Ad Widget

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ – ವಾರ್ಷಿಕ 453 ಕೋಟಿ ರೂ. ವ್ಯವಹಾರ ; 1.56 ಕೋಟಿ ರೂ. ಲಾಭಾಂಶ – ಶೇ.15.5 ಡಿವಿಡೆಂಡ್ ವಿತರಣೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.14 ರಂದು ಕೊಲ್ಲಮೊಗ್ರದ ಶ್ರೀ ಮಯೂರ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ನಿರ್ದೇಶಕರುಗಳಾದ ಡ್ಯಾನಿ ಯಳದಾಳು, ರೇಗನ್ ಶೆಟ್ಟಿಯಡ್ಕ, ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು, ಶ್ರೀಮತಿ ವೇದಾವತಿ ಮುಳ್ಳುಬಾಗಿಲು, ಶ್ರೀಮತಿ ಮೇನಕಾ ಕೊಪ್ಪಡ್ಕ, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು, ಬೊಳಿಯ ಅಜಿಲ ಬೆಂಡೋಡಿ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನಮನೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ತೀರ್ಥಕುಮಾರಿ.ವೈ ಉಪಸ್ಥಿತರಿದ್ದರು.
ಸಂಘವು ಪ್ರಸಕ್ತ ಸಾಲಿನಲ್ಲಿ ವಾರ್ಷಿಕ 453 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 1.56 ಕೋಟಿ ರೂಪಾಯಿ ಲಾಭಾಂಶ ಪಡೆದಿದ್ದು, ಸದಸ್ಯರಿಗೆ ಶೇ.15.5 ಡಿವಿಡೆಂಡ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ “ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ” ಪಡೆದ ಕೊಲ್ಲಮೊಗ್ರು ಬೆಂಡೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲಲಿತಾ ಕುಮಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ಯಾಂಪ್ಕೋದಲ್ಲಿ ಹೆಚ್ಚು ವ್ಯವಹಾರವನ್ನು ನಡೆಸಿದ್ದಕ್ಕಾಗಿ ಸುಧೀರ್.ಕೆ.ವಿ, ಪ್ರಾಮಾಣಿಕ ಗ್ರಾಹಕರಾಗಿರುವ ಸಾವಿತ್ರಿ ದೇವರಗದ್ದೆ, ಸಂಘದ ಹರಿಹರ ಪಳ್ಳತ್ತಡ್ಕ ಶಾಖೆಯಲ್ಲಿ ಹೆಚ್ಚು ವ್ಯಾಪಾರವನ್ನು ನಡೆಸಿದ್ದಕ್ಕಾಗಿ ಸತೀಶ್ ಮುಂಡಾಜೆ, ಕೊಲ್ಲಮೊಗ್ರು ಶಾಖೆಯಲ್ಲಿ ಹೆಚ್ಚು ವ್ಯಾಪಾರವನ್ನು ನಡೆಸಿದ್ದಕ್ಕಾಗಿ ಧರ್ಮರಾಜ್.ಕೆ.ಪಿ ಇವರುಗಳನ್ನು ಸನ್ಮಾನಿಸಲಾಯಿತು.
ಹಾಗೆಯೇ ಸಂಘದ ಸದಸ್ಯರ ಸಾಧಕ ಮಕ್ಕಳಾದ ಪಿ.ಯು.ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಮಯೂರ.ಜಿ ಮುಳ್ಳುಬಾಗಿಲು, ಸ್ಥಿತಾ ಮಲ್ಲಾರ, ಹರೀಶ್ ಕಾನಾವು ಕಲ್ಮಕಾರು, ಹಾರ್ದಿಕ್ ಮುಂಡಾಜೆ, ಎಸ್.ಎಸ್.ಎಲ್.ಸಿ ಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಪಡೆದ ಶ್ರದ್ಧಾ ದೊಡ್ಡಕಜೆ, ಲಕ್ಷ್ಮೀ ಅಂಬೆಕಲ್ಲು, ಸೃಜನ್ ಉಪ್ಪುಕಳ, ಮೋಕ್ಷ ಬಟ್ಟೋಡಿ, ಸಂಗಮ್ ಕೊಪ್ಪಡ್ಕ, ಲಕ್ಷೀತಾ ಮುಳ್ಳುಬಾಗಿಲು, ವರುಣ್ ಅಂತಿಬೆಟ್ಟು, ವೀಕ್ಷಿತಾ ಮುಂಡಾಜೆ ಇವರುಗಳಿಗೆ ಪುರಸ್ಕಾರ ಪತ್ರ ಹಾಗೂ ನಗದು ಬಹುಮಾನವನ್ನು ನೀಡಿ ಗೌರವಿಸಲಾಯಿತು.
ಸಂಘದ ಸಿಬ್ಬಂದಿಗಳಾದ ದಿವ್ಯ ಹಾಗೂ ಅಪೂರ್ವ ಪ್ರಾರ್ಥಿಸಿ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ ಧನ್ಯವಾದ ಸಮರ್ಪಿಸಿದರು.
ಗೌರೀಶ್ ಮಲ್ಲಾಜೆ ಕಾರ್ಯಕ್ರಮ ನಿರೂಪಿಸಿದರು.
ಹರ್ಷಕುಮಾರ್ ದೇವಜನ, ನಿವೃತ್ತ ಶಿಕ್ಷಕರಾದ ಶಿವರಾಮ್ ಮಾಸ್ತರ್ ಕುಂಞೇಟಿ, ಕೆ.ಪಿ ಗಿರಿಧರ್, ಹರ್ಷ ಮುಂಡಾಜೆ, ಶ್ಯಾಮ್ ಸುಂದರ್ ಬೆಂಡೋಡಿ, ಪ್ರದೀಪ್ ಕುಮಾರ್, ಗದಾಧರ ಮಲ್ಲಾರ, ನಿವೃತ್ತ ಮುಖ್ಯ ಶಿಕ್ಷಕರಾದ ರಾಮಚಂದ್ರ ಕಜ್ಜೋಡಿ, ಭವಾನಿಶಂಕರ್ ಪಿಂಡಿಮನೆ, ಮಾಧವ ಚಾಂತಾಳ, ರಾಧಾಕೃಷ್ಣ ಬಿಲ್ಲಾರಮಜಲು, ಶೇಖರ್ ಬಟ್ಟೋಡಿ, ಅನಂತರಾಮ ಮಣಿಯಾನಮನೆ, ಯತೀಶ್ ಕಜ್ಜೋಡಿ ಸೇರಿದಂತೆ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.
ವಾರ್ಷಿಕ ಮಹಾಸಭೆಯಲ್ಲಿ ಭಾರತೀಯ ಅಂಚೆ ಇಲಾಖೆ ಪುತ್ತೂರು ಇವರ ಸಹಯೋಗದೊಂದಿಗೆ ಆಧಾರ್ ತಿದ್ದುಪಡಿ ಮತ್ತು ಅಂಚೆ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ಮತ್ತು ನೋಂದಣಿ ಕಾರ್ಯಕ್ರಮ ನಡೆಯಿತು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading