Ad Widget

ಕೊಲ್ಲಮೊಗ್ರು ಗ್ರಾಮದಲ್ಲಿ ಭ್ರಷ್ಟಾಚಾರ ವಿರೋಧಿ ಕಿಡಿ ; ತನಿಖೆಯಿಲ್ಲದೇ ಅಮಾನತುಗೊಂಡ ಸಿಬ್ಬಂದಿ ಪುನರ್ ನೇಮಕವನ್ನು ವಿರೋಧಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಪಂಚಾಯತ್ ಡಾಟಾ ಎಂಟ್ರಿ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸದೇ ಪುನಃ ಕರ್ತವ್ಯಕ್ಕೆ ನೇಮಕ ಮಾಡಿರುವುದನ್ನು ವಿರೋಧಿಸಿ ಆ.29 ಶುಕ್ರವಾರದಂದು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
“ಪ್ರತಿಭಟನೆಯಲ್ಲಿ ಗ್ರಾಮಸ್ಥರು ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಕೂಗಿದರು. ಪಂಚಾಯತ್‌ ನಲ್ಲಿ ಜನರ ಹಿತದಾಯಕ ನಿರ್ವಹಣೆ ಬದಲಾಗಿ ಭ್ರಷ್ಟಾಚಾರ ನಡೆಯುತ್ತಿದೆ. ತನಿಖೆ ಮುಗಿಯದೇ ಅಮಾನತುಗೊಂಡವರನ್ನು ನೇಮಕ ಮಾಡುವುದು ಪಾರದರ್ಶಕ ಆಡಳಿತಕ್ಕೆ ಧಕ್ಕೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಕ್ಷಣ ನ್ಯಾಯಸಮ್ಮತ ತನಿಖೆ ನಡೆಯಬೇಕು. ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಮಹಾಸಭೆಯಲ್ಲಿ ಪಿ.ಡಿ.ಒ ಹಾಗೂ ದೂರವಾಣಿ ಮೂಲಕ ಇ.ಒ ರವರಲ್ಲಿ ಮಾಹಿತಿ ಕೇಳಿದಾಗ ಈ ಬಗ್ಗೆ ಇ.ಒ ರವರು ತನಗೆ ಯಾವುದೇ ಮಾಹಿತಿ ಇರುವುದಿಲ್ಲ ಪಂಚಾಯತ್‌ನಿಂದಲೇ ಆರೋಪಿತನನ್ನು ಮೂರು ತಿಂಗಳುಗಳ ಕಾಲ ಅಮಾನತಿನಲ್ಲಿರಿಸಿದ್ದು, ಮತ್ತೆ ತನ್ನ ಕೆಲಸಕ್ಕೆ ಹಾಜರಾಗಿದ್ದಾನೆ ಎಂದು ತಿಳಿಸಿರುತ್ತಾರೆ. ಇದರಲ್ಲಿ ಪಿ.ಡಿ.ಒ ಹಾಗೂ ಇ.ಒ ಇವರೆಲ್ಲರ ವ್ಯವಸ್ಥೆಯಲ್ಲಿ ಲೋಪ ಇರುವುದರಿಂದ ಸಮಗ್ರವಾಗಿ ಲೊಕಾಯುಕ್ತ ತನಿಖೆ ನಡೆಸುವಂತೆ ಒತ್ತಾಯಸುವುದು” ಎಂದು ನ್ಯಾಯವಾದಿ ಪ್ರದೀಪ್‌ ಕುಮಾರ್‌ ಮಾದ್ಯಮಕ್ಕೆ ಹೇಳಿಕೆ ನೀಡಿದರು.
ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷರಾದ ಸತೀಶ್‌.ಟಿ.ಎನ್‌ ರವರು ಮಾತನಾಡಿ, “ಗ್ರಾಮ ಪಂಚಾಯತ್ ನ ಆಡಳಿತ ವ್ಯವಸ್ಥೆಯನ್ನು ಗಾಳಿಗೆ ತೂರಿ ಇ.ಒ ರವರು ಭ್ರಷ್ಟಾಚಾರ ಆರೊಪ ಹೊತ್ತಿರುವ ಸಿಬ್ಬಂದಿಯನ್ನು ತನಿಖೆ ನಡೆಸದೇ ಮರುನೇಮಕ ಮಾಡಿರುವುದು ದುರದೃಷ್ಟಕರ ಮತ್ತು ಮುಂದೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಯಾವುದೇ ಪಕ್ಷಬೇಧವಿಲ್ಲದೆ ಊರಿನ ಎಲ್ಲಾ ನಾಗರಿಕರೊಂದಿಗೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು. ಪಂಚಾಯತ್ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರಬೇಕು.
ಭ್ರಷ್ಟಾಚಾರದ ವಿರುಧ್ದ ಪಕ್ಷಭೇದವಿಲ್ಲದೆ ಮರು ತನಿಕೆ ಮಾಡಬೇಕು” ಎಂದು ಆಗ್ರಹಿಸಿದರು.
ಪೀಠೋಪಕರಣಗಳ ಕಳವು : “ಅಮಾನತುಗೊಂಡಿದ್ದ ಪಂಚಾಯತ್ ಡಾಟಾ ಎಂಟ್ರಿ ಸಿಬ್ಬಂದಿ ಸಂತೋಷ್.ಕೆ ಗಡಿಕಲ್ಲು ಪಂಚಾಯತ್ ನ ಪೀಠೋಪಕರಣಗಳನ್ನು ಕದ್ದು ತನ್ನ ಮನೆಗೆ ತೆಗೆದುಕೊಂಡುಹೋಗಿದ್ದು ಮತ್ತು ಪಂಚಾಯತ್ ನ ತ್ಯಾಜ್ಯ ವಿಲೇವಾರಿ ವಾಹನವನ್ನು ತನ್ನ ಸ್ವಂತ ಕೆಲಸಕ್ಕಾಗಿ ಉಪಯೋಗಿಸುತಿದ್ದು, ಹಾಗೂ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಬರುವಂತಹ ಹಣವನ್ನು ತನ್ನ ಸ್ವಂತ, ಮನೆಯವರ ಖಾತೆಗೆ ಹಣ ವಗಾವಣೆ ಮಾಡಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಮಾಜಿ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ವೀಣಾನಂದ ಬಿಳಿಮಲೆ ಮಾದ್ಯಮದ ಮೂಲಕ ಒತ್ತಾಯಿಸಿದರು.
ವ್ಯವಸ್ಥೆಯಲ್ಲಿ ಲೋಪ ತಶಿಲ್ದಾರವರ ನಕಲಿ ಹಸಿರು ಸಹಿ ಆರೋಪ : “ಭ್ರಷ್ಟಾಚಾರ ಆರೋಪ ಹೊತ್ತಿರುವ ಸಿಬ್ಬಂದಿಯು ಈ ಹಿಂದೆ ತಹಶಿಲ್ದಾರರ ಹಸಿರು ಸಹಿಯನ್ನು ನಕಲುಮಾಡಿ ಹಣ ಬಟವಡೆ ಮಾಡಿದ್ದು, ಇದರ ಬಗ್ಗೆ ತನಿಖೆ ಮಾಡಲು ಅಗ್ರಹ ಮಾಡಲಾಯಿತು.”
ಈ ಸಂದರ್ಭದಲ್ಲಿ ಉದಯ ಶಿವಾಲ, ಹರಿಹರ ಕೊಲ್ಲಮೊಗ್ರ ಕೃಷಿಪತ್ತಿನ ನಿರ್ದೇಶಕರಾದ ಡ್ಯಾನಿ ಯಳುದಾಳು, ಮಾಜಿ ಗ್ರಾಮ ಪಂಚಾಯತ್‌ ಸದಸ್ಯರಾದ ಶೇಖರ್‌ ಅಂಬೆಕಲ್ಲು, ಕೊಲ್ಲಮೊಗ್ರು ಗಣೇಶೋತ್ಸವ ಸಮಿತಿಯ ಸ್ಥಾಪಕಾಧ್ಯಕ್ಷರಾದ ಹರಿಪ್ರಸಾದ್‌ ಮಲ್ಲಾಜೆ, ಪ್ರಮುಖರಾದ ಗಿರೀಶ್‌, ರಕ್ಷಿತ್.ಡಿ, ಸುರೇಶ್‌, ಭರತ್‌, ಪ್ರಶಂತ್‌.ಎ.ಸಿ, ಪ್ರಶಾಂತ್ ಚಾಳೆಪ್ಪಾಡಿ, ಸುಧಾಮಣಿ,  ಸತೀಶ್‌.ಟಿ.ಎನ್‌, ಹರೀಶ್‌ ಬಲ್ಲಡ್ಕ, ಹೇಮಂತ್ ದೋಲನ, ಗಣೇಶ ಶಿವಾಲ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಊರಿನ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading