Ad Widget

ಕಾಯರ್ತೋಡಿ : ಶ್ರೀನಿಧಿ ಮಹಿಳಾ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ; ಶ್ರೀ ಗಣೇಶೋತ್ಸವ ಪ್ರಯುಕ್ತ ವಿವಿಧ ಸ್ಪರ್ಧೆ ; ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಕಾಯರ್ತೋಡಿ: ಪಡ್ಪು-ಕಾಯರ್ತೋಡಿ-ಸೂರ್ತಿಲದ ಶ್ರೀನಿಧಿ ಮಹಿಳಾ ಮಂಡಲ(ರಿ.) ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು 25ನೇ ವರ್ಷದ ಶ್ರೀ ಗಣೇಶೋತ್ಸವದ ಪ್ರಯುಕ್ತ ವಿವಿಧ ಸ್ಪರ್ಧಾ ಕಾರ್ಯಕ್ರಮ ಆ.31ರಂದು ಶ್ರೀನಿಧಿ ಮಹಿಳಾ ಮಂಡಲ ಸಭಾಂಗಣದ ವಠಾರದಲ್ಲಿ ನಡೆಯಿತು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಕಲಾವತಿ ತೀರ್ಥರಾಮ ವಹಿಸಿದ್ದರು.
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಪದಗ್ರಹಣ ನೆರವೇರಿಸಿದರು.
ಸೂರ್ತಿಲ ಶ್ರೀ ರಕ್ತೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ ಸ್ಪರ್ಧಾ ಕಾರ್ಯಕ್ರಮಗಳ ಉದ್ಘಾಟಸಿದರು.
ಶ್ರೀಮತಿ ಜಯಮಾಲ ಶಿವಪ್ರಕಾಶ್ ಸ್ವಾಗತಿಸಿದರು.
ಪ್ರಾರ್ಥನೆಯನ್ನು ಶ್ರೀಮತಿ ಶಾರದ ಜಯರಾಮ, ಶ್ರೀಮತಿ ಅರ್ಪಿತಾ ಅನಿಲ್, ಶ್ರೀಮತಿ ರತ್ನ ವೆಂಕಟೇಶ್ ನೆರವೇರಿಸಿದರು.
ಶ್ರೀಮತಿ ಹೇಮಾ ವೇಣುಗೋಪಾಲ್ ಮತ್ತು ಶ್ರೀಮತಿ ಲತಾ ರಾಧಾಕೃಷ್ಣ ನಿರ್ವಹಿಸಿದರು. ಶ್ರೀಮತಿ ರಶ್ಮಿ ಉಂಪೇದ್ರ ವಂದಿಸಿದರು.
ಸಂಜೆ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ ನಡೆಯಿತು. 
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಮಂಡಲದ ಸದಸ್ಯರ ಮಕ್ಕಳಾದ ಭೂಮಿಕಾ.ವಿ.ಕೆ, ತನ್ವಿ.ಕೆ.ಟಿ, ಅನುಷಾ.ಕೆ ರವರ ವಿವಿಧ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. 
ಕಾಯರ್ತೋಡಿ ಶ್ರೀನಿಧಿ ಮಹಿಳಾ ಮಂಡಲದ ನೂತನ ಅಧ್ಯಕ್ಷೆ ಶ್ರೀಮತಿ ಪ್ರಿಯಾ ಬಳ್ಳಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಗರ ಪಂಚಾಯತ್‌ ಸುಳ್ಯ ಇದರ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರ ಬಿದಿರೆ ಶುಭಹಾರೈಸಿದರು. ಕಾಯರ್ತೋಡಿ  ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ  ಮಾತನಾಡಿ “ಶ್ರೀನಿಧಿ ಮಹಿಳಾ ಮಂಡಲ ನಡೆದು ಬಂದ ಹಾದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಸಂಘ ಸಂಸ್ಥೆ ಅಂದ್ರೆ ಈ ರೀತಿ ಇರಬೇಕು. ಎಷ್ಟೇ ಮಾತು, ಜಗಳ ಬಂದರೂ ಸಂಸ್ಥೆಯ ಒಳಗೆ ಬಿಟ್ಟು ಮುನ್ನಡೆಯಬೇಕು” ಎಂದರು.
ಇನ್ನರ್‌ ವೀಲ್‌ ಕ್ಲಬ್‌ ಸುಳ್ಯದ ಅಧ್ಯಕ್ಷೆ
ಡಾ .ಸವಿತಾ ಸಿ.ಕೆ ಕ್ಲಬ್ ವತಿಯಿಂದ ಚಯರ್ ಅನ್ನು ಮಹಿಳಾ ಮಂಡಲಕ್ಕೆ ಕೊಡುಗೆಯಾಗಿ ನೀಡಿ ಹಿತನುಡಿಗಳನ್ನಾಡಿದರು.
ವೇದಿಕೆಯಲ್ಲಿ ಗೌರವಾಧ್ಯಕ್ಷರಾದ ಶ್ರೀಮತಿ ಕಲಾವತಿ ತೀರ್ಥರಾಮ ಉಪಸ್ಥಿತರಿದ್ದರು. 
ಸನ್ಮಾನಿತರ ಸಾಧನೆಯ ವಿವರವನ್ನು ಶ್ರೀಮತಿ ಹೇಮ ವೇಣುಗೋಪಾಲ್ ಹಾಗೂ ಬಹುಮಾನದ ವಿವರವನ್ನು ಶ್ರೀಮತಿ ಜ್ಯೋತಿ ಹರೀಶ್ ವಾಚಿಸಿದರು.
ಶ್ರೀಮತಿ ಲತಾ ರಾಧಾಕೃಷ್ಣ ಸ್ವಾಗತಿಸಿ, ಶ್ರೀಮತಿ ಹೇಮಾ ವೇಣುಗೋಪಾಲ್ ಮತ್ತು ಶ್ರೀಮತಿ ಲತಾ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. 
ಕಾರ್ಯದರ್ಶಿ ಶ್ರೀಮತಿ ಶ್ರುತಿ ಮಂಜುನಾಥ ವಂದನಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ಶ್ರೀನಿಧಿ ಮಹಿಳಾ ಮಂಡಲದ ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಊರ ಪರ ಊರ ಗಣ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading