Ad Widget

ಮುಖ್ಯಮಂತ್ರಿಯ ದಿನಕ್ಕೊಂದು ಹೇಳಿಕೆ ಬಿಜೆಪಿ ಹಾಗೂ ಸಮಾಜ ಒಪ್ಪುವಂಥದಲ್ಲಾ – ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬದಲು ಸತ್ಯಾಸತ್ಯತೆಯನ್ನು ಶೀಘ್ರವಾಗಿ ಜನರಿಗೆ ತಿಳಿಸಿ – ವೆಂಕಟ್ ವಳಲಂಬೆ

ಮುಖ್ಯಮoತ್ರಿ ಸಿದ್ದರಾಮಯ್ಯನವರೇ ನೀವು ಸ್ಪಷ್ಟಪಡಿಸಿ ಯಾರ ಪರ ಎಂದು. ನಾವು ಬಹಿರಂಗವಾಗಿ ಸಾವಿರಾರು ಭಕ್ತರ ಮುಂದೆ ಧರ್ಮಸ್ಥಳದಲ್ಲಿ ಬಹಿರಂಗ ಸಭೆಯಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವ ನಿಮ್ಮ ಕಾಂಗ್ರೆಸ್ಸಿನ ಹಾಗೂ ಇದರ ಹಿಂದಿರುವ ನಿಮ್ಮ ಪ್ರೇರಣೆಯ ದುಷ್ಟ ಶಕ್ತಿಗಳ ನಿಜಬಣ್ಣವನ್ನು ಸಮಾಜಕ್ಕೂ ಸ್ಪಷ್ಟಪಡಿಸಿದೆ. ಕಾಂಗ್ರೆಸ್ಸು ಪದೇ ಪದೇ ಬಿಜೆಪಿಯ ಮೇಲೆ ಗೂಬೆ ಕೂರಿಸಿ ಜನರನ್ನು ತಪ್ಪುದಾರಿಗೆ ಎಳೆಯುವ ಕಾರ್ಯ ಮಾಡುತ್ತಿದೆ.  ಒಬ್ಬ ರಾಜ್ಯದ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಬಿಜೆಪಿಯ ಮೇಲೆ ಆರೋಪ ಹೊರಿಸಲು ಕಾರಣ ನಿಮ್ಮ ಒಳಗುಟ್ಟು ಒಂದೊಂದೇ ಈ ಹೇಳಿಕೆಯಿಂದ ಹೊರ ಬರುತ್ತಿದೆ. ಮೀನು ತಿಂದು ಕ್ಷೇತ್ರಕ್ಕೆ ಹೋದರೆ ಏನಾಗಬಹುದು ಎಂದು ಹೇಳುವ ನಿಮಗೆ ಧಾರ್ಮಿಕ ಆಚರಣೆಯ ಹಿಂದೂ ಸಂಪ್ರದಾಯವನ್ನು ಮರೆಮಾಚುವ ಕಾರ್ಯ ಇಂದು ನಿನ್ನೆಯದಲ್ಲ.‌ ಮುಂದಿನ ದಿನಗಳಲ್ಲಿ ರಾಜ್ಯದ ಹಿಂದೂ ಸಮಾಜದ ಪ್ರತಿಯೊಬ್ಬರು ಎಚ್ಚರಿಕೆಯ ಹೆಜ್ಜೆಯನ್ನು ಇರಿಸಿ ಇಂತಹ ದುಷ್ಟ ಶಕ್ತಿಗಳ ವಿರುದ್ಧ ಪಕ್ಷಾತೀತವಾಗಿ ಹಿಂದೂ ಸಮಾಜದ ಜೊತೆಗೆ ಕೈ ಜೋಡಿಸಬೇಕಾಗಿದೆ. ಕಾಂಗ್ರೆಸ್ಸಿನ ವಿವಿಧ ನಾಯಕರು ಕೂಡ ಎರಡು ದೋಣಿಗೆ ಕಾಲಿರಿಸದೆ ಒಂದೇ ದೋಣಿಯಲ್ಲಿ ಸಾಗಿದರೆ ಹಿಂದೂ ಸಮಾಜದಿಂದ ಹುಟ್ಟಿದಕ್ಕೆ ಅಲ್ಪ ಸಾರ್ಥಕತೆ ಸಿಗಬಹುದು. ಇಲ್ಲದಿದ್ದರೆ ರಾಜನ ಜೊತೆ ಸೈನಿಕರು ಕೂಡಾ ಗುಳೆ ಹೋಗುವುದು ನಿಶ್ಚಿತ. ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬದಲು ಸತ್ಯಾಸತ್ಯತೆಯನ್ನು ಅಲ್ಪ ಸಮಯದಲ್ಲೇ ತಿಳಿಸಿದರೆ ಒಳಿತು.‌ ನಿಮಗೆ ರಾಜಕೀಯ ದಾಳಕ್ಕಾಗಿ ಈ ವಿಚಾರ ಮುಗಿಸಲು ಇಷ್ಟವಿಲ್ಲ. ಮುಂದಿನ ನಿಮ್ಮ ಅಧಿಕಾರ ಇರುವ ತನಕ ರಾಜ್ಯದ ಅಭಿವೃದ್ಧಿಯನ್ನು ಮಾಡಲಾಗದೆ ಇಂತಹ ವಿಚಾರಗಳನ್ನೇ ದಿನ ಬೆಳಗಾದರೆ ಬಿಂಬಿಸಿ ದಿನ ಕಳೆಯುವ ಮತ್ತು ನಮ್ಮ ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ವಿಚಾರವನ್ನು ಹಿಂದೂ ಸಮಾಜ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವುದು ನಿಮಗೆ ಸಹಿಸಲು ಅಸಾಧ್ಯ. ಮೊನ್ನೆ ನಡೆದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೂ ಅಡ್ಡಿ ಪಡಿಸಿ ಧಾರ್ಮಿಕ ವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿರುವ ನೋವಿನ ಗಾಯಕ್ಕೆ ಮತ್ತೇ ಬರೆ ಎಳೆಯುವ ಪ್ರಯತ್ನ ನಡೆಸಿದರೆ ಸಫಲತೆಯನ್ನು ಕಾಣುವುದು ಅಸಾಧ್ಯವೆಂದು ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading