Ad Widget

ಕೊಲ್ಲಮೊಗ್ರು : ಗ್ರಾ.ಪಂ ನ ಸೊತ್ತುಗಳ ಕಳವು – ಪಂಚಾಯತ್ ಉಪಾಧ್ಯಕ್ಷರ ವಿರುದ್ಧ ಕೇಸ್ ದಾಖಲು

ಸುಬ್ರಹ್ಮಣ್ಯ, ಸೆ.26: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನಲ್ಲಿ ಸೊತ್ತುಗಳು ಕಳವಾಗಿದ್ದು ಈ ಬಗ್ಗೆ ಪಂಚಾಯತ್ ನ ಉಪಾಧ್ಯಕ್ಷರ ಮೇಲೆ ಶಂಕೆ ವ್ಯಕ್ತಪಡಿಸಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಗಿದ್ದು ಪ್ರಕರಣ ದಾಖಲಾಗಿದೆ.
ಗ್ರಾಮ ಪಂಚಾಯತ್ ಪಿಡಿಒ ದೂರು ನೀಡಿದ್ದು, ಸೆ.25ರಂದು ಗ್ರಾಮ ಪಂಚಾಯತ್ ಚರಾಸ್ಥಿಗಳನ್ನು ಪರಿಶೀಲನೆ ಮಾಡುವಾಗ ಪಂಚಾಯತ್ ನ ಚರಾಸ್ಥಿಗಳಾದ ಹೆಡ್ಫೋನ್, ಧ್ವನಿವರ್ಧಕ ಸ್ಟ್ಯಾಂಡ್, ಮೈಕ್ ಸೆಟ್, ಸಿಸಿ ಕೆಮರಾಗಳು ಕಳವು ಆಗಿರುವುದು ಗಮನಕ್ಕೆ ಬಂದಿದ್ದು, ಕಳವಾದ ಸೊತ್ತುಗಳ ಮೌಲ್ಯ ಹತ್ತು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಳವಾದ ಸೊತ್ತುಗಳು ದುರಸ್ಥಿಯಲ್ಲಿದ್ದು, ಉಪಯೋಗ ಇಲ್ಲದೆ, ದಾಸ್ತಾನು ಇರಿಸಲಾಗಿತ್ತು. ಕಳವಾದ ಸೊತ್ತುಗಳನ್ನು ಪಂಚಾಯತ್ ಉಪಾಧ್ಯಕ್ಷರಾಗಿರುವ ಮಾಧವ ಚಾಂತಾಳ ಅವರು ಕಳವು ಮಾಡಿರುವ ಬಗ್ಗೆ ಸಂಶಯ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading