Ad Widget

ಬೆಳ್ಳಾರೆ : ಸಮಸ್ತ ಪ್ರಾರ್ಥನಾ ದಿನ

ಬೆಳ್ಳಾರೆಯ ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸದಲ್ಲಿ ಸಮಸ್ತ ಪ್ರಾರ್ಥನಾ ದಿನವನ್ನು ಸೆ 28ರಂದು ಬೆಳಿಗ್ಗೆ ಆಚರಿಸಲಾಯಿತು.
ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಮುದರ್ರಿಸ್ ಮತ್ತು ಖತೀಬ್ ಬಹು:ನಸೀಹ್ ದಾರಿಮಿಯವರು ಪ್ರಾರ್ಥನೆಗೆ ನೇತೃತ್ವ ನೀಡಿ ಕಾರ್ಯಕ್ರಮ ಉದ್ಘಾಟಿಸಿದರು.
ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಆಡಳಿತ ಕಮಿಟಿ ಅಧ್ಯಕ್ಷ ಯು.ಹೆಚ್ ಅಬೂಬಖರ್ ಅಧ್ಯಕ್ಷತೆ ವಹಿಸಿದ್ದರು.
ಪುತ್ತೂರಿನ ಕಲ್ಲೇಗ ಜುಮುಅ: ಮಸೀದಿಯ ಖತೀಬ್ ಹಸನ್ ಅರ್ಷದಿ ಬೆಳ್ಳಾರೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಹಯರ್ ಸೆಖೆಂಡರಿ ಮದರಸದ ಮುಖ್ಯೋಪಾಧ್ಯಾಯ ಮುಹಮ್ಮದ್ ನವವಿ ಮುಂಡೋಳೆ ವಿಷಯ ಮಂಡನೆ ಮಾಡಿದರು.
ಸಮಸ್ತ ತಹಿಯ್ಯ ಫಂಡ್ ಸಂಗ್ರಹ ಮತ್ತು ಸಮ್ಮೇಳನದ ಕ್ಯಾಂಪ್ ನೋಂದಾವಣೆಗೆ ಚಾಲನೆ ನಡೆಯಿತು.
ವೇದಿಕೆಯಲ್ಲಿ ಬೆಳ್ಳಾರೆ ಝಕರಿಯ ಜುಮುಅ: ಮಸೀದಿ ಆಡಳಿತ ಕಮಿಟಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ,
ಬೆಳ್ಳಾರೆ ಮಸೀದಿ ಆಡಳಿತ ಕಮಿಟಿ ಪ್ರಧಾನ ಕಾರ್ಯದರ್ಶಿ ಬಶೀರ್ ಕಲ್ಲಪನೆ,ಕಮಿಟಿ ಸದಸ್ಯ ಉಸ್ಮಾನ್ ಹಾಜಿ ಬಾಯಂಬಾಡಿ,ಬೆಳ್ಳಾರೆ ಮಸೀದಿಯ
ಆಡಳಿತ ಕಮಿಟಿ ಸದಸ್ಯರು,ಉದ್ಯಮಿ ಹಾಜಿ ಮಮ್ಮಾಲಿ ಬೆಳ್ಳಾರೆ,ಮದರಸದ ಶಿಕ್ಷಕ,ರಕ್ಷಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸದ ಅಧ್ಯಾಪಕರು, ಬೆಳ್ಳಾರೆ ಮಸೀದಿ ದರ್ಸಿನ ಮುತಅಲ್ಲಿಮರು ಉಪಸ್ಥಿತಿಯಲ್ಲಿದ್ದರು.
ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಹೈಯರ್ ಸೆಖೆಂಡರಿ ಮದರಸದ ಮುಅಲ್ಲಿಂ ಶಾಕಿರ್ ಫೈಝಿ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು.

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading