Ad Widget

ಪಂಜ : ದೇವಸ್ಥಾನದಲ್ಲಿ ಇಂದು ಕದಿರು ಮುಹೂರ್ತ – ನಾಳೆ (ಆ.27) ದೇವರಿಗೆ ನವಾನ್ನ ಮಹಾ ನೈವೇದ್ಯ ಸಮರ್ಪಣೆ

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿoಗೇಶ್ವರ ದೇಗುಲದ ಕದಿರು ಗದ್ಧೆಯಿಂದ ಕದಿರು ತೆಗೆಯುವ ಮುಹೂರ್ತ ಇಂದು (ಆ.26) ನಡೆಯಿತು. ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಕದಿರು ಗದ್ಧೆಗೆ ಪೂಜೆ ಮಾಡಿ ಕದಿರು ತೆಗೆದರು. ಈ ವೇಳೆ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಪಂಜ ಪಂಚಶ್ರೀ ಜೇಸಿಐ ಅಧ್ಯಕ್ಷರಾದ ವಾಚಣ್ಣ ಕೆರೆಮೂಲೆ, ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಗುರುಪ್ರಸಾದ್ ತೋಟ, ಕಾರ್ಯದರ್ಶಿ ಜೀವನ್ ಶೆಟ್ಟಿಗದ್ಧೆ, ಕೋಶಧ್ಯಕ್ಷ ಜನಾರ್ಧನ ನಾಗತೀರ್ಥ, ಆಹಾರ ಸಂಚಾಲಕರಾದ ಕುಸುಮಾಧರ ಕೆರೆಯಡ್ಕ, ಕೃಷ್ಣ ವೈಲಾಯ, ಧರ್ಮಪಾಲ ದಾಸ್ ನಾಗತೀರ್ಥ ಹಾಗೂ ಊರ ಭಕ್ತರು ಉಪಸ್ಥಿತರಿದ್ಧರು.

. . . . . . . . .

ನಾಳೆ (ಆ.27) ಪೂರ್ವಾಹ್ನ ಮಹಾಪೂಜೆಯ ನಂತರ ತೀರ್ಥ ಪ್ರಸಾದ, ಸೇವಾ ಪ್ರಸಾದ, ಅಪ್ಪಕಜ್ಜಾಯ ಮತ್ತು ಕದಿರು ವಿತರಣೆ ನಡೆಯಲಿರುವುದು. ಪೂರ್ವಾಹ್ನ 9 ಗಂಟೆಯ ನಂತರ ಶ್ರೀ ಮಹಾಗಣಪತಿ ಹವನ ಮತ್ತು ಮಧ್ಯಾಹ್ನ ಶ್ರೀ ದೇವರಿಗೆ ನವಾನ್ನ ಮಹಾ ನೈವೇದ್ಯ ಸಮರ್ಪಣೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆಯಲಿರುವುದು. ಪೂರ್ವಾಹ್ನ 10 ರಿಂದ 11ಗಂಟೆಯವರೆಗೆ ಮಕ್ಕಳಿಗೆ ವಿದ್ಯಾರಂಭ ಮತ್ತು 12:30 ಯಿಂದ 1:30ಯ ತನಕ ಮಕ್ಕಳಿಗೆ ಅನ್ನಪ್ರಾಶನ, ಮಧ್ಯಾಹ್ನ ಪೂಜೆಯ ನಂತರ ನವಾನ್ನ ಭೋಜನ ಇರುತ್ತದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ತಿಳಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading