Ad Widget

ಸುಬ್ರಹ್ಮಣ್ಯದ ಅಶೋಕ್ ಮೂಲೆಮಜಲುರವರ ಮನೆಯ ಗ್ರಂಥಾಲಯಕ್ಕೆ ಅರೆಭಾಷೆ ಅಕಾಡೆಮಿ ಅಧ್ಯಕ್ಷರ ಭೇಟಿ

ಸುಬ್ರಹ್ಮಣ್ಯ ಸೆಪ್ಟೆಂಬರ್ 17 : ಕರ್ನಾಟಕ ಅರೆ ಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಾಜಿ ಅವರು ಮಂಗಳವಾರ ಸುಬ್ರಹ್ಮಣ್ಯದ ಅಶೋಕ್ ಮೂಲೆಮಜಲು ಅವರ ವಿಶಾಲವಾದ ಮನೆ ಗ್ರಂಥಾಲಯಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಂಥಾಲಯದಲ್ಲಿ ಸಂಗ್ರಹವಾಗಿರುವ ವಿವಿಧ ದೇಶಗಳ ನೋಟ್ ಹಾಗೂ ನಾಣ್ಯಗಳು, ವಿವಿಧ ಧರ್ಮಗಳ ಗ್ರಂಥಗಳು,ವಿವಿಧ ದೇಶಗಳ ಅಂಚೆ ಚೀಟಿಗಳು, ವ್ಯಕ್ತಿತ್ವ ವಿಕಸನ ತರಬೇತಿಯ ಪುಸ್ತಕಗಳು, ಸಾಹಿತ್ಯ ಹಾಗೂ ನಮ್ಮ ಸಂಸ್ಕೃತಿಯ ಅನೇಕರೀತಿಯ ಪುಸ್ತಕಗಳ ಬಂಡಾರ, ಕರಾವಳಿಯ ಯಕ್ಷಗಾನದ ಬೇರೆ ಬೇರೆ ಭಂಗಿಗಳ ಪುಸ್ತಕಗಳು ಹಾಗೂ ಲೇಖನಗಳು ವಿವಿಧ ಲೇಖಕರುಗಳ ನಾಟಕಗಳು ರಾಮಾಯಣ ಹಾಗೂ ಮಹಾಭಾರತದ ಪುಸ್ತಕಗಳು, ನಗೆ ಹನಿಗಳು, ಹಾಗೆ ಹಾಸ್ಯ ಚಟಾಕಿಗಳು, ಕಥೆ, ಕಾದಂಬರಿ ಇತ್ಯಾದಿಗಳ ಪುಸ್ತಕ ಬಂಡಾರವೇ ಅವರ ಗ್ರಂಥಾಲಯದಲ್ಲಿತ್ತು. 
ಈ ಸಂದರ್ಭದಲ್ಲಿ ಎಲ್ಲಾ ಗ್ರಂಥಗಳ ವಿವರಣೆಯನ್ನ ಸ್ವತಹ ಅಶೋಕ್ ಮೂಲೆಮಜಲು ಅವರೇ ಗಣ್ಯರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಅರೆಭಾಷೆ ಸಾಹಿತ್ಯ ಸಂಸ್ಕೃತಿ ಅಕಾಡೆಮಿಯ ಸದಸ್ಯರುಗಳಾದ ಕಾರ್ಯಪ್ಪ ಪಿ ಎಸ್, ಚಂದ್ರಾವತಿ ಬಡ್ಡಡ್ಕ, ವಿನೋದ ಮೂಡಗದ್ದೆ, ಲತಾ ಪ್ರಸಾದ್ ಕುತ್ಪಾಜೆ, ಲೋಕೇಶ್ ಊರು ಬಯಲು, ಡಾl ಅನುರಾಧ ಕುರುಂಜಿ ಉಪನ್ಯಾಸಕ ಕಿಶೋರ್ ಕುಮಾರ್ ಮುಂತಾದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಅಶೋಕ್ ಕುಮಾರ್ ಮೂಲೆಮಜಲು  ದಂಪತಿ ಅವರನ್ನು ಅಕಾಡೆಮಿ ಅಧ್ಯಕ್ಷರು ಸನ್ಮಾನಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading