Ad Widget

‘ಲೋಕ ಕಲ್ಯಾಣ ಮೇಳ’ ಪಿ.ಎಮ್. ಸ್ವನಿಧಿ ಯೋಜನೆಯ ಮಾಹಿತಿ ಕಾರ್ಯಕ್ರಮ

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ‘ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಜಿಲ್ಲಾ ಕೌಶಲ್ಯಾ ಮಿಶನ್ ಮಂಗಳೂರು ಸುಳ್ಯ ಪಟ್ಟಣ ಪಂಚಾಯತ್ ಸಹಯೋಗದಲ್ಲಿ ಪ್ರಧಾನಮಂತ್ರಿ ಆತ್ಮನಿರ್ಭರ್ ನಿಧಿ ಯೋಜನೆ 2.0 ‘ಲೋಕ ಕಲ್ಯಾಣ ಮೇಳ’ ಪಿ.ಎಮ್. ಸ್ವನಿಧಿ ಯೋಜನೆಯ ಮಾಹಿತಿ ಕಾರ್ಯಕ್ರಮ ಮತ್ತು ಗರ್ಭಾಶಯ ಕ್ಯಾನ್ಸರ್ ಪ್ರತಿರೋಧ ಜಾಗೃತಿ ಕಾರ್ಯಕ್ರಮ ಸೆ.17 ರಂದು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.‌

. . . . . . . . .

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ.ಎ ನೀರಬಿದಿರೆ, ಉಪಾಧ್ಯಕ್ಷ ಬುದ್ಧನಾಯ್ಕ ಜಿ, ಸದಸ್ಯರಾದ ಶೀಲಾ ಅರುಣ್ ಕುರುಂಜಿ, ಬಾಲಕೃಷ್ಣ ಭಟ್, ಎಂ.ಕೆ ಮಹಮ್ಮದ್ ಶರೀಫ್ ಉಪಸ್ಥಿತರಿದ್ದರು.

. . . . . . .

ಸಂಪನ್ಮೂಲ ವ್ಯಕ್ತಿಗಳಾಗಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಭಿಯಾನ ವ್ಯವಸ್ಥಾಪಕಿ ಶ್ರೀಮತಿ ಐರಿನ್ ರೆಬೆಲ್ಲೋ ಆಗಮಿಸಿ ಪಿಎಮ್ ಸ್ವನಿಧಿ ಯೋಜನೆ 2.0 ಲೋಕಕಲ್ಯಾಣ ಮೇಳದ ಕುರಿತು ಮಾಹಿತಿ ನೀಡಿದರು. ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಸುಳ್ಯ ಇದರ ಶ್ರೀಮತಿ ಸುಜಾತ ಮಾತನಾಡಿ ಸಾಮಾಜಿಕ ಭದ್ರತಾ ಸುರಕ್ಷಾ ವಿಮೆಗಳ ಬಗ್ಗೆ ಮಾಹಿತಿ ನೀಡಿದರು. ಕೆಯರ್ ಎನ್ ಸೇಫ್ ಆಫ್ ಇಂಡಿಯಾದ ಶ್ರೀಮತಿ ಅಮಿತ ಮಾತನಾಡಿ ಗರ್ಭಕೋಶದ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು.

ಸಮುದಾಯ ಸಂಘಟಕಿ ಜಯಲಕ್ಷ್ಮೀ ಸ್ವಾಗತಿಸಿ, ತೀರ್ಥಕಲಾ ವಂದಿಸಿದರು.ದಿಲೀಪ್ ರವರು ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading