Ad Widget

ಉಬರಡ್ಕ ಸೊಸೈಟಿ ಮಹಾಸಭೆ : 162 ಕೋಟಿ ವ್ಯವಹಾರ – ರೂ. 79.24 ಲಕ್ಷ ಲಾಭ – ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯು ಆ.24ರಂದು ಉಬರಡ್ಕ ಶ್ರೀ ನರಸಿಂಹ ಶಾಸ್ತಾವು ದೇವಾಲಯದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಸ್ವಾಗತಿಸಿ, ಸಂಘವೂ 162 ಕೋಟಿ ವ್ಯವಹಾರ ಹೊಂದಿದ್ದು, ರೂ. 79.24 ಲಕ್ಷ ಲಾಭ ಹೊಂದಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡಲಾಗುವುದು ಎಂದು ಘೋಷಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ರಾಜೇಶ್ ನೆಕ್ಕಿಲ, ನಿರ್ದೇಶಕರಾದ ಗಂಗಾಧರ ಪಿ.ಎಸ್, ಯು.ವಿ ಭಾಸ್ಕರ ರಾವ್, ಸುರೇಶ್ ಎಂ.ಎಚ್, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಹರೀಶ್.ಎಂ.ಎಸ್, ಜಗದೀಶ್ ಕಕ್ಕೆಬೆಟ್ಟು, ಈಶ್ವರ ಆರ್.ಕಲ್ಟಾರ್, ಶ್ರೀಮತಿ ಲೀಲಾವತಿ ಬಿ, ಶ್ರೀಮತಿ ಶಾರದಾ ಡಿ.ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವಾರ್ಷಿಕ ವರದಿ ವಾಚಿಸಿದರು.
ಕು.ವಿಷ್ಣುಪ್ರಿಯ ಮತ್ತು ಕು.ವೈಷ್ಣವಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ರಾಜೇಶ್‌ ಭಟ್ ನೆಕ್ಕಿಲ ವಂದಿಸಿದರು.
ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಡು, ಸಿಬ್ಬಂದಿ ಶ್ರೀಮತಿ ರಮ್ಯ ಮತ್ತು ಗುರುವ ಸಹಕರಿಸಿದರು.
ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಸ.ಹಿಪ್ರಾ ಶಾಲೆ ಉಬರಡ್ಕ ಮಿತ್ತೂರು ಶಾಲೆಯಲ್ಲಿ ಪ್ರಥಮ ಸ್ಥಾನಿಯಾಗಿ ನೆಯ್ಯೋಣಿ ಮನೆ ಉಮೇಶ್ ರವರ ಪುತ್ರ ವಿಯಾಶ್ ಯು, ದ್ವಿತೀಯ ದೇರಾಜೆ ಮನೆ ಶಿವರಾಮ ಡಿ.ಎ ರವರ ಪುತ್ರ ಸುಶಾಂತ್ ಗೌಡ ಡಿ.ಎಸ್, ಸ.ಹಿ.ಪ್ರಾ.ಶಾಲೆ ಅಮೈಮಡಿಯಾರಿನಲ್ಲಿ ಪ್ರಥಮ ಸೂಂತೋಡು ಮನೆ ಸುಂದರ ರವರ ಪುತ್ರ ಕುಶಿತ್.ಎಸ್, ದ್ವಿತೀಯ ಬಡ್ಡೆಕಲ್ಲು ಮನೆ ರವಿಯವರ ಪುತ್ರಿ ರಂಜಿನಿ, ಸ.ಕಿ.ಪ್ರಾ ಶಾಲೆ ಕೊಡಿಯಾಲಬೈಲಿನ ಪ್ರಥಮ ಬೇರ್ಪಡ್ಕ ಮನೆ ರೋಹಿತ್ ರವರ ಪುತ್ರಿ ಸ್ಪರ್ಶ ಆರ್, ದ್ವಿತೀಯ ಕೊಡಿಯಾಲಬೈಲು ರಾಖೇಶ್ ಕೆ.ಎಸ್ ರವರ ಪುತ್ರಿ ಪ್ರಜಿತಾ ಕೆ.ಆರ್. ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading