Ad Widget

ಅಜ್ಜಾವರ : ತಾಲೂಕು ಮಟ್ಟದ ಮಕ್ಕಳ ಫುಟ್ ಬಾಲ್ ಪಂದ್ಯಾಟ

ಸುಳ್ಯ ತಾಲೂಕು ಮಟ್ಟದ 14 ಮತ್ತು 17ರ ವಯೋಮಾನದ ಮಕ್ಕಳ ಫುಟ್ ಬಾಲ್ ಪಂದ್ಯಾಟವು ಸರಕಾರಿ ಪ್ರೌಢಶಾಲೆ ಅಜ್ಜಾವರ ಮತ್ತು  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಪಂಗಾಯ ಎರಡೂ ಶಾಲೆಗಳ ಜಂಟಿ ಆಶ್ರಯದಲ್ಲಿ  ಅಜ್ಜಾವರ ಪ್ರೌಢಶಾಲಾ  ಮೈದಾನದಲ್ಲಿ ಸೆ.02 ರಂದು ನಡೆಯಿತು.
ಇದರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕಣೆಮರಡ್ಕ ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ನೆರವೇರಿಸಿದರು.
ಕ್ರೀಡಾಂಗಣ ಉದ್ಘಾಟನೆಯನ್ನು ಅಜ್ಜಾವರ ಗ್ರಾಮಪಂಚಾಯತ್ ಅಧ್ಯಕ್ಷ ರಾದ ದೇವಕಿ ಪಲ್ಲತ್ತಡ್ಕ ಹಾಗೂ ಉಪಾಧ್ಯಕ್ಷರಾದ ಅಬ್ದುಲ್ಲಾ ನೆರವೇರಿಸಿದರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಾಹುಲ್ ಅಡ್ಪಂಗಾಯ, ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಅಬ್ಬಾಸ್.ಎ.ಬಿ, ಪ್ರೌಢಶಾಲಾ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶೌಕತ್ ಅಲಿ, ನಿವೃತ್ತ ಶಿಕ್ಷಕರಾದ ಲೋಕಯ್ಯ ಗೌಡ  ಅತ್ಯಾಡಿ, ನಿವೃತ್ತ ಶಿಕ್ಷಕರಾದ ಯಶೋಧರ ನಾರಾಲು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಣಿ ಸದಸ್ಯರಾಗಿರುವ ರಾಮಚಂದ್ರ ಪಲ್ಲತಡ್ಕ, ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಪ್ರತಾಪ ಯುವಕ ಮಂಡಲದ ಅಧ್ಯಕ್ಷರಾದ ಗುರುರಾಜ್ ಅಜ್ಜಾವರ, ಚೈತ್ರ ಯುವತಿ ಮಂಡಲದ  ಅಧ್ಯಕ್ಷರಾದ ಶಶ್ಮಿ  ಭಟ್ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಗುರುಗಳಾದ ಗೋಪಿನಾಥ್ ಮೆತಡ್ಕ ಸ್ವಾಗತಿಸಿ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾದ ಸುರೇಖಾ ರೈ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮವನ್ನು ಶಿಕ್ಷಕರಾದ ನಿರಂಜನ.ಎಂ.ಜೆ, ಚಂದ್ರಶೇಖರ್ ಭಟ್ ಹಾಗೂ ಸಪ್ನಾ ನಿರೂಪಿಸಿದರು.
ಈ ಪಂದ್ಯಕೂಟದಲ್ಲಿ 14ರ ವಯೋಮಾನ ಮತ್ತು 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅಜ್ಜಾವರ ಪ್ರೌಢಶಾಲೆ ಎರಡು ಪ್ರಥಮ ಬಹುಮಾನ ಹಾಗೂ 17ರ ವಯಮಾನದ ಬಾಲಕರ ವಿಭಾಗದಲ್ಲೂ ಅಜ್ಜಾವರ ಪ್ರೌಢಶಾಲೆ ಪ್ರಥಮ ಬಹುಮಾನವನ್ನು ಪಡೆದುಕೊಂಡಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading