Ad Widget

ಸೆ.25 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ “ನ್ಯಾಯಕ್ಕಾಗಿ ಒಂದಾಗೋಣ ಸಮಿತಿ”ಯಿಂದ ಪ್ರತಿಭಟನೆ

ಭ್ರಷ್ಟಾಚಾರದ ವಿರುದ್ಧದ ಕೂಗಿನೊಂದಿಗೆ ಕೊಲ್ಲಮೊಗ್ರು ಹಾಗೂ ಕಲ್ಮಕಾರು ಗ್ರಾಮಗಳ ಜನರುಗಳ ಒಗ್ಗಟ್ಟಿನೊಂದಿಗೆ ರೂಪುಗೊಂಡ “ನ್ಯಾಯಕ್ಕಾಗಿ ಹೋರಾಡೋಣ” ಸಮಿತಿಯ ವತಿಯಿಂದ ಸೆ.25 ರಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಲಿರುವುದು ಎಂದು ಹೋರಾಟ ಸಮಿತಿಯವರು ತಿಳಿಸಿದ್ದು, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಿಬ್ಬಂದಿ ಕಳವು ಆರೋಪದ ಬಗ್ಗೆ ಪೋಲೀಸ್ ದೂರು ನೀಡದೇ, ಸೂಕ್ತ ತನಿಖೆಯನ್ನು ನಡೆಸದೇ ಗ್ರಾಮ ಪಂಚಾಯತ್ ಆಡಳಿತ ತಪ್ಪು ಎಸಗಿರುವ ಬಗ್ಗೆ ಹಾಗೂ ಗ್ರಾಮ ಪಂಚಾಯತ್ ಕೊಲ್ಲಮೊಗ್ರು ಪೇಟೆಯ ಸಾರ್ವಜನಿಕ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾ ಅಳವಡಿಸಿ ಸಾರ್ವಜನಿಕರ ಗೌಪ್ಯತೆಗೆ ದಕ್ಕೆ ತರುವಂತೆ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಪ್ರತಿಭಟನೆ ನಡೆಸುವುದಾಗಿ “ನ್ಯಾಯಕ್ಕಾಗಿ ಒಂದಾಗೋಣ ಹೋರಾಟ ಸಮಿತಿ”ಯವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading