Ad Widget

ಕೊಲ್ಲಮೊಗ್ರು :  ಹಕ್ಕೊತ್ತಾಯದ ಪೂರ್ವಭಾವಿ ಸಭೆ

ಇಂದು ಮಯೂರ ಕಲಾ ಮಂದಿರದಲ್ಲಿ ಕೊಲ್ಲಮೊಗ್ರು ಗ್ರಾಮದ ಎರಡು ಒಕ್ಕೂಟಗಳ  ತ್ರೈಮಾಸಿಕ ಸಭೆ ಜರುಗಿತು.
ಈ ಸಭೆಯಲ್ಲಿ “ನಾಳೆ ಸುಳ್ಯದಲ್ಲಿ ನಡೆಯಲಿರುವ ಶ್ರೀ ಕ್ಷೇತ್ರ  ಧರ್ಮಸ್ಥಳದ ಮೇಲೆ ಹಾಗೂ ಡಾ. ವೀರೇಂದ್ರ ಹೆಗ್ಗಡೆಯವರ ಮೇಲೆ ಮಾಡುವ ಅವಮಾನ ಹಾಗೂ ಅಪಪ್ರಚಾರದ ಬಗ್ಗೆ  ಹಕ್ಕೊತ್ತಾಯ ಮಾಡಲು ಹಾಗೂ  ಹಿಂದೂ ಶ್ರದ್ಧಾಕೇಂದ್ರದ ಮೇಲೆ ಮಾಡಲಾದ  ಅಪಪ್ರಚಾರದ ಬಗ್ಗೆ ನಾಳೆ ಸುಳ್ಯದಲ್ಲಿ ನಡೆಯುವ ಬೃಹತ್ ಹಕ್ಕೊತ್ತಾಯ ಸಭೆಗೆ ಎಲ್ಲಾ  ಸನಾತನ ಧರ್ಮದ  ಹಿಂದೂಗಳು ಭಾಗವಹಿಸಿ ನಮ್ಮ ಧಾರ್ಮಿಕ ಕ್ಷೇತ್ರದ ಉಳಿವಿಗಾಗಿ ನಾವೆಲ್ಲರೂ ಒಂದಾಗೋಣ” ಎಂದು  ವೇದಿಕೆಯಲ್ಲಿದ್ದ ಗಣ್ಯರು  ಒಕ್ಕೋರಲಿನಿಂದ ಹೇಳಿದರು.
ಈ ಕಾರ್ಯಕ್ರಮಕ್ಕೆ ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಶೇಖರ್ ಅಂಬೆಕಲ್ಲು, ಹರಿಹರ ಕೊಲ್ಲಮೊಗ್ರು ಕೃಷಿ ಪತ್ತಿನ ಸಹಕಾರಿ ಕ್ಷೇತ್ರ ದ  ನಿರ್ದೇಶಕರಾದ ಕಮಲಾಕ್ಷ ಮುಳ್ಳುಬಾಗಿಲು, ಸುಬ್ರಹ್ಮಣ್ಯ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಮಾಧವ ಚಾಂತಾಳ,  ಒಕ್ಕೂಟದ ಅಧ್ಯಕ್ಷರುಗಳು  ಸೇವಾನಿರತರು ಸೇವಾ ಪ್ರತಿನಿಧಿ ಗಳು, ಒಕ್ಕೂಟಗಳ ಎಲ್ಲಾ ಸದಸ್ಯರು ಹಾಜರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading