Ad Widget

ಕಲ್ಮಡ್ಕ : ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ಪುನರ್ ರಚನೆ – ಅಧ್ಯಕ್ಷರಾಗಿ ಸಚಿತ್ ಕಲ್ಮಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಮೂಲೆಮನೆ, ಕೋಶಾಧಿಕಾರಿಯಾಗಿ ಅಶ್ವಥ್ ಕುಳ್ಸಿಗೆ

ಕಲ್ಮಡ್ಕದ ಯುವಸ್ಪೂರ್ತಿ ಸೇವಾ ಸಂಘದ ವಾರ್ಷಿಕ ಮಹಾಸಭೆ ಹಾಗೂ 2026 -27ನೇ ಸಾಲಿನ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಠಮಿ ಸಮಿತಿ ರಚನೆಯು ಸೆ.05 ರಂದು ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಮ ಕೊಳೆಂಜಿಕೋಡಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯ ಚಟುವಟಿಕೆ ಹಾಗೂ ಲೆಕ್ಕ ಪತ್ರ ಮಂಡನೆ ಬಳಿಕ ನೂತನ ಕಾರ್ಯಕಾರಿ ಸಮಿತಿಯ ರಚನೆಯು ನಡೆಯಿತು.
ನೂತನ ಕಾರ್ಯಕಾರಿ ಸಮಿತಿಯ ಗೌರವ ಅಧ್ಯಕ್ಷರಾಗಿ ಶಿವರಾಮ ಕೊಳೆಂಜಿಕೋಡಿ, ಅಧ್ಯಕ್ಷರಾಗಿ ಸಚಿತ್ ಕಲ್ಮಡ್ಕ, ಉಪಾಧ್ಯಕ್ಷರಾಗಿ ಚಿದಾನಂದ ಮಾಳಪ್ಪಮಕ್ಕಿ ಹಾಗೂ ಪವನ್ ಮೂಲೆಮನೆ, ಪ್ರಧಾನ ಕಾರ್ಯದರ್ಶಿಯಾಗಿ ಪುನೀತ್ ಮೂಲೆಮನೆ, ಕಾರ್ಯದರ್ಶಿಯಾಗಿ ವಸಂತ ರಾಮತ್ತಿಕಾ‌ರ್, ಪದ್ಮಯ್ಯ ಧರ್ಮಡ್ಕ, ಕೋಶಾಧಿಕಾರಿಯಾಗಿ ಅಶ್ವಥ್ ಕುಳ್ಸಿಗೆ, ಸಂಚಾಲಕರಾಗಿ ನವೀನ್ ಮೂಲೆಮನೆ, ಆಂತರಿಕ ಲೆಕ್ಕ ಪರಿಶೋಧಕರಾಗಿ ನಿತಿನ್ ಮಾಳಪ್ಪಮಕ್ಕಿ, ಸಂಘಟನಾ ಕಾರ್ಯದರ್ಶಿಯಾಗಿ ಕರುಣಾಕರ ಶೆಟ್ಟಗದ್ದೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಜಯರಾಜ್ ಕಡಂಬುಕಾನ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಶಾಂತ್ ಮರಕ್ಕಡ ಹಾಗೂ ನಿರ್ದೇಶಕರಾಗಿ ಉದಯ ಬ್ರಾಂತಿಗದ್ದೆ, ವಿನ್ಯಾಸ್ ರೈ ಮರಕ್ಕಡ, ಭರತ್‌ ಬೊಮ್ಮೆಟ್ಟಿ, ರಾಮಚಂದ್ರ ಕೆ ಕಾಚಿಲ, ಪುರುಷೋತ್ತಮ ಬೊಳಿಯೂರು, ರಂಜಿತ್ ಮಾಳಪ್ಪಮಕ್ಕಿ, ಜೀವನ್ ಕಾಚಿಲ, ಪುರುಷೋತ್ತಮ ಬ್ರಾಂತಿಗದ್ದೆ, ಮಹೇಂದ್ರ ಧರ್ಮಡ್ಕ ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶಿವರಾಮ ಕೊಳೆಂಜಿಕೋಡಿ ನೂತನ ಸಮಿತಿಗೆ ಶುಭಹಾರೈಸಿದರು.
ಸಚಿತ್ ಕಲ್ಮಡ್ಕ ಸ್ವಾಗತಿಸಿದರು.
ಪುನೀತ್ ಮೂಲೆಮನೆ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading