Ad Widget

ಕುಕ್ಕೆಯಲ್ಲಿ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟ

“ಕ್ರೀಡಾಮನೋಭಾವನೆಯು ಆಟಗಾರರ ಪ್ರಗತಿಗೆ ಅಸ್ತ್ರ” : ಶಾಸಕಿ ಕು| ಭಾಗೀರಥಿ ಮುರುಳ್ಯ

ಸುಬ್ರಹ್ಮಣ್ಯ: “ಕ್ರೀಡೆಯು ಕ್ರೀಡಾಳುಗಳ ಬದುಕಿಗೆ ಹೊಸ ಆಯಾಮ ನೀಡುತ್ತದೆ. ಕ್ರೀಡಾ ಮನೋಭಾವನೆಯು ಆಟಗಾರರ ಪ್ರಗತಿಗೆ ಅಸ್ತ್ರ.ಕ್ರೀಡಾಳುಗಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಗುರಿಯತ್ತ ಸಾಗುವ ಗುಣ ಹೊಂದಬೇಕು. ಕ್ರೀಡಾ ಸಾಧನೆಯು ಬದುಕಿಗೆ ಹೊಸ ಭವಿಷ್ಯ ನೀಡುತ್ತದೆ ಆದುದರಿಂದ ಕಷ್ಟ ಪರಿಶ್ರಮದ ಅಭ್ಯಾಸ ಅತ್ಯಗತ್ಯ” ಎಂದು  ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ ಹೇಳಿದರು. ದ.ಕ ಜಿಲ್ಲಾ ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಅವರು ಮಾತನಾಡಿದರು. “ವ್ಯಾಸಂಗ ಮಾಡುವ ಕಾಲದಲ್ಲಿ ಕ್ರೀಡೆಗಳತ್ತ ಗಮನ ಹರಿಸಲು ಶಾಲೆಗಳಲ್ಲಿ ನಡೆಯುವ ಪಂದ್ಯಾಟಗಳು ಪೂರಕ. ಆರೋಗ್ಯ ವೃದ್ದಿಯೊಂದಿಗೆ ಮಾನಸಿಕ ಸಂತಸ ನೀಡುವ ಕ್ರೀಡೆಗಳ ಬಗ್ಗೆ ಮಕ್ಕಳು ಆಕರ್ಷಿತರಾಗುವಂತೆ ಮಾಡಬೇಕು” ಎಂದರು.
ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಜಿಲ್ಲಾ ಕ್ರೀಡಾ ಸಂಯೋಜಕ ಪ್ರೇಮನಾಥ ಶೆಟ್ಟಿ, ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರ ಶಿವರಾಮ ಯೇನೆಕಲ್ಲು, ಕೆ.ಎಸ್.ಗೌಡ ವಿದ್ಯಾಲಯದ ಪ್ರಾಚಾರ್ಯ ಸದಾನಂದ ಮಾವಾಜಿ, ಮುಲ್ಕಿ ಮೆಡ್ಲಿನ್ ಪಿ.ಯು ಕಾಲೇಜು ಪ್ರಾಂಶುಪಾಲೆ ಲೀರಿಯಾ ಶಾಂತಿ ಮೆಂಡೋಲ್ಸಾ ಮುಖ್ಯ ಅತಿಥಿಗಳಾಗಿದ್ದರು.
ಎಸ್. ಎಸ್.ಪಿ.ಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಎನ್.ಎಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ತ್ರಿವೇಣಿ ದಾಮ್ಲೆ, ಸಾಂಸ್ಕೃತಿಕ ತಂಡದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಯೋಜಕ ಜಯಪ್ರಕಾಶ್.ಆರ್, ಕ್ರೀಡಾ ಕಾರ್ಯದರ್ಶಿ ಧನುಷ್ ಕಾಶಿಕಟ್ಟೆ ವೇದಿಕೆಯಲ್ಲಿದ್ದರು.
ದ.ಕ ಜಿಲ್ಲೆಯ ವಿವಿಧ ತಾಲೂಕುಗಳ ಬಾಲಕ ಬಾಲಕಿಯರ ವಿಭಾಗದ 18 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಉಪನ್ಯಾಸಕಿ ಶ್ರುತಿ ಅಶ್ವಥ್ ನಿರೂಪಿಸಿದರು.
ಕಾಲೇಜಿನ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು  ಕ್ರೀಡಾಂಗಣ ಸೇರಿದಂತೆ ಅಂಗಣಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದರು.
ಪಂದ್ಯಾಟವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಈ ಸಂದರ್ಭ ಪ್ರಮುಖರಾದ ಸುಜಾತ ಕಲ್ಲಾಜೆ, ಪ್ರೇಮನಾಥ ಶೆಟ್ಟಿ, ಶಿವರಾಮ ಯೇನೆಕಲ್ಲು, ಸೋಮಶೇಖರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading