Ad Widget

ಸುಳ್ಯ : ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘಕ್ಕೆ ಪಾತಿಕಲ್ಲು ಸಹೋದರರಿಂದ ಭೋಜನಶಾಲೆ ಕೊಡುಗೆ

ಸುಳ್ಯ : ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘಕ್ಕೆ ಭಾರತ್ ಇಂಡಸ್ಟೀಸ್ ನ ಪಾತಿಕಲ್ಲು ಸಹೋದರರಾದ ಪದ್ಮನಾಭ, ಬಾಲಕೃಷ್ಣ ಹಾಗೂ ಆನಂದ ಇವರು ಭೋಜನ ಶಾಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ.‌

. . . . . . . . .

ಭೋಜನ ಶಾಲೆಯ ಉದ್ಘಾಟನೆ ಸೆ.02 ರಂದು ನಡೆಯಿತು.‌ ಇದರ ಉದ್ಘಾಟನೆಯನ್ನು ಮಾಜಿ ತಾ.ಪಂ.ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ ನೆರವೇರಿಸಿದರು.‌

. . . . . . .

ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಸುಧಾಕರ ರೈ ನೆಟ್ ಕಾಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಪ್ರ.ಕಾರ್ಯದರ್ಶಿ
ಡಿ.ಎಸ್.ಗಿರೀಶ್ , ಖಜಾಂಜಿ ಹೇಮಂತ್ ಕಾಮತ್, ಉಪಾಧ್ಯಕ್ಷರುಗಳಾದ ರಾಮಚಂದ್ರ ಭಾರತ್ ಆಗ್ರೋ, ಸಿಎ ಗಣೇಶ್ ಭಟ್, ಪ್ರಭಾಕರ ನಾಯರ್, ಹಮೀದ್ ಜನತಾ ಹಾಗೂ ಆದಂ ಕಮ್ಮಾಡಿ, ಸಂಘದ ನಿರ್ದೇಶಕ ಜಾಲ್ಸೂರಿನ ನಿವೃತ್ತ ಡಿವೈಎಸ್ ಪಿ ಮಂಜುನಾಥ ರೈ ಸೇರಿದಂತೆ ಇತರ ನಿರ್ದೆಶಕರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಭೋಜನ ಶಾಲೆ ಕೊಡುಗೆಯಾಗಿ ನೀಡಿದ ಪಾತಿಕಲ್ಲು ಸಹೋದರರ ಪರವಾಗಿ ಪದ್ಮನಾಭ ಪಾತಿಕಲ್ಲು, ಸಂಘಕ್ಕೆ ಜಾಗ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಯಪ್ರಕಾಶ್ ಕುಂಚಡ್ಕ, ಭೋಜನಶಾಲೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ ಇಂಜಿನಿಯರ್ ಶ್ಯಾಂ ಪ್ರಸಾದ್ ಅಡ್ಡಂತಡ್ಕ ಇವರನ್ನು ಸನ್ಮಾನಿಸಲಾಯಿತು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading