Ad Widget

ಕಲ್ಲುಗುಂಡಿ : ವಾಹನಗಳಿಗೆ ಗುದ್ದಿ ಪರಾರಿಯಾಗಲೆತ್ನಿಸಿದ ಟಿಟಿ ವಾಹನ ಸುಳ್ಯದಲ್ಲಿ ವಶಕ್ಕೆ – ತುರ್ತು ಕಾರ್ಯಾಚರಣೆ ನಡೆಸಿದ ಅಂಬ್ಯುಲೆನ್ಸ್ ಚಾಲಕರ ಸಂಘ

ಕಲ್ಲುಗುಂಡಿಯಲ್ಲಿ ವಾಹನಗಳಿಗೆ ಗುದ್ದಿ ಪರಾರಿಯಾಗಲೆತ್ನಿಸಿದ ಟಿಟಿ ವಾಹನವನ್ನು  ತುರ್ತು ಕಾರ್ಯಾಚರಣೆ ನಡೆಸಿ  ಸುಳ್ಯದಲ್ಲಿ ವಾಹನ ತಡೆಹಿಡಿಯುವಲ್ಲಿ ಅಂಬ್ಯುಲೆನ್ಸ್ ಚಾಲಕರ ಸಂಘದ ಸದಸ್ಯರು ಯಶಸ್ವಿಯಾಗಿದ್ದಾರೆ.

. . . . . . . . .

ಕಲ್ಲುಗುಂಡಿಯಲ್ಲಿ  ಆ.23 ರಂದು ರಾತ್ರಿ  9.30 ರ ವೇಳೆಗೆ ಎರಡು ದ್ವಿಚಕ್ರ ವಾಹನಗಳಿಗೆ ಶಿವಮೊಗ್ಗ ಮೂಲದ ಟಿಟಿ ವಾಹನ ಗುದ್ದಿ ಪರಾರಿಯಾದ ಮಾಹಿತಿ ಬರುತ್ತಿದ್ದಂತೆ ಅಂಬ್ಯುಲೆನ್ಸ್ ಚಾಲಕರ ಸಂಘದ ಸದಸ್ಯ ಉನೈಸ್ ರವರು ಪೆರಾಜೆಯಲ್ಲಿ ಸಾರ್ವಜನಿಕರ ಸಹಕಾರದಿಂದ  ತಡೆಹಿಡಿಯಲು ಯತ್ನಿಸಿದರಾದರೂ ನಿಲ್ಲಸದೇ ಬಂದ ವಾಹನವನ್ನು ಸುಳ್ಯದಲ್ಲಿ ಪೋಲೀಸರು ಹಾಗೂ ಸಾರ್ವಜನಿಕರ ಸಹಕಾರದಿಂದ ತಡೆಹಿಡಿದಿದ್ದಾರೆ. ಸುಳ್ಯ ಆಂಬುಲೆನ್ಸ್ ಚಾಲಕ ಮಾಲಕ ಸಂಘದ
ಉನೈಸ್ ಪೆರಾಜೆ,  ಮಿಥುನ್,  ಸಿದ್ದಿಕ್ ಹಾಗೂ ಶಮೀರ್ ಹಾಗೂ ಪ್ರಕಾಶ್ ಫೋಲೀಸ್ ಅವರಿಗೆ ಸಾರ್ಜಜನಿಕರು ಧನ್ಯವಾದ ಸಲ್ಲಿಸಿದ್ದಾರೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading