Ad Widget

ಆರಾಧ್ಯ.ಎಸ್ ಭಟ್ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸುಬ್ರಹ್ಮಣ್ಯಕ್ಕೆ ಪ್ರಥಮ ಸ್ಥಾನ

ಸುಬ್ರಹ್ಮಣ್ಯ ಮೂಲದ ಶಂಕರ ಭಟ್ ಹಾಗೂ ಪೂರ್ಣಿಮಾ ದಂಪತಿಗಳ ಪುತ್ರಿ ಆರಾಧ್ಯ.ಎಸ್ ಭಟ್ ಅವರು ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.95 ಅಂಕಗಳನ್ನು ಗಳಿಸಿ ಸುಬ್ರಹ್ಮಣ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಪುತ್ತೂರಿನ ಖ್ಯಾತ ನೃತ್ಯಗುರು ಶಾಲಿನಿ ಆತ್ಮಭೂಷಣ ಅವರ ಶಿಷ್ಯೆಯಾಗಿರುವ ಆರಾಧ್ಯ.ಎಸ್ ಭಟ್ ಅವರು ಹಲವು ವರ್ಷಗಳಿಂದ ಭರತನಾಟ್ಯ ಕಲೆಯನ್ನು ಅಭ್ಯಾಸ ಮಾಡುತ್ತಾ ತಮ್ಮ ಪರಿಶ್ರಮ ಮತ್ತು ಕಲಾಪ್ರತಿಭೆಯಿಂದ ಈ ಯಶಸ್ಸು ಸಾಧಿಸಿದ್ದಾರೆ.
ಈ ಸಾಧನೆಗೆ ಗ್ರಾಮಸ್ಥರು, ಬಂಧುಬಳಗ, ಸ್ನೇಹಿತರು ಹಾಗೂ ಗುರುಗಳು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಆರಾಧ್ಯ ಇನ್ನಷ್ಟು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಬೆಳಗಿಸುವರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading