Ad Widget

ಕೆ.ವಿ.ಜಿ.ಪಾಲಿಟೆಕ್ನಿಕ್ : ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್(ರಿ.) ವತಿಯಿಂದ ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ  ರವರ ಜನ್ಮ ದಿನಾಚರಣೆ

ಸುಳ್ಯದ ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.) ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಕೆವಿಜಿ ಪಾಲಿಟೆಕ್ನಿಕ್ ನ ಎನ್.ಎಸ್.ಎಸ್ ಘಟಕ ಹಾಗೂ ಸ.ಉ.ಹಿ.ಪ್ರಾ ಶಾಲೆ ಕಾಂತಮಂಗಲ ಇವುಗಳ ಸಹಯೋಗದೊಂದಿಗೆ ಕಾಂತಮಂಗಲ ಶಾಲೆಯಲ್ಲಿ  ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ  ಜಯಂತಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವ ಸಲಹೆಗಾರ ಎನ್.ಆರ್ ಗಣೇಶ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ.ನಿತಿನ್ ಪ್ರಭು, ಡಾ.ವೀಣಾ ಪಾಲಚಂದ್ರ, ಸತ್ಯನಾರಾಯಣ ಪ್ರಸಾದ್, ಚಂದ್ರಶೇಖರ ಬಿಳಿನೆಲೆ, ಡಾ| ಅನುರಾಧಾ ಕುರುಂಜಿ, ಮನಮೋಹನ್ ಪುತ್ತಿಲ, ಪಾಲಚಂದ್ರ, ಸೇವಾ ಸಂಗಮದ ಪ್ರಧಾನ ಕಾರ್ಯದರ್ಶಿ ವಿಶ್ವಕಿರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸೇವಾ ಸಂಗಮದ ವತಿಯಿಂದ ಅಕ್ಷರ ದಾಸೋಹ ಕೊಠಡಿಗೆ   ಮಾಡಲಾದ ವೈಯರಿಂಗ್  ಕಾರ್ಯವನ್ನು ಅತಿಥಿಗಳಿಂದ  ಉದ್ಘಾಟಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಸ್ವರ್ಣಲತಾ ಅವರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಸುಜಿತ್ ಎಂ.ಎಸ್ ವಂದಿಸಿದರು.
ಎನ್.ಎಸ್.ಎಸ್ ಸ್ವಯಂ ಸೇವಕಿ ದೀಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸೇವಾ ಸಂಗಮದ ಪದಾಧಿಕಾರಿಗಳಾದ  ಯಶವಂತ್ ಜಯನಗರ, ಸೌಜನ್ಯ ಕುತ್ಯಾಳ, ಸುಶಾಂತ್ ಅಜ್ಜಿಕಲ್ಲು, ಜೀವನ್ ರಾಜ್, ಭವ್ಯಶ್ರೀ, ಭವಿಷ್ಯತ್, ಲೋಹಿತ್ ರೆಂಜಳ, ಅಶ್ವಿತ್,ವೀಕ್ಷಿತ್, ಮನ್ವಿತ್ ಹಾಗೂ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading