Ad Widget

ಸುಬ್ರಹ್ಮಣ್ಯ : ಅ.09 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಸಭೆ

“ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಟಿಂಗ್ ಆಗದ ಜಾಗಗಳನ್ನು, ಕಾಡಿನ ಅಂಚಿನಲ್ಲಿರುವ ರೈತರ ಭೂಮಿಗಳನ್ನು ಆರ್.ಟಿ.ಸಿ ಯಲ್ಲಿ ಭಾಗಶಃ ಅರಣ್ಯ ಎಂದು ನಮೂದಿಸಿ ನೂರಾರು ವರ್ಷಗಳಿಂದ ಹಕ್ಕುಪತ್ರ ಪಡೆದು ಕೃಷಿ, ಮನೆ ಹಾಗೂ ನಿವೇಶನ ಇದ್ದರೂ ಕೋರ್ಟ್ ಗೆ ಅರಣ್ಯ ಇಲಾಖೆ ತನ್ನದೇ ಆದ ಸೃಷ್ಟಿ ಮಾಡಿದ ದಾಖಲೆಗಳನ್ನು ನೀಡಿ ಒಕ್ಕಲೆಬ್ಬಿಸುವ ಕಾರ್ಯ ಚಟುವಟಿಕೆಯಲ್ಲಿ ಅರಣ್ಯ ಇಲಾಖೆಯು ತೊಡಗಿಸಿಕೊಂಡಿರುವುದು ಈಗಾಗಲೇ ಕೃಷಿಕರ ಗಮನಕ್ಕೆ ಬಂದಿರುತ್ತದೆ. ಈಗಲೇ ತಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 75% ಭೂಮಿಯನ್ನು ಕೃಷಿಕರು ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಮಲೆನಾಡು ಜನಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆಗೆ ಪರಿಸರ ಸಂರಕ್ಷಣೆಯ ನೆಪದಲ್ಲಿ ಕೃಷಿಕರಿಗೆ ತೊಂದರೆ ಆಗುವಂತೆ ಬರುವ ಅಭಯಾರಣ್ಯ ಕಾನೂನುಗಳ ವಿರುದ್ಧ ಎಲ್ಲಾ ರೈತರನ್ನು ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಒಟ್ಟು ಸೇರಿಸಿ ಹೋರಾಟ ನಡೆಸಿ ಅದನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ಸುರಕ್ಷಿತ ಅರಣ್ಯದ ವಿಸ್ತರಣೆಯ ನೆಪದಲ್ಲಿ ಅರಣ್ಯ ಇಲಾಖೆಯು ಕೃಷಿಕರನ್ನು ಒಕ್ಕಲೆಬ್ಬಿಸುವ ಪ್ರಯತ್ನದಲ್ಲಿದೆ. ಈ ನಿಟ್ಟಿನಲ್ಲಿ ರೈತರ ರಕ್ಷಣೆಗಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯು ಜನಪ್ರತಿನಿಧಿಗಳನ್ನು, ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳನ್ನು, ಧಾರ್ಮಿಕ ಮುಖಂಡರುಗಳನ್ನು ಹಾಗೂ ಕೃಷಿಕರನ್ನು ಸೇರಿಸಿಕೊಂಡು ಮುಂದಿನ ದಿನಗಳಲ್ಲಿ ರೈತರ ರಕ್ಷಣೆಗೆ ಹೋರಾಟದ ರೂಪುರೇಷೆಗಳನ್ನು ನಿರ್ಧರಿಸಲು ಅಕ್ಟೋಬರ್ 09 ಗುರುವಾರದಂದು ಬೆಳಿಗ್ಗೆ 10:30ಕ್ಕೆ ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬಳಿ ಸಭೆಯನ್ನು ಕರೆಯಲಾಗಿದೆ” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading