Ad Widget

ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಸಾಹಿತ್ಯೋತ್ಸವ – ಬೆಳ್ಳಾರೆ ಶಾಖೆ ಪ್ರಥಮ ,ತಂಬಿನಮಕ್ಕಿ ಶಾಖೆ ದ್ವಿತೀಯ

ಎಸ್ಸೆಸ್ಸೆಫ್(ಸುನ್ನೀ ಸ್ಟುಡೆಂಟ್ ಫೆಡರೇಷನ್)
ಬೆಳ್ಳಾರೆ ಸೆಕ್ಟರ್ ಸಾಹಿತ್ಯೋತ್ಸವವು ಬೆಳ್ಳಾರೆ ಗ್ರಾಮದ ಪಳ್ಳಿಮಜಲಿನ ಸಿರಾಜುಲ್ ಹುದಾ ಸೆಕೆಂಡರಿ ಮದರಸ ವಠಾರದಲ್ಲಿ ಆ 31ರಂದು ಜರುಗಿತು. ಬೆಳಿಗ್ಗೆ 9 ಘಂಟೆಗೆ ಪಳ್ಳಿಮಜಲು ಮಸೀದಿಯ ಸಿರಾಜುಲ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹನೀಫ್ ಸಲಾಲಹ್ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನೆಯನ್ನು ಪಳ್ಳಿಮಜಲು ಅಬೂಬಖರ್ ಸ್ವಿದ್ದೀಖ್(ರ) ಮಸೀದಿಯ ಖತೀಬ್ ರಫೀಖ್ ಬಾ ಅಹ್ಸನಿ ನಡೆಸಿದರು. ದು:ಆವನ್ನು ಹಸನ್ ಸಖಾಫಿ ಬೆಳ್ಳಾರೆ ನೆರವೇರಿಸಿದರು.ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷರಾದ ಇರ್ಷಾದ್ ಸಅದಿ ವಹಿಸಿದ್ದರು. ವೇದಿಕೆಯಲ್ಲಿ ಪಳ್ಳಿಮಜಲು ಮದರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ,ಕೆ.ಎಂ.ಜೆ ತಾಲೂಕು ಸಮಿತಿ ಕಾರ್ಯದರ್ಶಿ ಶಂಸುದ್ದೀನ್ ಝಂ ಝಂ,ಸಿರಾಜುಲ್ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಹನೀಫ್ ಸಲಾಲಹ್,ಎಸ್.ಎಂ.ಎ ಬೆಳ್ಳಾರೆ ಝೋನಲ್ ಅಧ್ಯಕ್ಷರಾದ ಇಬ್ರಾಹಿಂ ಬೂಡು ಉಪಸ್ಥಿತರಿದ್ದರು. ಬೆಳ್ಳಾರೆ ಸೆಕ್ಟರಿನ ಬೆಳ್ಳಾರೆ, ಇಂದ್ರಾಜೆ,ಮಾಲೆಂಗ್ರಿ,ತಂಬಿನಮಕ್ಕಿ,ಪೆರುವಾಜೆ,ಪಳ್ಳಿಮಜಲು ಈ ಆರು ಶಾಖೆಗಳು ಭಾಗವಹಿಸಿ ಸಾಹಿತ್ಯ ಶೈಲಿಗಳಲ್ಲಿ ನಿರಂತರತೆ ಮೂಡಿದವು.

. . . . . . . . .

ಮುಸ್ಸಂಜೆ ಸಮಾರೋಪ ಸಮಾರಂಭ ನಡೆಯಿತು. ಮುಸ್ತಫಾ ತಂಙಲ್ ಮಲಪ್ಪುರಂ ಅವರಿಂದ ದು:ಆ ಜರುಗಿತು. ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಬೆಳ್ಳಾರೆ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷರಾದ ಶಾಕಿರ್ ಬೆಳ್ಳಾರೆ ವಹಿಸಿದ್ದರು.ಶಮೀರ್ ಖಾದ್ರಿ ಪೆರುವಾಜೆ ಪ್ರಾಸ್ತಾವಿಕ ಶೈಲಿಯ ಮಾತುಗಳನ್ನಾಡಿದರು.ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ರಿಯಾನ್ ಸಅದಿ ಮುಖ್ಯ ಭಾಷಣ ನೀಡಿದರು. ವೇದಿಕೆಯಲ್ಲಿ ಹಸನ್ ಸಖಾಫಿ ಬೆಳ್ಳಾರೆ, ಪಳ್ಳಿಮಜಲು ಮಸೀದಿ ಖತೀಬರಾದ ರಫೀಖ್ ಬಾ ಅಹ್ಸನಿ,ಪಳ್ಳಿಮಜಲು ಮದರಸ ಮುಖ್ಯೋಪಾಧ್ಯಾಯರಾದ ಮಹಮೂದ್ ಸಖಾಫಿ,ಪಳ್ಳಿಮಜಲು ಮಸೀದಿ ಕಮಿಟಿ ಅಧ್ಯಕ್ಷರಾದ ಹನೀಫ್ ಸಲಾಲಹ್,ಪಳ್ಳಿಮಜಲು ಖೊಮ್ಮಿಟೆ ಸಾಹಿತ್ಯೋತ್ಸವ ಸಮಿತಿಯ ಸ್ಥಳೀಯಾಧ್ಯಕ್ಷರಾದ ಮುನೀರ್ ಬೀಡು ಉಪಸ್ಥಿತರಿದ್ದರು. ಸಾಹಿತ್ಯೋತ್ಸವದಲ್ಲಿ ಬೆಳ್ಳಾರೆ ಶಾಖೆ ಪ್ರಥಮ ಸ್ಥಾನಿಯಾಗಿ ಮಿಂಚಿತು. ದ್ವಿತೀಯ ಸ್ಥಾನವನ್ನು ತಂಬಿನಮಕ್ಕಿ ಶಾಖೆ  ಪಡೆದುಕೊಂಡಿತು. ಆತಿಥೇಯ ಪಳ್ಳಿಮಜಲು ಶಾಖೆ ತೃತೀಯ ಸ್ಥಾನ ಗಳಿಸಿತು.ಸಾಹಿತ್ಯೋತ್ಸವ ಸಮಿತಿ ಕನ್ವಿನರ್ ಶಮ್ಮಾಸ್ ಸಅದಿ ಸ್ವಾಗತಿಸಿ ನೌಷಾದ್ ಅಹ್ಸನಿ ವಂದಿಸಿದರು.

. . . . . . .

ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading