Ad Widget

ಮಡಪ್ಪಾಡಿ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

ಯುವಕ ಮಂಡಲ(ರಿ) ಮಡಪ್ಪಾಡಿ, ಮಂಜುಶ್ರೀ ಯಕ್ಷಗಾನ ಕಲಾ ಸಂಘ ಮಡಪ್ಪಾಡಿ, ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ, ಉಜ್ವಲ ಮಹಿಳಾ ಮಂಡಲ(ರಿ) ಮಡಪ್ಪಾಡಿ ಹಾಗೂ ಊರಿನ ಸಮಸ್ತ ಭಕ್ತಾಭಿಮಾನಿಗಳ ಸಹಯೋಗದೊಂದಿಗೆ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಇಲ್ಲಿ ನಡೆಯಲಿದೆ.
ಬೆಳಿಗ್ಗೆ 7 ಗಂಟೆಗೆ ಗಣಪತಿ ಹವನ ಹಾಗೂ 8 ಗಂಟೆಗೆ ಗಣಪತಿ ಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ.
ಗಣೇಶೋತ್ಸವದ ಅಂಗವಾಗಿ ಪೂರ್ವಾಹ್ನ ಗಂಟೆಗೆ 10 ಕ್ಕೆ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ಜಾಂಬವತಿ ಕಲ್ಯಾಣ ನಡೆಯಲಿದೆ, ಮಧ್ಯಾಹ್ನ ಗಿರಿಶಂಕರ ಸುಲಾಯ, ಅಧ್ಯಕ್ಷರು ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪ್ಪಾಡಿ ಇವರಿಂದ ಧಾರ್ಮಿಕ ಉಪನ್ಯಾಸ, ಹಾಗೂ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಅವೃಮ್ ಕಲಾ ಸಮಿತಿ ಮಂಗಳೂರು ಇದರ ಸದಸ್ಯರಿಂದ ಚಂಡೆ- ವಯೋಲಿನ್ ಜುಗುಲ್ ಬಂದಿ  ಹಾಗೂ ಶ್ರೀ ರಾಮ ಭಜನಾ ಮಂಡಳಿ ಮಕ್ಕಳ ಕುಣಿತ ಭಜನೆಯೊಂದಿಗೆ ಶ್ರೀ ಗಣೇಶ ಮೂರ್ತಿಯ ವೈಭವದ ಶೋಭಾಯಾತ್ರೆ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading