Ad Widget

ಸೆ.29 ಹಾಗೂ 30 ರಂದು ಸುಬ್ರಹ್ಮಣ್ಯದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಸುಬ್ರಹ್ಮಣ್ಯ : ಗ್ರಾಮ ಪಂಚಾಯತ್ ಸುಬ್ರಹ್ಮಣ್ಯ ಹಾಗೂ ಭಾರತೀಯ ಅಂಚೆ ಇಲಾಖೆಯ ಜಂಟಿ ಆಶ್ರಯದಲ್ಲಿ ಸೆ.29 ಹಾಗೂ ಸೆ.30 ರಂದು ಬೃಹತ್ ಉಚಿತ ಆಧಾರ್ ನೋಂದಣಿ, ತಿದ್ದುಪಡಿ, ಆರೋಗ್ಯ ವಿಮೆ ಹಾಗೂ ಅಪಘಾತ ವಿಮಾ ನೋಂದಣಿ ಶಿಬಿರವು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ನ ರಾಜೀವ್ ಗಾಂಧಿ ಸೇವಾ ಸಭಾಭವನದಲ್ಲಿ ಬೆಳಿಗ್ಗೆ 9:00 ಗಂಟೆಯಿಂದ ಸಂಜೆ 4:00...

ಸುಳ್ಯ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ವಿವಿಧೆಡೆ ಸರ್ವರ್ ಪ್ರಾಬ್ಲಂ – ಸಾರ್ವಜನಿಕರು ಹಾಗೂ ಸಮೀಕ್ಷೆದಾರರ ಪರದಾಟ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 7ನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸುಳ್ಯದ ವಿವಿಧೆಡೆ ಸರ್ವರ್ ಸಮಸ್ಯೆಯಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ಈಗಾಗಲೇ ಶಿಕ್ಷಕರು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದು, ತಾಂತ್ರಿಕ ಕಾರಣಗಳಿಂದ ಆ್ಯಪ್ ಕಾರ್ಯನಿರ್ವಹಿಸದೆ ಪ್ರತಿದಿನದ ಸಮೀಕ್ಷೆ ಕುಂಠಿತವಾಗುತ್ತಿದೆ. ಇಂದಿನಿಂದ ಗ್ರಾಮ ಪಂಚಾಯಿತಿಗಳ ಮೂಲಕವೂ...
Ad Widget

ಡೀಮ್ಡ್ ಅರಣ್ಯ ಜಮೀನು ಸರ್ವೇಗೆ ರೈತರ ವಿರೋಧ ; “ಅಧಿಕಾರಿ ವರ್ಗದಿಂದ ಕೃಷಿ ವಿರೋಧಿ ನೀತಿ-ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸರ್ವೇ ನಿಲ್ಲಿಸಬೇಕು” : ಕಿಶೋರ್ ಶಿರಾಡಿ

“ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡದೆ ಡೀಮ್ಡ್ ಅರಣ್ಯ ಜಮೀನಿನ ಜಂಟಿ ಸರ್ವೇಗೆ ಮುಂದಾಗಿರುವ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸರ್ವೇ ಇಲಾಖೆಯ ಅಧಿಕಾರಿಗಳ ಧೋರಣೆ ರೈತ ವಿರೋಧಿಯಾಗಿದೆ” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದರು.ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಸ್ಥಳೀಯಾಡಳಿತ ಮತ್ತು...

ನಿರಂತರ ಮಳೆಯ ನಡುವೆ ಕುಕ್ಕೆಯಲ್ಲಿ ಜನಸಾಗರ

ಸುಬ್ರಹ್ಮಣ್ಯ ಸೆಪ್ಟಂಬರ್ 28 : ನವರಾತ್ರಿ ಆರಂಭವಾದ ಹಿಂದೆಯಿಂದ ನಿರಂತರವಾಗಿ ಕುಕ್ಕೆಯಲ್ಲಿ ಮಳೆ ಸುರಿಯುತ್ತಿದ್ದರೂ ಕೂಡ ರವಿವಾರ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದ ದೃಶ್ಯ ಕಂಡು ಬಂತು. ಶ್ರೀದೇವಳದ ಅಂಗಣದಲ್ಲಿ ಭಕ್ತರ ಜನಜಂಗುಳಿ ಕಂಡು ಬಂತು. ಹಾಗೆಯೇ ವಾಹನಗಳ ಪಾರ್ಕಿಂಗ್ ಸ್ಥಳಗಳೆಲ್ಲವೂ ಪೂರ್ತಿಯಾಗಿದ್ದವು. ಶ್ರೀ ದೇವಳದ...

ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಎಂ.ಪಿ.ಯು ಅರಂತೋಡು ಕಾಲೇಜಿನ 17ನೇ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ

ಅರಂತೋಡು : ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 17ನೇ ವಿಶೇಷ ವಾರ್ಷಿಕ ಶಿಬಿರ ಚೆಂಬು ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು."ನಶಾ ಮುಕ್ತ ಭಾರತ ಅಭಿಯಾನ" ಘೋಷವಾಕ್ಯದಡಿಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಸ್ಥಳೀಯ ಪ್ರಗತಿಪರ ಕೃಷಿಕರಾದ ಶ್ರೀ ಚಂದ್ರಶೇಖರ್ ಹೊಸೂರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಚೆಂಬು...

ಕಾಸರಗೋಡು ದಸರಾ ಕವಿಗೋಷ್ಠಿಯಲ್ಲಿ ಎಂ.ಎ.ಮುಸ್ತಫಾ ಬೆಳ್ಳಾರೆ ಕವನ ವಾಚನ

ಕೇರಳ ರಾಜ್ಯದ ಕಾಸರಗೋಡಿನ ಪಾಂಗಾಳ ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ದುರ್ಗಾಂಬಾ ವೇದಿಕೆಯಲ್ಲಿ ಸುಪ್ರಸಿದ್ಧ ಕವಿ ಡಾ. ಸುರೇಶ್ ನೆಗಳಗುಳಿ ಅಧ್ಯಕ್ಷತೆಯಲ್ಲಿ ಸೆ.27ರಂದು ನಡೆದ ಕಾಸರಗೋಡು ದಸರಾ ಕವಿಗೋಷ್ಠಿ-2025ರಲ್ಲಿ ಯುವಕವಿ ಎಂ.ಎ.ಮುಸ್ತಫಾ ಬೆಳ್ಳಾರೆ ಸ್ವರಚಿತ 'ಬಾಳು ಬಂಗಾರವಾಗಲಿ' ಶೀರ್ಷಿಕೆಯ ಕವನ ವಾಚಿಸಿದರು.

ಚೆಂಬು : ರಾಷ್ಟ್ರೀಯ ಸೇವಾ ಯೋಜನೆಯ 17 ನೇ ವಾರ್ಷಿಕ ವಿಶೇಷ ಶಿಬಿರ ಸಮಾರೋಪ – ಎನ್.ಎಸ್.ಎಸ್ ಸ್ವಯಂಸೇವಕರಿಗೆ ಶಿಸ್ತು ಸಂಸ್ಕಾರ ಧೈರ್ಯ ಬೆಳೆಸುತ್ತದೆ – ಸಂತೋಷ್ ಕುತ್ತಮೊಟ್ಟೆ

ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇಲ್ಲಿನ ರಾಷ್ಟ್ರೀಯ ಸೇವಾ ಯೋಜನ ಘಟಕದ 17 ನೇ ವಾರ್ಷಿಕ ವಿಶೇಷ ಶಿಬಿರ ಸೆ 20 ಶನಿವಾರದಂದು ಸರಕಾರಿ ಪ್ರೌಢ ಶಾಲೆ ಚೆಂಬು, ಮಡಿಕೇರಿ ಇಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಗೋಪಾಲಕೃಷ್ಣ ಹೊಸೂರುರವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಆರ್ ಗಂಗಾಧರ ಸಂಚಾಲಕರು...
error: Content is protected !!