Ad Widget

ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಇಂದು (ಅ.09) ಚೆನ್ನಕೇಶವ ದೇವಸ್ಥಾನದಲ್ಲಿ ಪ್ರಾರ್ಥನೆ – ಸೌಜನ್ಯ ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಪ್ರಸನ್ನ ರವಿ ಭೇಟಿ

ಧರ್ಮಸ್ಥಳದ ಪಾಂಗಾಳ ನಿವಾಸಿ ದಿ.ಚಂದಪ್ಪ ಗೌಡ ಕುಸುಮಾವತಿ ದಂಪತಿ ಪುತ್ರಿ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಭೀಕರ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಅಪರಾಧಿಗಳ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕು ಹಾಗೂ ಅವಳ ಆತ್ಮಕ್ಕೆ ನ್ಯಾಯ ದೊರಕಿ ಶಾಂತಿ ಸಿಗಲೆಂದು,  ಈಗಾಗಲೇ ಸರಕಾರ ರಚಿಸಿದ ಎಸ್.ಐ.ಟಿ ತನಿಖೆ ಪಾರದರ್ಶಕ ನಡೆಯುವಂತೆ ಮತ್ತು ಸೌಜನ್ಯ ಹೋರಾಟಗಾರ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ತೇಜೋವಧೆ ನಡೆಸಿ ಜೈಲಿಗಟ್ಟುವ ಹುನ್ನಾರಗಳು ಅಂತ್ಯವಾಗುವ ಮೂಲಕ ನ್ಯಾಯಯುತ ಹೋರಾಟಕ್ಕೆ ಗೆಲುವಾಗುವಂತೆ ಪ್ರಾರ್ಥಿಸಿ ಅಕ್ಟೋಬರ್ 09  ಗುರುವಾರದಂದು ಪೂರ್ವಾಹ್ನ 11 ಗಂಟೆಗೆ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ.
ಈ ಹೋರಾಟದ ಪ್ರಮುಖ ನಾಯಕತ್ವ ವಹಿಸಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ಜೊತೆಗಾರರಾಗಿರುವ ಮಾಜಿ ಪೋಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣವರ್ ಹಾಗೂ ಪ್ರಮುಖ ಮಹಿಳಾ ಹೋರಾಟಗಾರ್ತಿ ಪ್ರಸನ್ನ ರವಿ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಬೆಳ್ತಂಗಡಿ ಅಧ್ಯಕ್ಷ  ಅನಿಲ್ ಕುಮಾರ್ ವಿಶೇಷ ಪ್ರಾರ್ಥನೆ ಸಂದರ್ಭ ಉಪಸ್ಥಿತರಿರುವರು.
ತಾಲೂಕಿನ ಸೌಜನ್ಯ ನ್ಯಾಯಕ್ಕಾಗಿ ನಿರೀಕ್ಷೆಯಲ್ಲಿರುವ ಹೋರಾಟಗಾರರು, ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸುಳ್ಯ ತಾಲೂಕಿನ ವಿವಿಧ ಸೌಜನ್ಯ ಹೋರಾಟ ಸಮಿತಿಯ ಪ್ರಮುಖರು ವಿನಂತಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading