Ad Widget

ನಟ ವಿಷ್ಣುವರ್ಧನ್‌ ರವರ ಸ್ಮಾರಕವನ್ನು ಸರಕಾರ ಕೂಡಲೇ ನಿರ್ಮಿಸುವಂತೆ  ಸುಳ್ಯದ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘ ಮನವಿ

“2009 ಡಿ.30 ರಂದು ಅಗಲಿದ ಕನ್ನಡ ಚಿತ್ರರಂಗದ ಜನಪ್ರಿಯ ನಟ ಡಾ. ವಿಷ್ಣುವರ್ಧನ್‌ರವರ ಅವರ ಅಂತ್ಯಸಂಸ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ಸಂಸ್ಕಾರ ನಡೆಸಲಾಗಿತ್ತು. ಬಳಿಕ ಅದೇ ಜಾಗದಲ್ಲಿ ಸ್ಮಾರಕ ನಿರ್ಮಿಸಬೇಕೆಂದು ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಒತ್ತಾಯಿಸಿದ ಮೇರೆಗೆ 2010-11ರಲ್ಲಿ ರಾಜ್ಯ ಸರಕಾರ ಬಜೆಟ್‌ನಲ್ಲಿ 11 ಕೋಟಿ ರೂ. ಅನುದಾನ ಗೋಷಿಸಿತ್ತು. ಆದರೆ ಈ ಅಭಿಮಾನ್ ಸ್ಟುಡಿಯೋಗೆ ಸಂಬಂಧಪಟ್ಟಂತೆ ಬಾಲಕೃಷ್ಣ ಎಂಬವರು 20 ಎಕ್ರೆ ಜಾಗವನ್ನು ಸರಕಾರದಿಂದ ಲೀಸ್‌ಗೆ ಪಡೆದಿದ್ದು, 10 ಎಕ್ರೆ ಜಾಗವನ್ನು ಮಾರಾಟ ಮಾಡಿದ್ದಾರೆ. ಉಳಿದ 10 ಎಕ್ರೆ ಜಾಗದಲ್ಲಿ ಸ್ಟುಡಿಯೋ ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಅವರು ಸದ್ರಿ ಸ್ಟುಡಿಯೋವನ್ನು ಅಭಿವೃದ್ಧಿ ಪಡಿಸಿರುವುದಿಲ್ಲ. ಸ್ಟುಡಿಯೋ ಇರುವ ಜಾಗವನ್ನು ಸರಕಾರ ವಶಪಡಿಸಿಕೊಳ್ಳಬೇಕು ಮತ್ತು 2025ನೇ ಆಗಸ್ಟ್ 7ರಂದು ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್‌ರವರ ಸ್ಮಾರಕವನ್ನು ನೆಲಸಮಮಾಡಿರುವುದು ಕನ್ನಡ ನಾಡಿನ ಕೋಟ್ಯಾಂತರ ಅಭಿಮಾನಿಗಳಿಗೆ ನೋವಾಗಿದ್ದು ಕೂಡಲೇ ಸರಕಾರ ಅಂತ್ಯಸಂಸ್ಕಾರ ನಡೆದ ಸ್ಥಳದಲ್ಲಿಯೇ ಡಾ. ವಿಷ್ಣುವರ್ಧನ್‌ರವರ ಸ್ಮಾರಕವನ್ನು ಸರಕಾರದ ಅನುದಾನದಲ್ಲಿ ಕೂಡಲೇ ನಿರ್ಮಿಸಿಕೊಡಬೇಕೆಂದು ಸರಕಾರ ನೀಡಿದ ಮನವಿಯಲ್ಲಿ ತಿಳಿಸಿದ್ದೇವೆ” ಎಂದು ಸುಳ್ಯದ ಡಾ. ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಂಡಿತ್ ಹೇಳಿದ್ದಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading