Ad Widget

ಅರಂತೋಡು : “ಮಾದಕ ವ್ಯಸನ ವಸ್ತು ಮುಕ್ತ ಕರ್ನಾಟಕ” ಅಭಿಯಾನದ ಜಾಗೃತಿ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗ, ಅರಂತೋಡು ಗ್ರಾಮ ಪಂಚಾಯತ್ ಹಾಗೂ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟ ಅರಂತೋಡು ಇವುಗಳ ಸಂಯುಕ್ತಾಶ್ರಯದಲ್ಲಿ ಸೆ.29ನೇ ಸೋಮವಾರದಂದು ಅರಂತೋಡಿನಲ್ಲಿ “ಮಾದಕ ವ್ಯಸನ ವಸ್ತು ಮುಕ್ತ ಕರ್ನಾಟಕ” ಅಭಿಯಾನದ ಜಾಗೃತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ “ಸಮಾಜಕಾರ್ಯವು ಉತ್ತಮ ಕೋರ್ಸ್ ಆಗಿದ್ದು ಇದು ಸಮಾಜಮುಖಿ ಕಾರ್ಯವನ್ನು ಮಾಡುತ್ತ ಬರುತ್ತಿದೆ” ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ರುದ್ರಕುಮಾರ್.ಎಂ.ಎಂ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ “ಯಾವುದೇ ಬದಲಾವಣೆಯು ತನ್ನಿಂದಲೇ ಆರಂಭವಾಗಬೇಕು ಆಗ ಮಾತ್ರ ಮಾದಕ ವ್ಯಸನ ಮುಕ್ತ ಭಾರತವನ್ನು ಕಟ್ಟಬಹುದು” ಎಂದು ಹೇಳಿದರು.
ಗೌರವ ಉಪಸ್ಥಿತರಾಗಿ ಆಗಮಿಸಿದ ಸುಳ್ಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸರ್ವಶಿಕ್ಷಣ ಕರ್ನಾಟಕ ವೃತ್ತಿ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚಕರಾದ ಶ್ರೀಮತಿ ಕೃಪಾ.ಎ.ಎನ್ ಕಾರ್ಯಕ್ರಮವನ್ನು ಉದ್ದೇಶಿಸಿ “ಪೋಷಕರ ಪಾತ್ರ ಬಹುಮುಖ್ಯ ಮತ್ತು ಶಾಲಾ ಮಕ್ಕಳಿಗೆ ಜಾಗೃತಿ ಮೂಡಿಸುವುದು ಗಮನಾರ್ಹವಾಗಿದೆ, ನಾವೆಲ್ಲರೂ ಒಂದುಗೂಡಿ ಜಾಗೃತಿಯನ್ನು ಮೂಡಿಸಬೇಕು” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ನೆಹರೂ ಮೆಮೋರಿಯಲ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಶೋಭಾ.ಎ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಶ್ರೀ ದುರ್ಗಾಮಾತಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪುಷ್ಪಲತಾ, ಸುಳ್ಯ ತಾಲೂಕು ಪಂಚಾಯತ್ ಕಾರ್ಯಕ್ರಮ ವ್ಯವಸ್ಥಾಪಕರಾದ ಎನ್.ಆರ್.ಎಲ್.ಎಂ ಶ್ರೀಮತಿ ಶ್ವೇತಾ ಹಾಗೂ ಬಿ.ಆರ್.ಪಿ-ಪಿ.ಆರ್.ಐ ಶ್ರೀಮತಿ ಜಯಲಕ್ಷ್ಮಿ ಉಪಸ್ಥಿತರಿದ್ದರು.
ಎಂ.ಬಿ.ಕೆ ಸುಮತಿಯವರು ಸ್ವಾಗತಿಸಿ, ನಿಶ್ಚಿತಾ ಧನ್ಯವಾದ ಸಮರ್ಪಿಸಿದರು. ಜಶ್ವಂತ್.ಎ.ಡಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ನಿಶ್ಚಿತಾ, ಜಶ್ವಂತ್.ಎ.ಡಿ, ಪ್ರೀತಿಕಾ.ಟಿ, ಸಾಥ್ವಿಕ್ ಕೆ.ವಿ, ಪ್ರಮಿತ, ಅಕ್ಷತಾ.ಕೆ.ವಿ, ಪೂಜಿತ್.ಬಿ, ಜಿತೇಶ್.ಎನ್.ಆರ್, ಆಕಾಶ್ ಗರುಗುಂಜಾ ಹಾಗೂ ಅರ್ಪಿತಾ.ಎ “ಮಾದಕ ವ್ಯಸನ ವಸ್ತು ಮುಕ್ತ ಕರ್ನಾಟಕ ಅಭಿಯಾನ”ದ ಅಡಿಯಲ್ಲಿ ಬೀದಿ ನಾಟಕವನ್ನು ಪ್ರದರ್ಶಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading