Ad Widget

ರಾಷ್ಟ್ರಮಟ್ಟದ ಸಾಧನೆಗೈದ ಕು|ಭವಿತಾ ಗೌಡ ಬೇರಿಕೆಯವರಿಗೆ ಅಭಿನಂದನಾ ಕಾರ್ಯಕ್ರಮ

ಆಗಸ್ಟ್ 16ರಿಂದ 18ರ ತನಕ ಝಾರ್ಖಂಡ್ ರಾಂಚಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಗಳಿಸಿದ ಕಳಂಜ ಗ್ರಾಮದ ಕು|ಭವಿತಾ ಗೌಡ ಬೇರಿಕೆಯವರಿಗೆ ಅಭಿನಂದನಾ ಕಾರ್ಯಕ್ರಮವು ಆ.24ರಂದು ಬೆಳ್ಳಾರೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದ.ಕ. ಜೇನು ಸೊಸೈಟಿಯ ಅಧ್ಯಕ್ಷರಾದ ಚಂದ್ರ ಕೋಲ್ಚಾರು, ಬೆಳ್ಳಾರೆ ಕಾಮಧೇನು ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪು, ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷರಾದ ಮಾಧವ ಗೌಡ ಕಾಮಧೇನು, ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾದ ಪದ್ಮನಾಭ ಬೀಡು, ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷರಾದ ಪ್ರೇಮಲತಾ ಮಣಿಮಜಲು, ಮಾಜಿ ಸೈನಿಕರಾದ ರವೀಂದ್ರ ಗೌಡ ರಾಮಕುಮೇರಿ, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಮಾಜಿ ಅಧ್ಯಕ್ಷರಾದ ಎನ್ ವಿಶ್ವನಾಥ ರೈ ಕಳಂಜ, ಕಳಂಜ ಗ್ರಾಮ ಗೌಡ ಸಮಿತಿಯ ಅಧ್ಯಕ್ಷರಾದ ರುಕ್ಮಯ್ಯ ಗೌಡ ಕಳಂಜ, ನಿವೃತ್ತ ಪ್ರಾಂಶುಪಾಲರಾದ ಡಾ। ನಾರಾಯಣ ಶೇಡಿಕಜೆ, ಶ್ರೀನಾಥ್ ರೈ ದೋಳ್ತೋಡಿ, ಉಮೇಶ್ ಕೆಎಂಬಿ, ಕಡಬ ತಾಲೂಕು ನಿವೃತ್ತ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ ಕಜೆಮೂಲೆ, ಸುಬ್ರಹ್ಮಣ್ಯ ಭಟ್ ಮುಂಡುಗಾರು, ಕು|ಭವಿತಾ ಗೌಡ ಬೇರಿಕೆಯವರ ತಂದೆ ಲಕ್ಷಣ ಗೌಡ ಬೇರಿಕೆ, ತಾಯಿ ಶ್ರೀಮತಿ ದಮಯಂತಿ ಬೇರಿಕೆ ಉಪಸ್ಥಿತರಿದ್ದರು. ಜಗದೀಶ್ ಮುಂಡುಗಾರು ಕಾರ್ಯಕ್ರಮ ನಿರ್ವಹಿಸಿದರು. ಅಭಿನಂದನಾ ಕಾರ್ಯಕ್ರಮದ ಬಳಿಕ ಬೆಳ್ಳಾರೆಯ ಅಚಲಾಪುರ ಕಟ್ಟೆಯಿಂದ ಕಳಂಜ ವಿಷ್ಣುನಗರದ ತನಕ ಅಭಿನಂದನಾ ಮೆರವಣಿಗೆ ಜರುಗಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading