Ad Widget

ಯೋಗ ಸ್ಪರ್ಧೆಯಲ್ಲಿ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ


ಸೆಪ್ಟೆಂಬರ್ 19ರಂದು ವಾಮoಜೂರ್ ನ ಎಸ್. ಡಿ. ಎಮ್. ಮಂಗಳ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ನಡೆದ 14ರ ವಯೋಮಾನದ ಯೋಗ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಆರ್ಟಿಸ್ಟಿಕ್ ವೈಯಕ್ತಿಕ ವಿಭಾಗದಲ್ಲಿ ಹಾರ್ದಿಕ 7ನೇ ಪ್ರಥಮ, ಟ್ರೆಡಿಶನಲ್ ವಿಭಾಗ ಸೋನಾ ಅಡ್ಕರ್7ನೇ, ಆರ್ಟಿಸ್ಟಿಕ್ ಡಬಲ್ಸ್ ಹಾಗೂ ತಾಳಬದ್ದ ಡಬಲ್ಸ್ ವಿಭಾಗದಲ್ಲಿ ಹಾರ್ದಿಕ 7 ನೇ ಹಾಗೂ ಸೋನಾ ಅಡ್ಕಾರ್ 7 ನೇ ಪ್ರಥಮ, ಬಾಲಕರ ವಿಭಾಗದಲ್ಲಿ ಶ್ರೀಶೌರ್ಯ 6 ನೇ ಟ್ರಡಿಷನಲ್ ವಿಭಾಗ ದ್ವಿತೀಯ, ಆರ್ಕಿಸ್ಟಿಕ್ ಡಬಲ್ಸ್ ಶ್ರೀಶೌರ್ಯ 6ನೇ ಮತ್ತು ಅಕ್ಷರ್ 6ನೇ ದ್ವಿತೀಯ, ಸ್ಥಾನ ಪಡೆದುಕೊಂಡಿರುತ್ತಾರೆ. ಪ್ರಥಮ ಸ್ಥಾನವನ್ನು ಪಡೆದಂತಹ ಸೋನಾ ಅಡ್ಕಾರ್ ಏಳನೇ ಇವರು ಕೃಷಿಕ ಹಾಗೂ ಉದ್ಯಮಿ ಶರತ್ ಅಡ್ಕಾರ್ ಮತ್ತು ಶೋಭಾ ದಂಪತಿಗಳ ಪುತ್ರಿ , ಹಾರ್ದಿಕ ಕೆ. ಕೆ 7 ನೇ ತರಗತಿ ಇವರು ಸುಳ್ಯ ತಾಲೂಕು ಆಫೀಸ್ ಉದ್ಯೋಗಿ ಕೃಷ್ಣಪ್ಪ ಗೌಡ ಕುರುಂಜಿಬಾಗ್ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ. ಈ ಎರಡು ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾ ಸಂಸ್ಥೆಯ ಜೊತೆ ಕಾರ್ಯದರ್ಶಿ ಓಲ್ವಿನ್ ಎಡ್ವರ್ಡ್ ಡಿ ಕುನ್ಹ, ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ ಇವರ ಮಾರ್ಗದರ್ಶನದಲ್ಲಿ ಸಂತೋಷ್ ಮುಂಡಕಜೆ ಹಾಗೂ ಶ್ರೀಮತಿ ಪ್ರಶ್ವಿಜ ಯೋಗ ತರಬೇತು ನೀಡಿ , ದೈಹಿಕ ಶಿಕ್ಷಣ ಶಿಕ್ಷಕರಾದ ಪುಷ್ಪವೇಣಿ ಹುದೇರಿ, ಕೊರಗಪ್ಪ ಬೆಳ್ಳಾರೆ, ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading