Ad Widget

ನಾಳೆ(ಅ.02) ಬೆಳ್ಳಾರೆಯಲ್ಲಿ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವ

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ಇದರ ವತಿಯಿಂದ 38ನೇ ವರುಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.02ರಂದು ಬೆಳ್ಳಾರೆ ಮೇಲಿನ ಪೇಟೆ ಅಚಲಾಪುರ ಕಟ್ಟೆಯಲ್ಲಿ ಜರುಗಲಿದೆ.
ಬೆಳಿಗ್ಗೆ ಘಂಟೆ 10:00ರಿಂದ ಸಂಜೆ 4:00ರ ವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ‌ ಕಾರ್ಯಕ್ರಮ ನಡೆಯಲಿದೆ.
ಸಂಜೆ 4:00 ಘಂಟೆಯಿಂದ 6:00ರ ವರೆಗೆ ವಾಹನ ಪೂಜೆ ನಡೆಯಲಿದೆ.
ಸಂಜೆ 6:00ರಿಂದ ಕಲರ್ಸ್ ಕನ್ನಡ ಖ್ಯಾತಿಯ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತುಳುನಾಡ ಗಾನಗಂಧರ್ವ ಬಿರುದಾಂಕಿತ ಜಗದೀಶ್ ಆಚಾರ್ಯ ಪುತ್ತೂರು ಇವರಿಂದ ಸಂಗೀತ ಗಾನ ಸಂಭ್ರಮ  ಜರುಗಲಿದೆ.
ರಾತ್ರಿ 9:00ರಿಂದ ಶೋಭಾಯಾತ್ರೆಯಲ್ಲಿ ಫ್ರೆಂಡ್ಸ್ ಟೈಗರ್ಸ್ ಬೆಳ್ಳಾರೆ ವತಿಯಿಂದ 9ನೇ ವರುಷದ ಹುಲಿವೇಷ ಕುಣಿತ ಸಾಗಿ ಬರಲಿದೆ.
ಶ್ರೀ ಗೋಪಾಲಕೃಷ್ಣ ಗೊಂಬೆ ಬಳಗ ಇವರ ಗೊಂಬೆ ಕುಣಿತ ಪ್ರದರ್ಶನ ನಡೆದು ಬರಲಿದೆ.
ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ಬ್ಯಾಂಡ್ ವಾದ್ಯಗಳೊಂದಿಗೆ ವಿವಿಧ ಆಕರ್ಷಣೀಯ ನೃತ್ಯಗಳೊಂದಿಗೆ ವೈಭವದ ಶೋಭಾಯಾತ್ರೆ ನಡೆಯಲಿದೆ.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading