Ad Widget

ಸುಬ್ರಹ್ಮಣ್ಯ : ರೋಟರಿಯಿಂದ ಸರಕಾರಿ ಶಾಲೆಗೆ ವಿವಿಧ ಕೊಡುಗೆಗಳ ಹಸ್ತಾಂತರ

ಸುಬ್ರಹ್ಮಣ್ಯ : ರೋಟರಿ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಬೆಂಗಳೂರು ಜಾಲಹಳ್ಳಿ, ರೋಟರಿ ಕ್ಲಬ್ ಬೆಂಗಳೂರು ಸೆಂಟ್ರಲ್, ರೋಟರಿ ಕ್ಲಬ್ ತುರುವೇಕೆರೆ ವತಿಯಿಂದ ವಿವಿಧ ಕೊಡುಗೆಗಳನ್ನು ಶನಿವಾರ ಹಸ್ತಾಂತರಿಸಲಾಯಿತು.
ವಿವಿಧ ಕೊಡುಗೆಗಳು : ರೋಟರಿ ಕ್ಲಬ್‌ಗಳ ಜಾಯಿಂಟ್ ಪ್ರೊಜೆಕ್ಟ್ ಕಾರ್ಯಕ್ರಮದಡಿಯಲ್ಲಿ ಸುಬ್ರಹ್ಮಣ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಸ್‌ಎಸ್‌ಪಿಯು ಪ್ರೌಢಶಾಲಾ ವಿಭಾಗಕ್ಕೆ ವಿವಿಧ ಕೊಡುಗೆಗಳನ್ನು ಎಸ್‌ಎಸ್‌ಪಿಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಲಾಯಿತು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಯಾನಿಟರಿ ಪರಿಕರಗಳು, ಅಗ್ನಿ ನಿರೋಧಕ ಸಾಧನ, ಬೆಂಕಿ ನಂದಿಸುವ ಸಾಧನಗಳನ್ನು, ಪುಸ್ತಕ ಮತ್ತು ಲೇಖನಿ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.
ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಕಲರ್ ಪ್ರಿಂಟರ್, ಸ್ಯಾನಿಟರಿ ಸಾಮಾಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಅಧ್ಯಕ್ಷ ಜಯಪ್ರಕಾಶ್.ಆರ್ ವಹಿಸಿದ್ದರು.
ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯಗುರು ಮಾಧವ ಮೂಕಮಲೆ, ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕಿ ನಂದಾ ಹರೀಶ್ ಮುಖ್ಯಅತಿಥಿಗಳಾಗಿದ್ದರು.
ರೋಟರಿ ಜಾಲಹಳ್ಳಿ ಅಧ್ಯಕ್ಷೆ ರಮಣಿ, ಬೆಂಗಳೂರು ಸೆಂಟ್ರಲ್ ಅಧ್ಯಕ್ಷ ಚಂದ್ರಶೇಖರ್, ರೋಟರಿ ತುರುವೇಕೆರೆ ಅಧ್ಯಕ್ಷ ಉಮೇಶ್ ವಿ.ಆರ್, ಸುಬ್ರಹ್ಮಣ್ಯ ರೋಟರಿ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ಪೂರ್ವಾಧ್ಯಕ್ಷ ಲೋಕೇಶ್ ಬಿ.ಎನ್ ವೇದಿಕೆಯಲ್ಲಿದ್ದರು.ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading