಾದ ಮಹೇಶ್ ಶೆಟ್ಟಿ ತಿಮರೋಡಿ ರವರ ವಿರುದ್ಧ ತೇಜೋವಧೆ ನಡೆಸಿ ಜೈಲಿಗಟ್ಟುವ ಹುನ್ನಾರಗಳು ಅಂತ್ಯವಾಗುವ ಮೂಲಕ ನ್ಯಾಯಯುತ ಹೋರಾಟಕ್ಕೆ ಗೆಲುವಾಗುವಂತೆ ಪ್ರಾರ್ಥಿಸಿ ಅಕ್ಟೋಬರ್ 09  ಗುರುವಾರದಂದು ಪೂರ್ವಾಹ್ನ 11 ಗಂಟೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಹೋರಾಟದ ಪ್ರಮುಖ ನಾಯಕತ್ವ ವಹಿಸಿರುವ ಮಹೇಶ್ ತಿಮರೋಡಿ ಅವರ ಜೊತೆಗಾರರಾಗಿರುವ ಮಾಜಿ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್, ರವೀಂದ್ರ ಶೆಟ್ಟಿ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಬೆಳ್ತಂಗಡಿ ಅಧ್ಯಕ್ಷ ಅನಿಲ್ ಕುಮಾರ್, ಚಂದ್ರಾ ಕೋಲ್ಚಾರ್, ಎನ್.ಟಿ ವಸಂತ್, ಪಿ.ಲೋಲಜಾಕ್ಷ, ರಾಘವ ಅರ್ನೋಜಿ, ನೀಲಪ್ಪ ಪೈಕ, ಭರತ್ ಕನ್ನಡ್ಕ, ದುಷ್ಯಂತ್ ಶೀರಡ್ಕ, ಧರ್ಮಪಾಲ ಅಡ್ಡನಪಾರೆ, ಸತ್ಯನಾರಾಯಣ ಬಟ್ಟೋಡಿ ಹಾಗೂ ತೀರ್ಥರಾಮ ಉಳುವಾರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading