Ad Widget

ಆ.31: ಕುಕ್ಕೆ ದೇವಳದಲ್ಲಿ ಹೊಸ್ತಾರೋಗಣೆ ; ದರುಶನದಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.31 ರಂದು ಹೊಸ್ತಾರೋಗಣೆ(ನವಾನ್ನ ಬೋಜನ) ನೆರವೇರಲಿದೆ. ಈ ನಿಮಿತ್ತ ಶ್ರೀ ದೇವರ ದರುಶನ ಮತ್ತು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಆದಿತ್ಯವಾರ ಪ್ರಾತ:ಕಾಲ 5.15ಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ  ನೆರವೇರಲಿದೆ. ನಂತರ ಬೆಳಗ್ಗೆ 7:30ಕ್ಕೆ ತೆನೆ ತರುವುದು ಮತ್ತು ಕದಿರು ಪೂಜೆ ನಡೆಯಲಿದೆ. ನಂತರ ಭಕ್ತರಿಗೆ ಕದಿರು ವಿತರಣೆ ನೆರವೇರಲಿದೆ.
ದರುಶನದಲ್ಲಿ ವ್ಯತ್ಯಯ : ಹೊಸ್ತಾರೋಗಣೆ ನಿಮಿತ್ತ ಆದಿತ್ಯವಾರ ಬೆಳಗ್ಗೆ 10 ಗಂಟೆಯ ನಂತರ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಬೆಳಗ್ಗಿನ ಆಶ್ಲೇಷ ಬಲಿ ಸೇವೆಯು ಬೆಳಗ್ಗೆ 9:00 ಗಂಟೆಯಿಂದ 2 ಪಾಳಿಯಲ್ಲಿ ನಡೆಯಲಿದೆ. ಭಕ್ತರು ಸಹಕರಿಸಬೇಕು ಎಂದು ದೇವಳದ ಪ್ರಕಟಣೆ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading