Ad Widget

ಕುಕ್ಕೆ ಸುಬ್ರಹ್ಮಣ್ಯ : ಚಂದ್ರಗ್ರಹಣದ ಹಿನ್ನೆಲೆ ದೇವಸ್ಥಾನದಲ್ಲಿ ಸೆ.07 ರಂದು ಭಕ್ತಾದಿಗಳಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.07 ಆದಿತ್ಯವಾರದಂದು ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಸದರಿ ದಿನದಂದು ಭಕ್ತಾದಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆಯಾಗಲಿದ್ದು, ಶ್ರೀ ದೇವರ ದರ್ಶನ ಹಾಗೂ ಸೇವಾ ಸಮಯ ಈ ಕೆಳಗಿನಂತಿದೆ,
ಸೆ.07 ರಂದು ಮದ್ಯಾಹ್ನದ ಮಹಾಪೂಜೆ 11:00 ಗಂಟೆಗೆ, ರಾತ್ರಿ ಮಹಾಪೂಜೆ ಸಾಯಂಕಾಲ 5:00 ಗಂಟೆಗೆ, ರಾತ್ರಿ ಪ್ರಸಾದ ಭೋಜನ ಇರುವುದಿಲ್ಲ, ಸಾಯಂಕಾಲ ಆಶ್ಲೇಷ ಬಲಿ ಸೇವೆ ಇರುವುದಿಲ್ಲ, ಸಾಯಂಕಾಲ ಸಂಜೆ 5:00 ಗಂಟೆಯಿಂದ ಶ್ರೀ ದೇವರ ದರ್ಶನ ಇರುವುದಿಲ್ಲ, ಸರ್ಪಸಂಸ್ಕಾರ ಸೇವೆ ಪ್ರಾರಂಭ ಇರುವುದಿಲ್ಲ ಹಾಗೂ ಗ್ರಹಣದ ಮರುದಿವಸ ಸೆ.08 ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಗ್ರಹಣ ಸ್ಪರ್ಶ : ರಾತ್ರಿ ಗಂಟೆ 9:57
ಗ್ರಹಣ ಮೋಕ್ಷ : ರಾತ್ರಿ ಗಂಟೆ 1:27

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading