Ad Widget

ಯೋಗ ಪಟು ಗೌರಿತಾಳಿಗೆ ಕರುನಾಡ ತಾರೆ ರಾಜ್ಯ ಪ್ರಶಸ್ತಿ

ಶ್ರೀ ಸರ್ವೇಜನಾ ಆರ್ಟ್ ಮತ್ತು ಕಲ್ಚರಲ್ ಟ್ರಸ್ಟ್(ರಿ.) ನಾಗರ ಬಾವಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದರ ಸಹಭಾಗಿತ್ವದಲ್ಲಿ ಆ.31 ರಂದು ಸವಾಯಿ ಗಂಧರ್ವ ಕಲಾಮಂದಿರ ಹುಬ್ಬಳ್ಳಿಯಲ್ಲಿ ಯೋಗ ಪಟು ಗೌರಿತಾ ಕೆ.ಜಿ ಅವರಿಗೆ “ಕರುನಾಡ ತಾರೆ ರಾಜ್ಯ ಪ್ರಶಸ್ತಿ” ಪ್ರಧಾನ ಮಾಡಲಾಯಿತು.
ಗೌರಿತಾ ಇದುವರೆಗೆ ಯೋಗದಲ್ಲಿ ಮಾಡಿದ 15 ದಾಖಲೆಗಳನ್ನು ಪರಿಶೀಲಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಡಾ| ಶಿವಕುಮಾರ ಮಹಾಸ್ವಾಮಿಗಳು ನಿರಂತರ ದಾಸೋಹ ಮಠ ಮತ್ತು ಕಲಾ ಪೋಷಕರ ಮಠ ಧರ್ಮಾಧಿಕಾರಿಗಳು ಸುಕ್ಷೇತ್ರ ಸಿದ್ದನ ಕೊಳ್ಳ, ಪರಮಪೂಜ್ಯ ಡಾ| ಮೋಹನ್ ಗುರು ಸ್ವಾಮಿಗಳು ಹುಬ್ಬಳ್ಳಿ, ಶ್ರೀ ವಿಜಯಕುಮಾರ್ ಕರ್ನಾಟಕ ಬಲಂ ಕೆಚ್ಚೆದೆಯ ಕನ್ನಡಿಗರ ಸೇವೆ ರಾಜ್ಯಾಧ್ಯಕ್ಷರು ಬೆಂಗಳೂರು, ಶ್ರೀಮತಿ ಮಾಲತಿ ಸುಧೀರ್ ಮಾಜಿ ಅಧ್ಯಕ್ಷರು ಕರ್ನಾಟಕ ನಾಟಕ ಅಕಾಡೆಮಿ ರಂಗಭೂಮಿ, ಚಲನಚಿತ್ರ ಕಿರುತೆರೆ ನಟಿ ನಿರ್ದೇಶಕಿ ನಿರ್ಮಾಪಕಿ ಶ್ರೀ ಶಿವಕುಮಾರ್ ಆರಾಧ್ಯ ಉಪಾಧ್ಯಕ್ಷರು ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರು, ಡಾ| ಕೆಂಚನೂರು ಶಂಕರ ಗೌರವಾಧ್ಯಕ್ಷರು ಪತ್ರಕರ್ತ ಸಾಹಿತಿ ಲೇಖಕ ನಟ ನಿರ್ದೇಶಕರು, ಲಕ್ಷಿತಾ ಗಂಗಾವತಿ ಸಂಸ್ಥಾಪಕರು ಚಲನ ಚಿತ್ರ ಕಿರುತರೆ ನಟಿ ಹಾಗೂ ಇನ್ನಿತರ ಅನೇಕ ಗಣ್ಯರು ಉಪಸ್ಥಿತರಿದ್ದರು. 
ಈ ಸಂದರ್ಭದಲ್ಲಿ ಗೌರಿತಾ  ಯೋಗ ನೃತ್ಯ ಪ್ರದರ್ಶನ ನೀಡಿದರು.
ಕುಮಾರಸ್ವಾಮಿ ವಿದ್ಯಾಲಯದ 5ನೇ ತರಗತಿಯಲ್ಲಿ ಓದುತ್ತಿರುವ ಗೌರಿತಾ ಕೆ.ಜಿ  ಡಾ. ಗೌತಮ್ ಹಾಗೂ ಡಾ. ರಾಜೇಶ್ವರಿ ದಂಪತಿ ಪುತ್ರಿ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading