Ad Widget

ಕಲ್ಲುಗುಂಡಿ : ಟ್ಯಾಂಕರ್ ಹಾಗೂ ಕಾರು ಅಪಘಾತ ; ಮಹಿಳೆ ಮೃತ್ಯು

ಕಲ್ಲುಗುಂಡಿಯ ಕಡೆಪಾಲದಲ್ಲಿ ಟ್ಯಾಂಕರ್ ಮತ್ತು ಕಾರಿನ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡ ಕಾರಿನಲ್ಲಿದ್ದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಇತರರೂ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಕೈ ಬರಹದ ಮೂಲಕ ಪವಿತ್ರ ಕುರ್ ಆನ್ ಬರೆದು ಸಾಧನೆ ಮಾಡಿದ ಯುವತಿಗೆ ಸುಳ್ಯದ ಮುಖಂಡರಿಂದ ಅಭಿನಂದನೆ ; “ಸಮರ್ಪಣೆ, ತಾಳ್ಮೆ ಮತ್ತು ತ್ಯಾಗ ಸಾದನೆಯ ರಹದಾರಿ” – ಕೆ.ಎಂ ಮುಸ್ತಫ

ಪುತ್ತೂರಿನ ಬೈತಡ್ಕ ಜುಮಾ ಮಸ್ಜಿದ್ ಮಾಜಿ ಅಧ್ಯಕ್ಷ ಹಾಜಿ ಬಿ.ಪಿ ಇಸ್ಮಾಯಿಲ್ ರವರ ಪುತ್ರಿ ಫಾತಿಮತ್ ಸಜ್ ಲಾ ತನ್ನ ಕಾಲೇಜು ವಿದ್ಯಾಭ್ಯಾಸದ ಜತೆಗೆ ಪವಿತ್ರ ಕುರಾನ್ ಅನ್ನು ಕೈ ಬರಹದ ಮೂಲಕ ಬರೆದು ಅಪೂರ್ವ ಸಾಧನೆ ಮಾಡಿರುತ್ತಾರೆ ಇವರ ಸಾಧನೆಯನ್ನು ಗುರುತಿಸಿ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅವರ ಮನೆಗೆ ತೆರಳಿ ಸನ್ಮಾನಿಸಿದರು.‌ಸನ್ಮಾನ...
Ad Widget

ಮುಖ್ಯಮಂತ್ರಿಯ ದಿನಕ್ಕೊಂದು ಹೇಳಿಕೆ ಬಿಜೆಪಿ ಹಾಗೂ ಸಮಾಜ ಒಪ್ಪುವಂಥದಲ್ಲಾ – ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಬದಲು ಸತ್ಯಾಸತ್ಯತೆಯನ್ನು ಶೀಘ್ರವಾಗಿ ಜನರಿಗೆ ತಿಳಿಸಿ – ವೆಂಕಟ್ ವಳಲಂಬೆ

ಮುಖ್ಯಮoತ್ರಿ ಸಿದ್ದರಾಮಯ್ಯನವರೇ ನೀವು ಸ್ಪಷ್ಟಪಡಿಸಿ ಯಾರ ಪರ ಎಂದು. ನಾವು ಬಹಿರಂಗವಾಗಿ ಸಾವಿರಾರು ಭಕ್ತರ ಮುಂದೆ ಧರ್ಮಸ್ಥಳದಲ್ಲಿ ಬಹಿರಂಗ ಸಭೆಯಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವ ನಿಮ್ಮ ಕಾಂಗ್ರೆಸ್ಸಿನ ಹಾಗೂ ಇದರ ಹಿಂದಿರುವ ನಿಮ್ಮ ಪ್ರೇರಣೆಯ ದುಷ್ಟ ಶಕ್ತಿಗಳ ನಿಜಬಣ್ಣವನ್ನು ಸಮಾಜಕ್ಕೂ ಸ್ಪಷ್ಟಪಡಿಸಿದೆ. ಕಾಂಗ್ರೆಸ್ಸು ಪದೇ ಪದೇ ಬಿಜೆಪಿಯ ಮೇಲೆ ಗೂಬೆ ಕೂರಿಸಿ ಜನರನ್ನು...

ಕಲ್ಚರ್ಪೆ ಸಿರಿಕುರಲ್ ನಗರದಲ್ಲಿ ಕಾಡಾನೆ ದಾಳಿ ಕೃಷಿ ನಾಶ

ಆಲೆಟ್ಟಿ ಗ್ರಾಮದ ಕಲ್ಚರ್ಪೆ ಸಿರಿಕುರಲ್ ನಗರದಲ್ಲಿ ನಿನ್ನೆ ರಾತ್ರಿ ಕಾಡಾನೆ ಹಿಂಡು ದಾಳಿ ಮಾಡಿ ಅಪಾರ ಕೃಷಿ ನಾಶ ಹೊಂದಿದೆ. ಸಿರಿಕುರಲ್ ನಗರ ನಿವಾಸಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಕುಲ್ ದಾಸ್ ರವರ ತೆಂಗಿನ ಮರಗಳು ಸೇರಿದಂತೆ ಸ್ಥಳೀಯ ನಿವಾಸಿಗಳ ಕೃಷಿ ಬೆಳೆಗಳು ಕಾಡಾನೆ ದಾಳಿಯಿಂದ ನಾಶವಾಗಿದೆ. ಅಪಾರ ನಷ್ಟ ಅನುಭವಿಸಿದ ಸ್ಥಳೀಯರು ಕಾಡಾನೆ...

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರೋತ್ಸಾಹ ಪ್ರಶಸ್ತಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರೋತ್ಸಾಹ ಪ್ರಶಸ್ತಿ ದೊರಕಿದ್ದು, ಮಂಗಳೂರಿನಲ್ಲಿ ನಡೆದ ಡಿ.ಸಿ.ಸಿ ಬ್ಯಾಂಕ್ ನ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಡಾ| ರಾಜೇಂದ್ರ ಕುಮಾರ್ ರವರು ಪ್ರಶಸ್ತಿ ವಿತರಿಸಿದರು.ಸಂಘದ ಅಧ್ಯಕ್ಷರಾದ ಡಾ| ಸೋಮಶೇಖರ್ ಕಟ್ಟೆಮನೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ...

ಗಾಂಧಿನಗರ ಕೆ.ಪಿ.ಎಸ್ ನ ಪಿ.ಯು ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ.) ಸುಳ್ಯ ತಾಲೂಕು, ಸುಳ್ಯ ವಲಯ ಗಾಂಧಿನಗರ ಕಾರ್ಯಕ್ಷೇತ್ರದ ಗಾಂಧಿನಗರ ಕೆ.ಪಿ.ಎಸ್ ನ ಪಿಯು ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತುಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ| ಅನುರಾಧಾ ಕುರಂಜಿಯವರು "ದುಶ್ಚಟಕ್ಕೆ ಬಲಿಯಾಗಿ ಅನುಭವಿಸುವ ಕಷ್ಟ ನಷ್ಟಗಳು ಮತ್ತು ಕೌಟುಂಬಿಕ ಹಾಗೂ ಸಾಮಾಜಿಕವಾಗಿ ಇದರಿಂದ ಆಗುವ ಸಮಸ್ಯೆಗಳನ್ನು"...

ಕುಕ್ಕೆ ಸುಬ್ರಹ್ಮಣ್ಯ ದೇವಳದ ಸುತ್ತಮುತ್ತ ಅಭಿವೃದ್ಧಿಗೆ ತಾಂಬೂಲ ಪ್ರಶ್ನೆ ಚಿಂತನೆ

ಸುಬ್ರಹ್ಮಣ್ಯ:ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಹಾಗೂ ಕಾಶಿಕಟ್ಟೆ ಗಣಪತಿ ಗುಡಿಯ ಸುತ್ತಮುತ್ತ ಅಭಿವೃದ್ಧಿಪಡಿಸುವ ಉದ್ದೇಶದಿಂದ ತಾಂಬೂಲ ಪ್ರಶ್ನೆ ಚಿಂತನೆಯು ಸೆಪ್ಟೆಂಬರ್ 2ರಂದು ಮಂಗಳವಾರ, ಪೂರ್ವಾಹ್ನ 10.30ಕ್ಕೆ ದೇವಳ ಆಡಳಿತ ಕಛೇರಿಯ 2ನೇ ಮಹಡಿಯಲ್ಲಿ ನೆರವೇರಿತು.ಈ ಸಂದರ್ಭದಲ್ಲಿ ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರ ಗುರು ತಂತ್ರಿ ಹಾಗೂ ಶಶಿ ಪಂಡಿತ್ ತಾಂಬೂಲ ಜೋತಿಷ್ಯ ಪ್ರಶ್ನೆಯನ್ನು ನಡೆಸಿದರು.ಕಾರ್ಯಕ್ರಮದಲ್ಲಿ...

ಕುಕ್ಕೆ ಸುಬ್ರಹ್ಮಣ್ಯ : ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದ 55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ – ಶ್ರೀ ಮಹಾಗಣಪತಿ ದೇವರಿಗೆ ರಜತ ಪ್ರಭಾವಳಿ ಸಮರ್ಪಣೆ ; ಸರ್ವಾಲಂಕೃತ ರಥದಲ್ಲಿ ವೈಭವದಿಂದ ನಡೆದ ಶ್ರೀ ಗಣೇಶ ದೇವರ ಶೋಭಾಯಾತ್ರೆ ಹಾಗೂ ವಿಸರ್ಜನೆ

(ವರದಿ : ಉಲ್ಲಾಸ್ ಕಜ್ಜೋಡಿ) ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ(ರಿ.) ಕುಕ್ಕೆ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ “55ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ”ವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆ.27 ರಿಂದ ಸೆ.02 ರವರೆಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯ ಪಕ್ಕದಲ್ಲಿರುವ ಸಭಾಂಗಣದಲ್ಲಿ ನಡೆಯಿತು.ಮೊದಲ ದಿನವಾದ ಜು.27 ರಂದು ಪೂರ್ವಾಹ್ನ ಗಣಪತಿ ಪ್ರತಿಷ್ಠಾಪನೆ ನಡೆದು...

ಪೈಚಾರು : ಮರದಿಂದ ಬಿದ್ದು ಉಮೇಶ್ ಗೌಡ ಆರ್ತಾಜೆ ಮೃತ್ಯು

ಪೈಚಾರ್ ನಿವಾಸಿ, ಆರ್ತಾಜೆ ಉಮೇಶ್ ಗೌಡರು ಕೃಷಿ ಚಟುವಟಿಕೆಯ ವೇಳೆ ಮರದಿಂದ ಬಿದ್ದು ಜಖಂಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಸೆ.02 ರಂದು ಸಂಜೆ ವರದಿಯಾಗಿದೆ. ಅವರಿಗೆ ಸುಮಾರು 50 ವರ್ಷ ವಯಸ್ಸಾಗಿತ್ತು. ಮರದಿಂದ ಬಿದ್ದು ಗಂಭೀರ ಗಾಯಗೊಂಡ ಉಮೇಶ್ ರವರನ್ನು ಚಿಕಿತ್ಸೆಗೆಂದು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೆವಿಜಿ ಆಸ್ಪತ್ರೆಗೆ ದಾಖಲಿಸಿದರಾದರೂ...

ಬೂಡು – ಅಪಾಯಕಾರಿ ಸ್ಥಿತಿಯಲ್ಲಿರುವ ಕಾಲು ಸೇತುವೆ ದುರಸ್ತಿಗೆ ವಿಳಂಬ ಏಕೆ?

ಬೆಳ್ಳಾರೆ ಗ್ರಾಮದ ಬೀಡು ಹೊಳೆಯ ಕಾಲು ಸೇತುವೆಯ ತಡೆಬೇಲಿ ಮರಬಿದ್ದು ಜಖಂಗೊಂಡಿದ್ದು, ಒಂದು ಭಾಗದ ತಡೆ ಬೇಲಿ ಮಳೆಗೆ ಕೊಚ್ಚಿ ಹೋಗಿ ಅಪಾಯ ಆಹ್ವಾನಿಸುತ್ತಿದೆ. ತಡೆಬೇಲಿ ಇಲ್ಲದೇ ಒಂದೂವರೆ ತಿಂಗಳು ಕಳೆದರೂ ಸ್ಥಳೀಯಾಡಳಿತ ಇದರ ಬಗ್ಗೆ ಗಮನ ಹರಿಸಿಲ್ಲ.‌ ಜನಪ್ರತಿನಿಧಿಗಳು ಮಳೆಗಾಲ ಕಳೆಯಲಿ ಮತ್ತೆ ಸರಿಪಡಿಸೋಣ ಎಂದು ಕುಳಿತಿದ್ದಾರೆ. . ಈ ಕಾಲು ಸೇತುವೆಗೆ ಹತ್ತುವಲ್ಲಿ...
Loading posts...

All posts loaded

No more posts

error: Content is protected !!