Ad Widget

ಸುಳ್ಯ : ಕಾಫಿ ಬೆಳೆಗೆ ಪ್ರೋತ್ಸಾಹ ನೀಡುವ “ಕಾಪಿಕೊ” ಕಾರ್ಯಗಾರ ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ

ಅಡಿಕೆ ಬೆಳೆಗೆ ಹಳದಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾಫಿ ಬೆಳೆಗೆ ಉತ್ತೇಜನ ನೀಡಲು “ಕಾಪಿಕೊ ಕಾರ್ಯಗಾರ” ಹಮ್ಮಿಕೊಳ್ಳಲಾಗಿದ್ದು, ಆ.25 ರಂದು ಸುಳ್ಯದ ಸಿಎ ಬ್ಯಾಂಕ್ ನ ಎ.ಎಸ್.ವಿಜಯಕುಮಾರ್ ಸಭಾಭವನದಲ್ಲಿ ಅಯೋಜನೆಗೊಂಡ ಕಾರ್ಯಕ್ರಮವು ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ, ಕಾಫಿ ಮಂಡಳಿ ಡೆಪ್ಯೂಟಿ ಡೈರೆಕ್ಟರ್ ಡಾ.ವಿ ಚಂದ್ರಶೇಖರ್, ತೋಟಗಾರಿಕೆ ಮಂಗಳೂರು ಇದರ ಉಪನಿರ್ದೇಶಕ ಮಂಜುನಾಥ್, ನಬಾರ್ಡ್ ಡಿಡಿಎಂ ಸಂಗೀತ ಕರ್ತ, ಬಿಜೆಪಿ ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಸೆವೆನ್ ಬೀನ್ ಟೀಮ್ ಸಕಲೇಶಪುರ ಇದರ ಅಧ್ಯಕ್ಷ ಡಾ.ಪ್ರದೀಪ್, ಸೆವೆನ್ ಬೀನ್ ಟೀಮ್ ಸಕಲೇಶಪುರ ಇದರ ಚಯರ್ ಮ್ಯಾನ್ ಡಾ.ಧರ್ಮರಾಜ್, ಯಾರಾ ಫರ್ಟಿಲೈಸರ್ ಸಂಸ್ಥೆಯ ಮುಖ್ಯಸ್ಥ ಬೋಪಣ್ಣ, ಜೈನ್ ಇರಿಗೇಷನ್ ನ ಅಧಿಕಾರಿ ಕಾರ್ತಿಕ್ ಮಂಜುನಾಥ, ಕಾಪಿಕೊ ಕಾರ್ಯಾಗಾರದ ಸಂಚಾಲಕ ಸಂತೋಷ್ ಕುತ್ತಮೊಟ್ಟೆ, ಸಹ ಸಂಚಾಲಕ ರಾಮಕೃಷ್ಣ ಭಟ್ ಕುರುಂಬುಡೇಲು, ಸುಳ್ಯ ನ.ಪಂ.ಸದಸ್ಯೆ ಶಶಿಕಲಾ ನೀರಬಿದಿರೆ, ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶುಭದಾ ಆರ್ ಪ್ರಕಾಶ್ ಪ್ರಾರ್ಥಿಸಿದರು.
ಸಂತೋಷ್ ಕುತ್ತಮೊಟ್ಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading