Ad Widget

ಮುರುಳ್ಯ : ರಸ್ತೆಯಲ್ಲಿದ್ದ ಅಪಾಯಕಾರಿ ಗುಂಡಿಗಳನ್ನು ಮುಚ್ಚಿದ ಗ್ರಾಮಸ್ಥರು – ರಸ್ತೆ ದುರಸ್ತಿಗೆ ನಾಗರಿಕರ ಆಗ್ರಹ

ಮುರುಳ್ಯ ಗ್ರಾಮ ಬೊಬ್ಬೆಕೇರಿ ಸಮೀಪ ಮಂಜೇಶ್ವರ – ಕುಕ್ಕೆ ಸುಬ್ರಮಣ್ಯ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗುಂಡಿ ಗಳಿಂದ ಕೂಡಿದ್ದು ಅಪಾಯಕ್ಕೆ ಆಹ್ವಾನಿಸುವಂತಿದೆ. ಈ ಹಿಂದೆ ಗುಂಡಿ ತಪ್ಪಿಸಲು ಹೋಗಿ ಹಲವಾರು ಅಪಘಾತಗಳು ನಡೆದಿವೆ. ಹದಗೆಟ್ಟ ರಸ್ತೆಯನ್ನು ಮುರುಳ್ಯ ಗ್ರಾಮ ಯುವಕರು ಕಲ್ಲು ಮಣ್ಣು ಹಾಕಿ ಮುಚ್ಚಿದ್ದಾರೆ. ಈ ದುರಸ್ಥಿ ಕಾರ್ಯಕ್ಕೆ ಇಬ್ರಾಹಿಂ ಕಲೀಲ್ ಹುದೇರಿ, ಮುಸ್ತಫಾ. ಸಮಹಾದಿ, ಆನ್ಪಾಲ್ ಶಾ ರಾಗಿಪೇಟೆ ಹಾಗೂ ಇತರರು ಸಹಕರಿಸಿದರು. ಈ ರಸ್ತೆಯ ದುರಸ್ತಿಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಗ್ರಾಮಸ್ಥರ ಅಗ್ರಹಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading