Ad Widget

ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಆಲಂಕಾರು
ನೂತನ ಬೆಳ್ಳಾರೆ ಶಾಖೆಯ ಉದ್ಘಾಟನೆ

ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಆಲಂಕಾರು ಇದರ ಬ್ಯಾಂಕಿಂಗ್ ವ್ಯವಹಾರದ ನೂತನ 5ನೇ ಶಾಖೆ ಬೆಳ್ಳಾರೆಯು ಶ್ರೀ ದೇವಿ ಹೈಟ್ಸ್ನಲ್ಲಿ ಸೆ.28 ರಂದು ಪೂರ್ವಾಹ್ನ ಉದ್ಘಾಟನೆಗೊಂಡಿತು.
ಬೆಳಗ್ಗೆ 7:30ಕ್ಕೆ ಶ್ರೀ ಮಹಾಗಣಪತಿ ಹವನ ,ಲಕ್ಷ್ಮಿ ಪೂಜೆ, ಮಂಗಳಾರತಿ ನಡೆಯಿತು.
ಸಭಾಕಾರ್ಯಕ್ರಮವು ದೇವಿ ಹೈಟ್ಸ್ ವಠಾರದಲ್ಲಿ ಪೂ. 10:00ಕ್ಕೆ ನಡೆಯಿತು.
ಮೂರ್ತೆದಾರರ ಸೇವಾ ಸಹಕಾರ ಸಂಘ.ನಿ ಆಲಂಕಾರು ಇದರ ಅಧ್ಯಕ್ಷರಾದ ಎನ್.ಮುತ್ತಪ್ಪ ಪೂಜಾರಿ ನೈಯಲ್ಗ ಸ್ವಾಗತಿಸಿದರು.
ಮೂರ್ತೆದಾರರ ಸೇವಾ ಸಹಕಾರ ಸಂಘ ಆಲಂಕಾರು ಇದರ ನಿರ್ದೇಶಕರಾದ ಸಂತೋಷ್ ಕುಮಾರ್ ಮತ್ರಾಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಈ ಶಾಖೆಯ ಭದ್ರತಾ ಕೋಶದ ಉದ್ಘಾಟನೆಯನ್ನು ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಬಿ.ಸಿ ರೋಡ್ ಇದರ ಅಧ್ಯಕ್ಷರಾದ ಸಂಜೀವ ಪೂಜಾರಿ ನೆರವೇರಿಸಿದರು.
ಗಣಕಯಂತ್ರ ಉದ್ಘಾಟನೆಯನ್ನು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು.
ನೂತನ ಶಾಖಾ ಕಛೇರಿ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ವಿಜಯಕುಮಾರ್ ಕುಮಾರ್ ಸೊರಕೆ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಮೂರ್ತೆದಾರರ ಸೇವಾ ಸಹಕಾರ ಸಂಘ(ನಿ.) ಆಲಂಕಾರು ಇದರ ಅಧ್ಯಕ್ಷರಾದ ಎನ್.ಮುತ್ತಪ್ಪ ಪೂಜಾರಿ ನೈಯಲ್ಗ ವಹಿಸಿದ್ದರು.
ಕರ್ನಾಟಕ ಸರಕಾದ ಮಾಜಿ ನಗರಾಭಿವೃದ್ಧಿ ಸಚಿವರಾದ ವಿನಯಕುಮಾರ್ ಸೊರಕೆಯವರು ಪ್ರಧಾನ ಅತಿಥಿಯಾಗಿ ಆಗಮಿಸಿದ್ದರು.
ನೂತನ ಕಛೇರಿಯಲ್ಲಿ ದೀಪೋಜ್ವಲನವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ.ಎಲ್ ರೈ ನೇರವೇರಿಸಿದರು.
ನಿರಖು ಠೇವಣಿ ಪತ್ರ ಬಿಡುಗಡೆಯನ್ನು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಆರ್.ಕೆ ಭಟ್ ಕುರುಂಬುಡೇಲು ನೆರವೇರಿಸಿದರು.
ಸಭಾ ಕಾರ್ಯಕ್ರಮ ಉದ್ಘಾಟನೆಯನ್ನು ಮೂರ್ತೆದಾರರ ಸೇವಾ ಸಹಕಾರ ಸಂಘ ನಿಯಮಿತ ಆಲಂಕಾರು ಇದರ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಆಲಂಕಾರು ನೆರವೇರಿಸಿದರು.
ಉಳಿತಾಯ ಖಾತೆ ಪುಸ್ತಕ ಬಿಡುಗಡೆಯನ್ನು ದ.ಕ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ಹೆಚ್.ಎನ್ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯದ ಮಾಜಿ ಉಪತಹಶೀಲ್ದಾರರಾದ ಎ.ಜನಾರ್ಧನ ಅಲೆಕ್ಕಾಡಿ, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಕಟ್ಟಡ ಮಾಲಕರಾದ ರೋ. ನವೀನ್ ರೈ ತಂಬಿನಮಕ್ಕಿ ಉಪಸ್ಥಿತರಿದ್ದರು.
ಗೌರವ ಉಪಸ್ಥಿತರಾಗಿ ಮೂರ್ತೆದಾರರ ನೂತನ ಬೆಳ್ಳಾರೆ ಶಾಖಾ ಸಲಹಾ ಸಮಿತಿ ಅಧ್ಯಕ್ಷರಾದ ಜಗನ್ನಾಥ ಪೂಜಾರಿ ಮುಕ್ಕೂರು, ಮೂರ್ತೆದಾರರ ಸೇವಾ ಸಹಕಾರ ಸಂಘ ಆಲಂಕಾರು ಇದರ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ಕರ್ಕೇರ ಮತ್ರಾಡಿ, ಯುವವಾಹಿನಿ(ರಿ.)ಸುಳ್ಯ ಘಟಕದ ಅಧ್ಯಕ್ಷರಾದ ಹರೀಶ್ ಉಪ್ಪಂಗಳ, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷರಾದ ರಾಜೇಶ್ ಶ್ಯಾನ್ಭೋಗ್ ಮಣಿಕ್ಕರ, ಬೆಳ್ಳಾರೆ ಮೇಲಿನ ಪೇಟೆ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ಸುರೇಶ್ ಕುಮಾರ್ ಪೆರುವಾಜೆ, ಬೆಳ್ಳಾರೆ ಕೆಳಗಿನ ಪೇಟೆ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷರಾದ ರಾಮಚಂದ್ರ.ಪಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೂರ್ತೆದಾರರ ಸೇವಾ ಸಹಕಾರ ಸಂಘ ಆಲಂಕಾರು ಇದರ ಉಪಾಧ್ಯಕ್ಷರಾದ ಜನಾರ್ಧನ ಕದ್ರ ಧನ್ಯವಾದ ಸಲ್ಲಿಸಿದರು.

ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading