Ad Widget

ಬಿ.ಎಸ್‍.ಎಫ್‌ ಗೆ ಆಯ್ಕೆಯಾದ ಸುಶ್ಮಿತಾರಿಗೆ ಅರೆಭಾಷೆ ಅಕಾಡೆಮಿ ವತಿಯಿಂದ ಗೌರವ

ಭಾರತೀಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆಯ ಅರೆಭಾಷಿಕ ಯುವತಿ ಕುಮಾರಿ ಸುಶ್ಮಿತಾ ಎಂ.ಎ ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆ.31 ರಂದು ಗೌರವಿಸಿ ಸನ್ಮಾನಿಸಲಾಯಿತು.
ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ ಶುಭ ಹಾರೈಸಿದರು.
ಇವರಿಗೆ ಅಕಾಡೆಮಿ ಸದಸ್ಯರಾದ ಚಂದ್ರಾವತಿ ಬಡ್ಡಡ್ಕ, ಲತಾಪ್ರಸಾದ್ ಕುದ್ಪಾಜೆ ಸಹಕರಿಸಿದರು.
ಸದಸ್ಯರಾದ ಚಂದ್ರಶೇಖರ ಪೇರಾಲು ಅವರು ಪ್ರಾಸ್ತಾವಿಕವಾಗಿ ಮಾತನಾಡಿ “ಸುಶ್ಮಿತಾರ ಸಾಧನೆಯನ್ನು ಸ್ಮರಿಸಿ ಈಕೆಯ ಸಾಧನೆ ಇತರರಿಗೆ ಪ್ರೇರಣೆಯಾಗಲಿ” ಎಂದರು.
ಬೆದ್ರುಪಣೆ ನಿವಾಸಿಯಾಗಿರುವ ಸುಶ್ಮಿತಾ ಮೇಲಡ್ತಲೆಯ ದಿವಂಗತ ನಾಗಪ್ಪ ಹಾಗೂ ಜಾನಕಿಯವರ ಪುತ್ರಿ. “ಎಳೆ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡರೂ ಬದುಕನ್ನು ದಿಟ್ಟತನದಿಂದ ಎದುರಿಸಿ ತಂಗಿಯನ್ನು ಓದಿಸಿ ಸರ್ಕಾರಿ ಕೆಲಸ ಪಡೆಯುವಂತೆ ಮಾಡಿದ್ದಲ್ಲದೇ, ತಾನು ಸ್ವತಃ ಹಲವು ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಛಲಬಿಡದಂತೆ ಮಾಡಿದ ಪ್ರಯತ್ನದಿಂದಾಗಿ ತಾನು ಇಂದು ಭಾರತೀಯ ಸೇನೆಯಲ್ಲಿ ಸೇರಿಕೊಳ್ಳಲು ಅರ್ಹತೆ ಪಡೆಯುವಂತಾಯಿತೆಂದು” ಈ ಸಂದರ್ಭದಲ್ಲಿ ಸುಶ್ಮಿತಾ ನುಡಿದರು.
ಇವರು ಈ ಹಿಂದೆ ಸುಳ್ಯದ ಬಲದೇವ್ ಗ್ರಾನೈಟ್ಸ್‌ನಲ್ಲಿ ಉದ್ಯೋಗಿಯಾಗಿದ್ದರು.
ಈ ಸಂದರ್ಭದಲ್ಲಿ ಸುಶ್ಮಿತಾರ ಸಹೋದರಿ ಹಾಗೂ ಸಂಬಂಧಿಗಳು ಹಾಗೂ ದೇವಿಪ್ರಸಾದ್ ಕುದ್ಪಾಜೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading