Ad Widget

ಬೆಳ್ಳಾರೆ : ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಚಂದ್ರಕುಮಾರ್ ಪಡ್ಪು , ಕಾರ್ಯದರ್ಶಿಯಾಗಿ ವಸಂತ ಕುಮಾರ ಪಡ್ಪು ಆಯ್ಕೆ

. . . . . . . . .

ಪಡ್ಪು ಕಲ್ಪವೃಕ್ಷ ನವೋದಯ ಸ್ವಸಹಾಯ ಸಂಘ ದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯು 14 ಸಪ್ಟೆಂಬರ್ ರಂದು ಸಂಘದ ಸದಸ್ಯರಾದ ವಸಂತಕುಮಾರ್ ಪಡ್ಪು ಇವರ ಮನೆ ವಠಾರದಲ್ಲಿ ಜರುಗಿತು.2024-25 ನೇ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಚಂದ್ರಕುಮಾರ್ ಪಡ್ಪು ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಅಧ್ಯಕ್ಷರಾದ ಶ್ರೀನಿವಾಸ ಕುರುಂಬುಡೇಲು ಸಭೆಗೆ ಮಂಡಿಸಿದರು. ಸದ್ರಿ ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಿತು. ಮುಂದಿನ ವರ್ಷದ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ನಂತರ 2025- 26ರ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಚಂದ್ರಕುಮಾರ್ ಪಡ್ಪು , ಕಾರ್ಯದರ್ಶಿಯಾಗಿ ವಸಂತ ಕುಮಾರ ಪಡ್ಪು ಇವರುಗಳನ್ನು ಸದಸ್ಯರುಗಳ ಸೂಚನೆ ಮತ್ತು ಅನುಮೋದನೆಯೊಂದಿಗೆ ಆಯ್ಕೆ ಮಾಡಲಾಯಿತು. ವಸಂತಗೌಡ ಸ್ವಾಗತಿಸಿ, ಕೊರಗಪ್ಪ ಕುರುಂಬುಡೇಲು ವಂದಿಸಿದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading