Ad Widget

ಸೆ.09 ರಿಂದ ಸೆ.15 ರವರೆಗೆ ಬೆಳ್ಳಾರೆ ಜೇಸಿ ಸಪ್ತಹ “ಸಪ್ತರ್ಷಿ-2025”

ಜೇಸಿಐ ಬೆಳ್ಳಾರೆಯ ವತಿಯಿಂದ ಸೆ. 9ರಿಂದ ಸೆ.15ರವರೆಗೆ ಜೇಸಿ ಸಪ್ತಾಹ  ವಿವಿಧ ತರಬೇತಿ ಮತ್ತು ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಸೆ. 9ರಂದು ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ ಸಪ್ತಾಹ ಉದ್ಘಾಟನೆ ನೆಡೆಯಲಿದ್ದು, ಆ ದಿನ ಬೆಳ್ಳಾರೆ ಜೇಸಿಐನ ಸ್ಥಾಪಕ ಅಧ್ಯಕ್ಷ ದಿ.ಬಿ ಎಸ್ ಸರ್ದಾರ್ ಸ್ಮರಣಾರ್ಥ ತರಬೇತು ಕಾರ್ಯಗಾರ ನಡೆಯಲಿದೆ. ವಲಯ 15ರ ಸ್ಕಾಲರ್ ಶಿಪ್ ಮತ್ತು ವಾಯ್ಸ್ ಆಫ್ ಯೂತ್ ಸಂಯೋಜಕ ಲೋಕೇಶ್ ಅಕ್ರಿಕಟ್ಟೆ ಸಪ್ತಾಹ ಉದ್ಘಾಟಿಸಲಿದ್ದಾರೆ.
ವಲಯ ತರಬೇತುದಾರ ಬಿ ವಿ ಸೂರ್ಯನಾರಾಯಣ ಎಸ್ ಎಸ್ ಎಲ್ ಸಿ ಬಳಿಕದ ಶೈಕ್ಷಣಿಕ ಅವಕಾಶಗಳ ಬಗ್ಗೆ ತರಬೇತಿ ನಡೆಸಿಕೊಡಲಿದ್ದಾರೆ.
ಸೆ. 10ರಂದು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ದಿ. ಗಂಗಾಧರ ಬೆಳ್ಳಾರೆ ಸ್ಮರಣಾರ್ಥ ಮನೋವಿಶ್ಲೇಷಣೆ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಗಾರ ನಡೆಯಲಿದೆ.ವಲಯ 15ರ ವಲಯ ಸಂಯೋಜಕ ಬಶೀರ್ ಯು ಪಿ ಕಾರ್ಯಗಾರ ಉದ್ಘಾಟಿಸಲಿದ್ದಾರೆ.
ವಲಯ ತರಬೇತುದಾರ ರಾಮಕೃಷ್ಣ ಭಟ್ ಚೂoತಾರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. 
ಸೆ. 11ರಂದು ದಿನ ಪೂರ್ತಿ ಮೂಸ ಬೆಳ್ಳಾರೆ ಸ್ಮರಣಾರ್ಥ ವನಮಹೋತ್ಸವ ಬೆಳ್ಳಾರೆಯ ಹಿದಾಯ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ.
ಮಂಗಳೂರು ಸಂಚಾರಿ ವಲಯ ಅರಣ್ಯಾಧಿಕಾರಿ ಸಂತೋಷ ಕುಮಾರ್ ರೈ, ವಲಯ 15ರ ಗೊ ಗ್ರೀನ್ ವಲಯ ಸಂಯೋಜಕ ಗುರುಪ್ರಸಾದ್ ನಾಯಕ್ ಮತ್ತಿತರರು ಭಾಗವಹಿಸಲಿದ್ದಾರೆ.
ಸೆ. 12ರಂದು ಬೆಳ್ಳಾರೆ ಶೌರ್ಯ ವಿಪತ್ತು ಘಟಕದ ಸಹಕಾರದೊಂದಿಗೆ ಬೆಳ್ಳಾರೆ ಮಾಸ್ತಿಕಟ್ಟೆಯಿಂದ ಪೆರುವಾಜೆವರೆಗೆ ಬೃಹತ್ ಸ್ವಚ್ಛತಾ ಆಂದೋಲನ ನಡೆಯಲಿದೆ.
ಸೆ.13ರಂದು ಪೆರುವಾಜೆಯ ಇಂದಿರಾ ನಿವಾಸದಲ್ಲಿ ಜೇಸಿ ಕುಟುಂಬ ಸಮ್ಮಿಲನ ನಡೆಯಲಿದೆ.
ಸೆ. 14ರಂದು ವಲಯಾಧ್ಯಕ್ಷರ ಅಧಿಕೃತ ಬೇಟಿ ಮತ್ತು ಶಾಶ್ವತ ಯೋಜನೆಗಳ ಅನಾವರಣ ಕಾರ್ಯಕ್ರಮ ನಡೆಯಲಿದೆ. ಬೆಳ್ಳಾರೆ ವಸತಿ ನಿಲಯಕ್ಕೆ ಉದ್ಯಾನವನ, ನೆಟ್ಟಾರು ಶಾಲೆಗೆ ನಾಮಫಲಕ ಹಾಗೂ ಬೆಳ್ಳಾರೆ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆಯನ್ನು ವಲಯಾಧ್ಯಕ್ಷ ಅಭಿಲಾಷ್ ಬಿ ಎ ಅನಾವರಣ ಗೊಳಿಸಲಿದ್ದಾರೆ. ಅಪರಾಹ್ನ 3.00 ಗಂಟೆಗೆ ಜ್ಞಾನದೀಪ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಸಮಾರಂಭದಲ್ಲಿ ವಲಯಾಧ್ಯಕ್ಷ ಅಭಿಲಾಷ್ ಬಿ ಎ, ವಲಯ ಉಪಾಧಕ್ಷ ಸುಹಾಸ್ ಎ ಪಿ ಎಸ್ ಮರಿಕೆ ಭಾಗವಹಿಸಲಿದ್ದಾರೆ.
ಸೆ. 15ರಂದು ಸಂಜೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಮಾರೋಪ ಸಮಾರಂಭ, ಪ್ರತಿಭಾ ಪುರಸ್ಕಾರ,ಯುವ ಪುರಸ್ಕಾರ, ಗೌರವ ಪುರಸ್ಕಾರ, ಕಮಲಪತ್ರ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಪೂರ್ವಾಧ್ಯಕ್ಷ ಪ್ರದೀಪ್ ಕುಮಾರ್ ರೈ ಪನ್ನೆ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಪುತ್ತೂರು ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಐವನ್ ಲೋಬೊ, ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವೈದಿಕ ವಿದ್ವಾoಸ ವೇದಮೂರ್ತಿ ಶಂಭು ಭಟ್ಟ ಅವರಿಗೆ ಗೌರವ ಪುರಸ್ಕಾರ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಪ್ರಮೋದ್ ಕುಮಾರ್ ರೈ ಕಲಾಮಂದಿರ್ ಅವರಿಗೆ ವಿಶೇಷ ಪುರಸ್ಕಾರ, ಧನ್ಯಶ್ರೀ ಎನ್ ನೆಲ್ಲಿಗುಡ್ಡೆ, ವಿನ್ಯಾಸ್ ಜಾಕೆ, ತನ್ವಿ ಅರ್ನಾಡಿ ಅವರಿಗೆ ಪ್ರತಿಭಾ ಪುರಸ್ಕಾರ, ಪೂರ್ವಾಧ್ಯಕ್ಷ ಲೋಕೇಶ್ ತಂಟೆಪ್ಪಾಡಿ ಅವರಿಗೆ ಕಮಲಪತ್ರ ಪುರಸ್ಕಾರ ನಡೆಯಲಿದೆ ಎಂದು ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಬೀಡು, ಕಾರ್ಯದರ್ಶಿ ಉಮೇಶ್ ಮಣಿಕ್ಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading