Ad Widget

ಕುಕ್ಕೆ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಸಿದಲ್ಲಿ ದಂಡನೆ ಗ್ಯಾರಂಟಿ ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಾಲೂಕು ಮಟ್ಟದ “ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ” ಪೂರ್ವಭಾವಿ ಸಭೆ

ಸುಬ್ರಹ್ಮಣ್ಯ ಆಗಸ್ಟ್ 28 : ಕಡಬ ತಾಲೂಕು ಪಂಚಾಯತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮತ್ತು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಯೋಗದೊಂದಿಗೆ ಸ್ಥಳೀಯ ಗ್ರಾಮ ಪಂಚಾಯಿತ್ ಗಳ ವ್ಯಾಪ್ತಿಯಲ್ಲಿ “ನಮ್ಮ ಸಂಸ್ಕೃತಿ-ಸ್ವಚ್ಛ ಸಂಸ್ಕೃತಿ” ಎಂಬ ಧ್ಯೇಯವಾಕ್ಯದೊಂದಿಗೆ ಬೃಹತ್ ಸ್ವಚ್ಛತಾ ಶ್ರಮದಾನದ  ಪೂರ್ವಭಾವಿ ಸಭೆಯು ಗುರುವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕುಮಾರಧಾರ ಸಭಾಂಗಣದಲ್ಲಿ ಜರಗಿತು.ಸಭೆಯ ಆರಂಭದಲ್ಲಿಯೇ  ಸಂಬಂಧಪಟ್ಟ ಎಲ್ಲಾ...

ರಾಷ್ಟ್ರಮಟ್ಟದ ಯೋಗಸ್ಪರ್ಧೆಯಲ್ಲಿ ಮಿಥುನ ಅಶ್ವಥ್ ಜಬಳೆ 6ನೇ ಸ್ಥಾನ

ಬೆಂಗಳೂರು ಆದಿತ್ಯ ಯೋಗ ಸೆಂಟರ್ ನವರು ನಡೆಸಿದ ಬಿ.ಕೆ.ಎಸ್ ಐಯ್ಯಂಗಾರ್ ಸ್ಮರಣಾರ್ಥ ರಾಷ್ಟ್ರ ಮಟ್ಟದ 9ನೇ ವರ್ಷದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಐವರ್ನಾಡಿನ ಮಿಥುನ  ಅಶ್ವಥ್ ಜಬಳೆ ಅವರು 6ನೇ ಸ್ಥಾನ ಪಡೆದಿದ್ದಾರೆ.ಇವರು 32 ರಿಂದ 45 ವರ್ಷ ವಿಭಾಗದಲ್ಲಿ ಜು.12 ರಂದು ನಡೆದ ಆನ್ ಲೈನ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
Ad Widget

ಕೊಲ್ಲಮೊಗ್ರು : ಅಮಾನತಿನಲ್ಲಿದ್ದ ಗ್ರಾ.ಪಂ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ಇಂದು (ಆ.29) ಗ್ರಾಮಸ್ಥರಿಂದ ಗ್ರಾ.ಪಂ ಕಛೇರಿ ಎದುರು ಪ್ರತಿಭಟನೆ

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ನ ಸಿಬ್ಬಂದಿಯೊಬ್ಬರನ್ನು ಕರ್ತವ್ಯಲೋಪದ ಆಧಾರದಲ್ಲಿ ಮೂರು ತಿಂಗಳುಗಳ ಹಿಂದೆ ಅಮಾನತಿನಲ್ಲಿರಿಸಿದ್ದು, ಅವರು ಮತ್ತೆ ಕರ್ತವ್ಯಕ್ಕೆ ಹಾಜರಾಗಿರುವುದನ್ನು ಪ್ರಶ್ನಿಸಿ ಇಂದು ಆ.29 ರಂದು ಗ್ರಾಮಸ್ಥರು ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.“ಅಮಾನತುಗೊಂಡ ಸಿಬ್ಬಂದಿಯ ಮೇಲೆ ಗ್ರಾಮ ಪಂಚಾಯತ್ ನ ಸ್ವತ್ತು ಕಳವು ಆರೋಪವಿದ್ದು, ಅದಲ್ಲದೇ ಗ್ರಾಮ...

ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆಯೂ(ಆ.29) ಶಾಲೆ ಹಾಗೂ ಪಿ.ಯು ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ, ಪದವಿಪೂರ್ವ ಕಾಲೇಜು ಹಾಗೂ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ ನಾಳೆ ಆ.29 ರಂದು ರಜೆ ಘೋಷಿಸಿ ದ.ಕ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಆ.31: ಕುಕ್ಕೆ ದೇವಳದಲ್ಲಿ ಹೊಸ್ತಾರೋಗಣೆ ; ದರುಶನದಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯತಾಣ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.31 ರಂದು ಹೊಸ್ತಾರೋಗಣೆ(ನವಾನ್ನ ಬೋಜನ) ನೆರವೇರಲಿದೆ. ಈ ನಿಮಿತ್ತ ಶ್ರೀ ದೇವರ ದರುಶನ ಮತ್ತು ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕಾಗಿ ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.ಆದಿತ್ಯವಾರ ಪ್ರಾತ:ಕಾಲ 5.15ಕ್ಕೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ  ನೆರವೇರಲಿದೆ. ನಂತರ...

ಕುಕ್ಕೆ ಸುಬ್ರಹ್ಮಣ್ಯ : ಸೆ.07 ರಂದು ಚಂದ್ರಗ್ರಹಣದ ನಿಮಿತ್ತ ದೇವಳದಲ್ಲಿ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ

ಸುಬ್ರಹ್ಮಣ್ಯ : "ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.07 ರಂದು ಆದಿತ್ಯವಾರ ಚಂದ್ರಗ್ರಹಣ ಇರುವುದರಿಂದ ಈ ದಿನ ಶ್ರೀ ದೇವಳದಲ್ಲಿ ದಿನನಿತ್ಯದ ಸೇವೆ ಮತ್ತು ದರುಶನ ಹಾಗೂ ಭಕ್ತಾದಿಗಳ ಸೇವಾ ಸಮಯಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕು" ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.ಮದ್ಯಾಹ್ನ 11:00 ಗಂಟೆಗೆ ಮಹಾಪೂಜೆ : “ಆದಿತ್ಯವಾರ ಶ್ರೀ ದೇವರ...

ಪಾಲೆಪ್ಪಾಡಿ : ಗಣೇಶೋತ್ಸವ , ಸಾಧಕರಿಗೆ ಸನ್ಮಾನ

ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮಂಜುಶ್ರೀ ಗೆಳೆಯರ ಬಳಗ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವುಗಳ ಆಶ್ರಯದಲ್ಲಿ 33ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಆ.27 ರಂದು ಮಂಜುಶ್ರೀ ಕ್ರೀಡಾಂಗಣ ದರ್ಖಾಸ್ತು ಪಾಲೆಪ್ಪಾಡಿ ಇಲ್ಲಿ ಜರುಗಿತು. ಆ.27 ರಂದು ಬೆಳಿಗ್ಗೆ ಶ್ರೀ ಗಣೇಶನ ಮೂರ್ತಿ ಪ್ರತಿಷ್ಠಾಪನೆ ನಡೆಯಿತು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ...

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಪಂಜ ದೇವಸ್ಥಾನಕ್ಕೆ ಭೇಟಿ

ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ ವಿ ರವರು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ಶ್ರೀ ದೇವರ ದರ್ಶನ ಪಡೆದರು. ಬಳಿಕ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ತೆರಳಿ ಪ್ರಸಾದ ಸ್ವೀಕರಿಸಿದರು. ಅವರನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ಶಾಲು ಹೊದಿಸಿ ಗೌರವಿಸಿದರು. ದೇವಳದ ಅರ್ಚಕ...

ದೇವರಹಳ್ಳಿ : 29ನೇ ವರ್ಷದ ಗಣೇಶೋತ್ಸವ

ಏನೆಕಲ್ಲು ಗ್ರಾಮದ ದೇವರಹಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 29ನೇ ವರ್ಷದ  ಗಣೇಶೋತ್ಸವ ಕಾರ್ಯಕ್ರಮ ಆಗಸ್ಟ್ 27ರಂದು ಶ್ರೀಹರಿ ಭಜನಾ ಮಂದಿರದಲ್ಲಿ ನಡೆಯಿತು. ಆಗಸ್ಟ್ 27ರಂದು ಬೆಳಿಗ್ಗೆ ದೇವರ ವಿಗ್ರಹ ಪ್ರತಿಷ್ಠಾಪನೆ ನಂತರ ಭಜನಾ ಕಾರ್ಯಕ್ರಮ, ಗಣಪತಿ ಹೋಮ, ಪೂರ್ಣಾವತಿ, ಮಕ್ಕಳಿಗೆ ವಿದ್ಯಾರಂಭ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಅಪರಾಹ್ನ...

ಹಳೆಗೇಟು : ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ 42ನೇ  ಗಣೇಶೋತ್ಸವ

ಸಾಂಸ್ಕೃತಿಕ ಸಂಘ ಹಳೆಗೇಟು, ಸುಳ್ಯ ಇದರ ಆಶ್ರಯದಲ್ಲಿ 42ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಸಂಘ ಹಳೆಗೇಟು ಇದರ ವಸಂತಕಟ್ಟೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಲಾಯಿತು. ಅಗಸ್ಟ್ 27ರಂದು ಬೆಳಿಗ್ಗೆ ಸ್ಥಳ ಶುದ್ದಿ, ಗಣಪತಿ ಹೋಮ, ವಿಗ್ರಹ ಪ್ರತಿಷ್ಠಾಪನೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ದೀಪಾಂಜಲಿ ಮಹಿಳಾ ಭಜನಾ ಮಂಡಳಿ ...
Loading posts...

All posts loaded

No more posts

error: Content is protected !!