Ad Widget

ಕುಕ್ಕೆ ಸುಬ್ರಹ್ಮಣ್ಯ : ಸೆ.07 ರಂದು ಚಂದ್ರಗ್ರಹಣದ ನಿಮಿತ್ತ ದೇವಳದಲ್ಲಿ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ : “ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.07 ರಂದು ಆದಿತ್ಯವಾರ ಚಂದ್ರಗ್ರಹಣ ಇರುವುದರಿಂದ ಈ ದಿನ ಶ್ರೀ ದೇವಳದಲ್ಲಿ ದಿನನಿತ್ಯದ ಸೇವೆ ಮತ್ತು ದರುಶನ ಹಾಗೂ ಭಕ್ತಾದಿಗಳ ಸೇವಾ ಸಮಯಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕು” ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.
ಮದ್ಯಾಹ್ನ 11:00 ಗಂಟೆಗೆ ಮಹಾಪೂಜೆ : “ಆದಿತ್ಯವಾರ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆಯು ಬೆಳಗ್ಗೆ 11:00 ಗಂಟೆಗೆ ನಡೆಯಲಿದೆ. ರಾತ್ರಿಯ ಮಹಾಪೂಜೆಯು ಸಂಜೆ ಗಂಟೆ 5:00 ಗಂಟೆಗೆ ನೆರವೇರಲಿದೆ.”
ರಾತ್ರಿ ಬೋಜನ ಇಲ್ಲ : “ಆದಿತ್ಯವಾರ ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ. ಅಲ್ಲದೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ.”
ಸರ್ಪಸಂಸ್ಕಾರ ಆರಂಭ ಇಲ್ಲ : “ಆದಿತ್ಯವಾರ  ಸರ್ಪಸಂಸ್ಕಾರ  ಸೇವೆ ಆರಂಭವಾಗುವುದಿಲ್ಲ. ಶನಿವಾರ ಆರಂಭಗೊಂಡ ಸೇವೆಯು ಆದಿತ್ಯವಾರ ಕೊನೆಗೊಳ್ಳುತ್ತದೆ. ಆದರೆ ಆದಿತ್ಯವಾರ ಸೇವಾರಂಭ ಇಲ್ಲ. ಸಾಯಂಕಾಲ 5:00 ಗಂಟೆಯಿಂದ ಶ್ರೀ ದೇವರ ದರುಶನ ಇರುವುದಿಲ್ಲ. ಸೆ.08 ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ಆದುದರಿಂದ ಭಕ್ತರು ಸಹಕರಿಸಬೇಕು” ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading