Ad Widget

ರೈತನ ಮಗನಾಗಿ ರೈತರಿಗೆ ಸತ್ಯಾಂಶವನ್ನು ತಿಳಿಸುವ ಪ್ರಯತ್ನ – ವೆಂಕಪ್ಪಗೌಡರ ಮಾತಿಗೆ ಪ್ರತಿಕ್ರಿಯೆ ಅಲ್ಲ ; ವಿವಾದಕ್ಕೆ ತೆರೆ ಎಳೆದ ವೆಂಕಟ್ ವಳಲಂಬೆ

ದಕ್ಷಿಣಕನ್ನಡ ಜಿಲ್ಲೆಗೆ ಅದರದೇ ಆದ ವಿಶೇಷತೆ ಇದೆ.
ಜಿಲ್ಲೆಗೆ ಹೆಸರು ಸಂಸ್ಕಾರಯುತ ರೈತನ ಬೆವರಿನ ಮೂಲಕವೇ  ಹೊರತು ಆಳುವವನಿಂದಲ್ಲ  ಉಳುವವನಿಂದ ಎನ್ನುವ ಬಗ್ಗೆ ವೆಂಕಪ್ಪ ಗೌಡ್ರು ತಿಳಿದು ಪ್ರತಿಕ್ರಿಯೆ ನೀಡಬೇಕು.
ಒಂದು ಪ್ರಸಿದ್ಧ ದೇವಳದ ಆಡಳಿತ ಮೊಕ್ತೇಸರರಾಗಿ ಧಾರ್ಮಿಕ ಕಾರ್ಯದ ಮುಖಾಂತರ ಹಿಂದೂ ಧರ್ಮದ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಓರ್ವ ಒಳ್ಳೆಯ ಧಾರ್ಮಿಕ ಕಾರ್ಯ ಮಾಡುತ್ತಾರೆಂದು ನಾನು ಬಯಸಿದ್ದೆ. ಆದರೆ ಧಾರ್ಮಿಕ ಕ್ಷೇತ್ರದಲ್ಲಿದ್ದು ರಾಜಕೀಯವನ್ನೇ ಮಾಡಬೇಕೆಂದಿದ್ದರೆ  ಅದಕ್ಕೆ ರಾಜೀನಾಮೆ ನೀಡಿ ಹೊರಬನ್ನಿ ಬಹಿರಂಗ ಚರ್ಚೆಗೆ ನಾವು ಸಿದ್ದ.

. . . . . . . . .

ಗೌರವನ್ವಿತ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೀಶ್ ಚೌಟರ ದೂರದ್ರಷ್ಟಿಯ ಸರ್ವಗೀಣ ಅಭಿರುದ್ದಿಗೆ ತಣ್ಣೀರುಎರಚುವ ಮತ್ತು ಭಾರತೀಯ ಜನತಾ ಪಾರ್ಟಿ ನೇತೃತ್ವದ ಕೇಂದ್ರ ಸರಕಾರದ ಯಾವುದೇ ಜನಪರ ಯೋಜನೆಗಳನ್ನು ಟೀಕಿಸುವದೇ ನಿಮ್ಮ ಜಾಯಮಾನ, ಕೇಂದ್ರ ಸರ್ಕಾರ ನೀಡುವ ಗರೀಬ್ ಕಲ್ಯಾಣ ಅನ್ನ ಯೋಜನೆಯ ಮುಖಾಂತರ ನೀಡುವ ಅಕ್ಕಿಯನ್ನು ನಾವೇ ಕೊಟ್ಟಿರುವುದೆಂದು ಹೇಳುವ ನೀಚ ಪ್ರವೃತ್ತಿಯ, ಜನರಿಗೆ ಮಂಕು ಬೂದಿ ಎರಚುವ ನೀವೂ ಕೇಂದ್ರ ಸರ್ಕಾರದಿಂದ ಹಲವಾರು  ವರ್ಷದಿಂದ ನೇರ ರೈತರ ಖಾತೆಗೆ ಜಮೆಯಾಗುವ ಹವಾಮಾನ ಆಧಾರಿತ ಬೆಳೆ ವಿಮೆ ಕ್ಷೇತ್ರದ ಕಾಂಗ್ರೆಸ್ ಎಂದು ಕೊಳ್ಳುವ ಎಷ್ಟು ರೈತರ ಖಾತೆಗೆ ಜಮೆ ಆಗಿದೆ ಎಂದು ಜನತೆಗೆ ಮೊದಲು ಬಹಿರಂಗಪಡಿಸಿ, ಇಲ್ಲದಿದ್ದರೆ ನಾವೇ ಬಹಿರಂಗಪಡಿಸಬೇಕಾಗುತ್ತದೆ. 

. . . . . . .

ನಳಿನ್ ಕುಮಾರ್ ಅವರು ಅಧಿಕಾರದಲ್ಲಿದ್ದಾಗ ಸುಳ್ಯದ ಬಳ್ಪ ಗ್ರಾಮವನ್ನು  80 ಕೋಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಿ ಆದರ್ಶ ಗ್ರಾಮವಾಗಿ ಪರಿವರ್ತಿಸಿರುವುದು ಕ್ಷೇತ್ರದ ಜನತೆ ಮರೆತಿಲ್ಲ. ಇಂತ ಗ್ರಾಮಕ್ಕೆ ನಿಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ತಂಡ ಒಮ್ಮೆ ಭೇಟಿ ನೀಡಿದರೆ ಒಳ್ಳೆದು .

25 ಕೋಟಿ ವೆಚ್ಚದಲ್ಲಿ ಸಿಪಿಸಿಆರ್ ಐ ಮೂಲಕ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಿ ಒಂದು ನಿರಾಶ್ರಿತರಲ್ಲದ ರೈತರ ಅಡಿಕೆಗೆ ನಿಮ್ಮ ಸರಕಾರವಿರುವಾಗ ಇದ್ದ ಒಪ್ಪಂದವನ್ನು ರದ್ದುಪಡಿಸಿ ಆಮದಾಗುವ  ಅಡಿಕೆಗೆ ಶುಲ್ಕವನ್ನು ಜಾಸ್ತಿ ಮಾಡಿದ ಹೆಗ್ಗಳಿಕೆ ನಮ್ಮ ಕಾರ್ಯಕರ್ತರು ನಿರ್ವಹಿಸುವ ಕ್ಯಾಂಪ್ಕೋ ಸಂಸ್ಥೆಗೆ ಇದೆ.
ಇದೆಲ್ಲವೂ ದಕ್ಷಿಣ ಕನ್ನಡ ಜಿಲ್ಲೆಯ ನೊಂದ ರೈತರಿಗೆ ಅರಿವಿದೆ.

ಮಾನ್ಯ ಸಂಸದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫೀ ಬೆಳೆಯ ಬಹುದೇ  ಎಂಬ ಕಾರ್ಯಗಾರ ಸುಳ್ಯದಲ್ಲಿ ಕಾಪಿಕೊ ಎಂಬ ಹೆಸರಿನಲ್ಲಿ ನಡೆಯಿತು,ಈ ಕಾರ್ಯದಲ್ಲಿ ಪೂರ್ಣವಾಗಿ ರೈತರ ಬದುಕು ಕಟ್ಟಿಕೊಳ್ಳುವುದು ಅಸಾಧ್ಯವಾದರೂ, ನೊಂದ ರೈತರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯಾಗಾರವಾಗಿತ್ತು.

ನೀವು ಹೇಳಿದಂತೆ ರೈತರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯಕ್ರಮವಲ್ಲ. ವೆಂಕಪ್ಪ ಗೌಡ್ರು ಹೇಳಿದಂತೆ ಪೂರ್ಣ ಅಡಿಕೆಯನ್ನು  ಕಡಿದು ಕಾಫಿ ಬೆಳೆಯಲು ಎಲ್ಲೂ ಹೇಳಿಲ್ಲ ಅಡಿಕೆ ತೋಟದ ಮಧ್ಯೆ ಉಪಬೆಳೆಯಾಗಿ ಕಾಫಿ ಬೆಳೆಯಲು ಆಸಕ್ತ ರೈತರಿಗೆ ಉತ್ತೇಜನ ನೀಡಿ ಕಾಫಿ ಬೆಳೆಯಲು ಸ್ಪೂರ್ತಿ ನೀಡಿರುವುದಷ್ಟೇ. ಮುಂದೆ ಈ ಕಾರ್ಯವನ್ನು ಹಳ್ಳಿಹಳ್ಳಿಯ ರೈತರಿಗೆ  ಸಹಕಾರಿ ಸಂಘಗಳ ಮುಖಾಂತರ ಕೃಷಿಯ ಮಾರ್ಗದರ್ಶನ ಮಾಡುವವರಿದ್ದೇವೆ.ಆ ಸಮಯದಲ್ಲಿ ನಿಮ್ಮ ಸಹಕಾರವನ್ನು ಕ್ಷೇತ್ರಕ್ಕೆ ನೀಡಿದರೆ ಈ ಮಣ್ಣಿನ ರೈತರು ಕ್ಷಮಿಸಬಹುದು ಇಲ್ಲವಾದಲ್ಲಿ ಮುಂದೆ ನೀವು ಮತ್ತು ನಿಮ್ಮ ಪಾರ್ಟಿ ಸ್ವಾತಂತ್ರ್ಯ ಬಂದು 60 ವರ್ಷ ಗಳ ಕಾಲ ಮಾಡಿದ್ದನ್ನೇ ಈಗಲೂ ಮಾಡಿದರೆ ಅನುಭವಿಸಬೇಕಾಗುತ್ತದೆ ಎಂದು ಬಿಜೆಪಿ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ  ಹೇಳಿಕೆಯಲ್ಲಿ ತಿಳಿಸಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading