Ad Widget

ಸುಬ್ರಹ್ಮಣ್ಯದಲ್ಲಿ ಪಿಂಕಿ ಫ್ಯಾಶನ್ ಡಿಸೈನಿಂಗ್ ಸೇವಾ ಸಂಸ್ಥೆ ಆರಂಭ – “ಮಹಿಳೆಯರು ಸ್ವಉದ್ಯೋಗದೊಂದಿಗೆ ಸ್ವಾಲಂಬಿ ಜೀವನ ನಡೆಸಲಿ” : ವಿಶ್ವನಾಥ ನಡುತೋಟ

ಸುಬ್ರಹ್ಮಣ್ಯ ಸೆಪ್ಟೆಂಬರ್ 24 : “ಇಂದಿನ ದಿನಗಳಲ್ಲಿ ಮಹಿಳೆಯರು ಆಬಲೆಯರು ಅಲ್ಲ. ತಮ್ಮ ಸ್ವಂತ ದುಡಿಮೆಯೊಂದಿಗೆ ಸ್ವಾಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರು. ತಾವು ಸ್ವತಃ ದುಡಿಯುವುದರೊಂದಿಗೆ ಇನ್ನಷ್ಟು ಜನ ಮಹಿಳೆಯರಿಗೆ ತರಬೇತಿ ನೀಡಿ ಸ್ವಂತ ಜೀವನವನ್ನು ಹಾಗೂ ಸ್ವಾವಲಂಬಿ ಬದುಕನ್ನು ನಡೆಸಲು ಎಲ್ಲರಿಗೂ  ಮಾರ್ಗದರ್ಶಕರಾಗಿದ್ದಾರೆ” ಎಂದು ಸುಬ್ರಹ್ಮಣ್ಯದ ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನುಡಿದರು.
ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ  ಮೋಂಟಿ ಕಂಫರ್ಟ್  ಪ್ರಥಮ ಮಹಡಿಯಲ್ಲಿ ಸೋಮವಾರ ಪಿಂಕಿ ಪ್ಯಾಶನ್ ಡಿಸೈನಿಂಗ್ ಸೇವಾ ಸಂಸ್ಥೆ ಶುಭಾರಂಭಗೊಂಡಿತು.
ಶ್ರೀಮತಿ ಸುಮಿತ್ರ ಮುರಳಿ ಮಾಲಕತ್ವದ ಈ ಸೇವಾ ಸಂಸ್ಥೆಯನ್ನು ಸುಮಿತ್ರ ಅವರ ತಂದೆ ತಾಯಿ ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಅವರೊಂದಿಗೆ ಸುಳ್ಯ ತಾಲೂಕು ಟೈಲರಿಂಗ್ ಅಸೋಸಿಯೇಷನ್ ಅಧ್ಯಕ್ಷ ಮಾದವ ಶೆಟ್ಟಿಗಾರ್ ಹಾಗೂ ಸುಬ್ರಹ್ಮಣ್ಯದ ಆರ್.ಕೆ. ಟೈಲರ್ ಅವರು ಸಹಕರಿಸಿದರು.
ಈ ಸಂದರ್ಭದಲ್ಲಿ ಕಟ್ಟಡದ ಮಾಲಕಿ ಶ್ರೀಮತಿ ಚಂಚಲಾಕ್ಷಿ, ಪ್ರತಿರೂಪ ಸ್ಟುಡಿಯೋ ಮಾಲಕ ಪ್ರಕಾಶ್ ಸುಬ್ರಹ್ಮಣ್ಯ, ಕುಕ್ಕೆಶ್ರೀ ಡ್ರೈವಿಂಗ್ ಸ್ಕೂಲ್ ಮಾಲಕ ಲl ಮಾಧವ ದೇವರಗದ್ದೆ, ಸುಮಿತ್ರ ಅವರ ಸಂಬಂಧಿಕರು ಬಂಧು ಮಿತ್ರರು ಹಾಜರಿದ್ದರು.
ಕೊನೆಯಲ್ಲಿ ಮಾಧವ ದೇವರಗದ್ದೆ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading