Ad Widget

ಸುಬ್ರಹ್ಮಣ್ಯದಲ್ಲಿ ವೇಗ ಪಡೆದ ಸ್ವಚ್ಛತಾ ಅಭಿಯಾನ

ಸೆಪ್ಟೆಂಬರ್ 18 : ಕುಕ್ಕೆ ಶ್ರೀ
ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸ್ವಚ್ಛತಾ ಅಭಿಯಾನ ಪ್ರತೀ ವಾರವು ಡಾlರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ನಿಂದ ನಡೆಯುತ್ತಿದ್ದು, ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ದಿನದಿಂದ ನಿರಂತರವಾಗಿ 15 ದಿನಗಳ ಕಾಲ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ಪುಣ್ಯ ದಿನದವರೆಗೆ ನಡೆಯಲಿರುವುದು.
ಬುಧವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಡಾ. ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಕುಮಾರಧಾರ ಸ್ನಾನಘಟ್ಟ ಹಾಗೂ ಪಾರ್ಕಿಂಗ್ ಪರಿಸರದಲ್ಲಿ ಸ್ವಚ್ಛತೆಯನ್ನು ಮಾಡಲಾಗಿದೆ.
ಸಮಾಜ ಸೇವಾ ಟ್ರಸ್ಟ್  ಸುಮಾರು 60 ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರುಗಡೆಯಿಂದ ಮುಖ್ಯರಸ್ತೆ ಪಾರ್ಕಿಂಗ್ ಸ್ಥಳಗಳಲ್ಲಿ ತಳಿಯ ಕುಮಾರಸ್ವಾಮಿ ವಿದ್ಯಾಲಯದ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಆಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಡಬ ತಾಲೂಕು ಸಂಜೀವಿನಿ ಒಕ್ಕೂಟಗಳ ಸಮನ್ವಯ ಅಧಿಕಾರಿ ಜಗತ್ “ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನದಿಂದ 15 ದಿನಗಳ ಕಾಲ ನಿರಂತರ ವಾಗಿ ಅಕ್ಟೋಬರ್ 2 ಗಾಂಧಿ ಜಯಂತಿ, ಆ ಪುಣ್ಯ ದಿನದವರೆಗೆ ಎಲ್ಲಾ ಕಡೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಇದರ ಉದ್ದೇಶ ನಮ್ಮ ಮನೆ,ನಮ್ಮ ಪರಿಸರ,ನಮ್ಮ ಗ್ರಾಮವನ್ನು ಸ್ವಚ್ಛತೆಯಿಂದ ಇರಿಸಬೇಕು ಅದಕ್ಕೆ ನಾವು ಪ್ರಥಮ ಆದ್ಯತೆಯನ್ನು ಕೂಡ ನೀಡಬೇಕಾಗಿದೆ. ನಮ್ಮ ಗ್ರಾಮ ಸ್ವಚ್ಛವಾದಲ್ಲಿ ಇಡೀ ದೇಶ ಸ್ವಚ್ಛವಾಗಿರುವುದು ಅಲ್ಲದೇ ಇಂತಹ ಪುಣ್ಯಕ್ಷೇತ್ರದಲ್ಲಿ ದಿನನಿತ್ಯ ಸಾವಿರಾರು ಭಕ್ತಾದಿಗಳು ಶ್ರೀ ದೇವರ ದರ್ಶನಕ್ಕೆ ಬರುತ್ತಿದ್ದು ಶ್ರೀ ಕ್ಷೇತ್ರ ಸ್ವಚ್ಛವಾಗಿದ್ದಲ್ಲಿ ಸ್ವಚ್ಛ ಮನಸ್ಸಿನಿಂದ ದೇವರ ದರ್ಶನವನ್ನು ಕೂಡ ಮಾಡಲು ಸಾಧ್ಯವಾಗುತ್ತದೆ” ಎಂದು ನುಡಿದರು.
ಸ್ವಚ್ಛತಾ ಅಭಿಯಾನದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್, ಕಾರ್ಯದರ್ಶಿ ಮೋನಪ್ಪ ಡಿ, ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ, ಕುಮಾರಸ್ವಾಮಿ ವಿದ್ಯಾಲಯದ ಸಂಚಾಲಕ ಚಂದ್ರಶೇಖರ ನಾಯರ್, ಪ್ರಾಂಶುಪಾಲ ಸಂಕೀರ್ತ ಹೆಬ್ಬಾರ್, ಉಪನ್ಯಾಸಕರುಗಳಾದ ಸುಜಿತ್ ಕುಮಾರ್, ಸುಜಾತ, ಚೇತನ, ದುರ್ಗಾಲಕ್ಷ್ಮಿ, ಸಂಧ್ಯಾ, ನವ್ಯ, ಸುಷ್ಮಾ, ಹಾಗೂ ಪ್ರಥಮ ಪಿಯುಸಿ 80 ವಿದ್ಯಾರ್ಥಿಗಳು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಪಾಲುಗೊಂಡಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading