- Saturday
- March 7th, 2026
2024-25 ಸಾಲಿನಲ್ಲಿ ಶೆ.100 ಸಾಲ ವಸೂಲಾತಿಗಾಗಿ ಕನಕಮಜಲು ಪ್ರಾಥಮಿಕ ಸಹಕಾರಿ ಸಂಘಕ್ಕೆ ಜಿಲ್ಲಾ ಬ್ಯಾಂಕ್ ಪ್ರಶಸ್ತಿ ದೊರಕಿದೆ. ಆ.30 ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯ ಕ್ಷರಾದ ಡಾ. ಯಂ.ಎನ್ ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷರಾದ ಸುಧಾಕರ ಕಾಮತ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ಕುಮಾರ್ ಕುದ್ಕುಳಿಯವರಿಗೆ ಪ್ರಶಸ್ತಿ ನೀಡಿ...
ಮಂಗಳೂರಿನಲ್ಲಿ ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಮಹಾಸಭೆಯಲ್ಲಿ ಶೇ. 100 ಸಾಲ ವಸೂಲಾತಿ ಸಾಧನೆ ಮಾಡಿದ ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಹಕಾರಿ ಸಂಘದ ಅಧ್ಯಕ್ಷ ದಾಮೋದರ ಮದುವೆಗದ್ದೆ, ಸಿಇಓ ಜಯಪ್ರಕಾಶ್ ಉರುಂಡೆ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ನಿರ್ದೆಶಕರಾದ...
ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ ಲಭಿಸಿದೆ. ಆ.30ರಂದು ಮಂಗಳೂರಿನಲ್ಲಿ ನಡೆದ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ರವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ...
ಆ.30ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ಎನ್.ಎಸ್.ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಮತ್ತು ಅಭಿವಿನ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಕುಮಾರ್.ಕೆ.ಆರ್ ಇವರು ವಹಿಸಿಕೊಂಡಿದ್ದರು.ರಾಮಕೃಷ್ಣ.ಕೆ.ಎಸ್ ಇವರು ಮೊದಲ ವರ್ಷದ ಸ್ವಯಂ ಸೇವಕರಿಗಾಗಿ ಅಭಿವಿನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಕಾರ್ಯಕ್ರಮಾಧಿಕಾರಿಗಳು ಹೊಸ ನಾಯಕರುಗಳಾಗಿ ಅಭಿಜ್ಞಾ.ಎ.ಎಸ್, ಚೈತನ್.ಬಿ, ಯತೀಶ್.ಎಮ್.ಬಿ, ಹಂಸಿನಿ.ಪಿ.ಎಸ್ ಇವರನ್ನು ಆಯ್ಕೆ ಮಾಡಲಾಯಿತು....
ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಆಯ್ಕೆಯಾಗಿದ್ದಾರೆ.ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ರವರ ಅಧ್ಯಕ್ಷತೆಯಲ್ಲಿ ಪ್ರೆಸ್ ಕ್ಲಬ್ ನಲ್ಲಿ ಸೆ.01 ರಂದು ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪೂಜಾಶ್ರೀ ವಿತೇಶ್ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಮುಂಡೋಕಜೆ, ಜೊತೆ ಕಾರ್ಯದರ್ಶಿಯಾಗಿ ಜೆ.ಕೆ.ರೈ, ಕೋಶಾಧಿಕಾರಿಯಾಗಿ ಮಿಥುನ್ ಕರ್ಲಪ್ಪಾಡಿ...
ಹೈದರಾಬಾದ್ ನ ರೀಜನ್ ನ ನವೋದಯ ವಿದ್ಯಾಲಯ ಸಮಿತಿಯವರು ಇತ್ತೀಚೆಗೆ ಹಿಮಾಚಲ ಪ್ರದೇಶದ ಕಾಂಗ್ರದಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಅವನಿ.ಡಿ.ಎಸ್ ಚಿನ್ನದ ಪದಕ ಪಡೆದು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಮುಡಿಪು ನವೋದಯ ವಿದ್ಯಾಲಯದಲ್ಲಿ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ಸುಳ್ಯ ಬೀರಮಂಗಲದಲ್ಲಿ ನೆಲೆಸಿರುವ ಮಡಪ್ಪಾಡಿ ದೇರುಮಜಲಿನ ಶಿವರಾಮ.ಡಿ...
ದ.ಕ.ಜಿಲ್ಲಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ 2024-25ನೇ ಸಾಲಿನ ಸಂಘದ ಗಣನೀಯ ಸೇವೆಯನ್ನು ಗುರುತಿಸಿ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ಮಂಗಳೂರಿನಲ್ಲಿ ನಡೆದ ಎಸ್. ಸಿ.ಡಿ.ಸಿ.ಸಿ. ಬ್ಯಾಂಕಿನ ಮಹಾಸಭೆಯಲ್ಲಿ ಎಸ್.ಸಿ.ಡಿ.ಸಿ.ಸಿ.ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಡಾ.ಎಂ. ಎನ್ ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು ಮತ್ತು...
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪ್ರತ್ಯೇಕವಾಗಿ ನಡೆಸಲುದ್ದೇಶಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಳ ಜಾತಿ ಕಾಲಂ ನಲ್ಲಿ “ಗೌಡ”, ಉಪಜಾತಿ ಕಾಲಂ ನಲ್ಲಿ “ಅರೆಭಾಷೆ ಗೌಡ” ಹಾಗೂ ಮಾತೃಭಾಷೆ ಕಾಲಂ ನಲ್ಲಿ “ಅರೆಭಾಷೆ” ಎಂದು ನಮೂದು ಮಾಡುವಂತೆ ಆ.30 ರಂದು ಬೆಂಗಳೂರಿನಲ್ಲಿ ನಡೆದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.ಬೆಂಗಳೂರಿನ ಕೊಡಗು...
ಭಾರತೀಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾದ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಬೆದ್ರುಪಣೆಯ ಅರೆಭಾಷಿಕ ಯುವತಿ ಕುಮಾರಿ ಸುಶ್ಮಿತಾ ಎಂ.ಎ ಇವರನ್ನು ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆ.31 ರಂದು ಗೌರವಿಸಿ ಸನ್ಮಾನಿಸಲಾಯಿತು. ಸುಳ್ಯದ ಸದರ್ನ್ ರೆಸಿಡೆನ್ಸಿಯ ಸಭಾಂಗಣದಲ್ಲಿ ನಡೆದ ಅನೌಪಚಾರಿಕ ಕಾರ್ಯಕ್ರಮದಲ್ಲಿ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಸಾಧಕಿಯನ್ನು ಸನ್ಮಾನಿಸಿ...
ಶಿಕ್ಷಣ ಇಲಾಖೆಯಲ್ಲಿ ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿ, ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದು ಆ. ೩೧ರಂದು ಸೇವಾ ನಿವೃತ್ತರಾದ ರತ್ನಾಕರ್ ಕೆ.ಯವರಿಗೆ ರತ್ನಾಕರ್ ಅಭಿಮಾನಿಗಳ ಬಳಗದಿಂದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ ಆ.೩೦ರಂದು ಸುಳ್ಯ ಸಿ.ಎ. ಬ್ಯಾಂಕ್ ಎ.ಎಸ್. ವಿಜಯಕುಮಾರ್ ಸಭಾಂಗಣದಲ್ಲಿ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ಯು.ಕೆ.ಯವರ ಅಧ್ಯಕ್ಷತೆಯಲ್ಲಿ...
Loading posts...
All posts loaded
No more posts
